Pradeep Eshwar: ಚಿಂತಾಮಣಿ ದೇವಾಲದ ಬಗ್ಗೆ ಗಂಭೀರ ಆರೋಪ: ನಾನು ದಲಿತರ ಪರ ಇರುವ ಶಾಸಕ ಎಂದಿದ್ಯಾಕೆ ಪ್ರದೀಪ್ ಈಶ್ವರ್!

Pradeep Eshwar: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ಅವರು ಮಾಡಿರುವ ಟ್ವೀಟ್‌ಗಳು ಭಾರೀ ರಾಜಕೀಯ ಚರ್ಚೆಗೂ ಕಾರಣವಾಗಿದೆ. ಆದರೆ, ಪ್ರದೀಪ್ ಈಶ್ವರ್ ಅವರು ಗಂಭೀರವಾದ ವಿಚಾರಗಳ ಬಗ್ಗೆಯೇ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರದೀಪ್ ಈಶ್ವರ್ ಅವರು ಮಾಡಿದ ಟ್ವೀಟ್‌ನಲ್ಲಿ ಏನಿದೆ, ಗಂಭೀರ ಚರ್ಚೆಗೆ ಕಾರಣವಾಗಿರುವುದು ಯಾಕೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿಕ್ಕಬಳ್ಳಾಪುರದ ವಿವಿಧ ಪ್ರದೇಶಗಳಲ್ಲಿ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಅವರು ಗಂಭೀರವಾದ ಆರೋಪ ಮಾಡಿದ್ದಾರೆ. ಚಿಂತಾಮಣಿ ತಹಶೀಲ್ದಾರ್ ಅವರಿಗೆ ನಮಸ್ಕಾರ, ಚಿಂತಾಮಣಿ ತಾಲೂಕಿನ ಹಲವು ಗ್ರಾಮಗಳಲ್ಲಿ ದಲಿತರಿಗೆ ದೇವಾಲಯದ ನಿರ್ಬಂಧವಿದೆ. ದಯವಿಟ್ಟು ತಾವು ಖುದ್ದು ಭೇಟಿ ಕೊಟ್ಟು, ದಲಿತರನ್ನು ಈ ಕೆಳಕಂಡ ದೇವಾಲಯಗಳಿಗೆ ಪ್ರವೇಶ ಕೊಡಿಸಬೇಕೆಂದು ವಿನಂತಿಸುತ್ತೆನೆ.

Pradeep Eshwar Temple Entry Row in Chintamani Why Did the MLA Call Himself Pro-Dalit

1) ಎಸ್ ರಾಗುಟ್ಲಹಳ್ಳಿ ಗ್ರಾಮ ಪಂಚಾಯ್ತಿಯ ರಾಗುಟ್ಲಹಳ್ಳಿಯಲ್ಲಿ ಶ್ರೀ ರಾಮನ ದೇವಸ್ಥಾನ.

2) ಕಡದಲಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಗಲ ಮರಿ ಗ್ರಾಮದಲ್ಲಿ ಸೀತ ಬೈರೇಶ್ವರ ದೇವಾಲಯ.

3) ಎಸ್ ರಾಗುಟ್ಲಹಳ್ಳಿ ಗ್ರಾಮ ಪಂಚಾಯಿತಿಯ ಬ್ರಾಹ್ಮನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನ.

4) ಎಂ ಗೊಲ್ಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ ಗೊಲ್ಲಹಳ್ಳಿಯಲ್ಲಿ ವೇಣುಗೋಪಾಲಸ್ವಾಮಿ ದೇವಸ್ಥಾನ.

ಹೀಗೆ ಚಿಂತಾಮಣಿ ತಾಲೂಕಿನಲ್ಲಿ ಹಲವಾರು ದೇವಾಲಯಗಳಿಗೆ ದಲಿತರಿಗೆ ನಿರ್ಬಂಧ ಮಾಡಲಾಗಿದೆ.

ಚಿಕ್ಕಬಳ್ಳಾಪುರದ ದಲಿತ ಬಾಂಧವರಿಗೆ ನಮಸ್ಕಾರ. ನಾನು ದಲಿತರ ಪರ ಇರುವ ಶಾಸಕ; ನಮ್ಮ ಕಾಂಗ್ರೆಸ್ ಪಕ್ಷ ದಲಿತರ ಪರ ನಿಂತಿದೆ. ದಲಿತರಗಾಗಿ ನಮ್ಮ ಪಕ್ಷ ನಿಷ್ಠೆ, ಮತ್ತು ದಲಿತರ ಭವಿಷ್ಯಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆ, ಮತ್ತು ಚಿಂತಾಮಣಿ ತಾಲ್ಲೂಕಿನ ಸಾಕಷ್ಟು ದೇವಾಲಯಗಳಿಗೆ, ಇಂದಿಗೂ ದಲಿತರಿಗೆ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ.

ನಾನು ಚಿಂತಾಮಣಿ ತಾಲ್ಲೂಕಿನ ಪ್ರತಿ ಹಳ್ಳಿಯ ದಲಿತರನ್ನು ವಿನಂತಿಸುತ್ತೇನೆ, ನಿಮ್ಮೂರಿನ ದೇವಾಲಯಕ್ಕೆ ನಿಮಗೆ ಪ್ರವೇಶ ನೀಡದಿದ್ದರೆ, ದಯವಿಟ್ಟು ನನ್ನ ಗಮನಕ್ಕೆ ತೆಗೆದುಕೊಂಡು ಬನ್ನಿ. ನಾನು ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ದೇವಾಲಯವನ್ನು ಪ್ರವೇಶಿಸುತ್ತೇನೆ. ಯಾವ ಪಟ್ಟಭದ್ರ ಹಿತಾಸಕ್ತಿಗಳು ತಡೆಯುತ್ತದೋ, ತಡೆಯಲಿ. ಚಿಂತಾಮಣಿಯ ದಲಿತ ಬಾಂಧವರೇ, ನಿಮ್ಮೊಂದಿಗೆ ನಾನಿದ್ದೇನೆ. ಯಾವ ದೊಣ್ಣೆ ನಾಯಕನಿಗೂ ಹೆದರುವ ಅವಶ್ಯಕತೆ ನನಗಿಲ್ಲ ಅಂತಲೂ ಶಾಸಕ ಪ್ರದೀಪ್ ಈಶ್ವರ್ ಅವರು ಹೇಳಿದ್ದಾರೆ.

ನಿಮ್ಮೊಂದಿಗೆ ನಾನಿದ್ದೇನೆ. ಯಾವ ದೊಣ್ಣೆ ನಾಯಕನಿಗೂ ಹೆದರುವ ಅವಶ್ಯಕತೆ ನನಗಿಲ್ಲ ಅಂತ ಹೇಳಿರುವ ಶಾಸಕ ಪ್ರದೀಪ್ ಈಶ್ವರ್ ಅವರು, ಹೆದರುವುದೂ ಇಲ್ಲ. ಕಂಬಾಲಪಲ್ಲಿ ನರಮೇಧಕ್ಕೆ ಕಾರಣವಾದವರಿಂದ ಪಾಠ ಕಲಿಯಬೇಕಾಗಿಲ್ಲ ಅಂತಲೂ ಹೇಳಿದ್ದಾರೆ.

ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ

ಇನ್ನು ನನ್ನ ಬಗ್ಗೆ ಮಾತಾಡೋದು ಸುಲಭ, ನನ್ನ ಸ್ಥಾನಕ್ಕೆ ಬರೋದು ಕಷ್ಟ ಅಂತ ಈಚೆಗೆ ಪ್ರದೀಪ್ ಈಶ್ವರ್ ಅವರು ಹೇಳಿದ್ದರು. ಚಿಂತಾಮಣಿಯ ದಲಿತ ಬಾಂಧವರಿಗೆ ನಮಸ್ಕಾರ, ಉಯ್ಯಲವಾಡಿ ದೇವಸ್ಥಾನಕ್ಕೆ ದಲಿತರಿಗೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿಷೇಧ ಹೇರಲಾಗಿತ್ತು. ನಾನು ಬರೆದ ಪತ್ರಕ್ಕೆ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರು ಸ್ಪಂದಿಸಿದ್ದಾರೆ. ಅವರಿಬ್ಬರಿಗೂ ನನ್ನ ಧನ್ಯವಾದಗಳು ಎಂದು ಈಚೆಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+