ಮೋದಿ ಮುರ್ದಾಬಾದ್ Vs ಜಿಂದಾಬಾದ್: ಟ್ವಿಟ್ಟರ್ ನಲ್ಲಿ ಮಾರಾಮಾರಿ
ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆಯ ವಿಚಾರದಲ್ಲಿ ಜಾತಿ ರಾಜಕಾರಣ ಚೆನ್ನಾಗಿ ವರ್ಕೌಟ್ ಆಗುತ್ತಿರುವ ಬೆನ್ನಲ್ಲೇ, ಪ್ರಧಾನಿ ಮೋದಿ ತೀವ್ರ ಮುಜುಗರಕ್ಕೀಡಾಗುವ ಘಟನೆ ಲಕ್ನೋದಲ್ಲಿ ಶನಿವಾರ (ಜ 22) ನಡೆದಿದೆ.
ಪ್ರಧಾನಿಯಾದ ನಂತರ ಇದೇ ಮೊದಲ ಬಾರಿಗೆ ಲಕ್ನೋಗೆ ಆಗಮಿಸಿದ ಮೋದಿ, ಅಂಬೇಡ್ಕರ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಾತನಾಡುತ್ತಿದ್ದ ವೇಳೆ, ಕೆಲವು ವಿದ್ಯಾರ್ಥಿಗಳು ಮೋದಿ ವಿರುದ್ದ ಘೋಷಣೆ ಕೂಗಲಾರಂಭಿಸಿದರು. (ತಾಯಿ ಮಗನನ್ನು ಕಳೆದುಕೊಂಡಿದ್ದಾಳೆ: ಮೋದಿ)
ದೇಶ, ವಿದೇಶದ ತನ್ನ ಭಾಷಣದ ವೇಳೆ ಮೋದಿ..ಮೋದಿ..ಮೋದಿ... ಎನ್ನುವ ಘೋಷಣೆಯಿಂದ ಪ್ರೇರೇಪಣೆಗೊಳ್ಳುತ್ತಿದ್ದ ಮೋದಿ, ಇಂದು ಮೋದಿ ಮುರ್ದಾಬಾದ್ ಎನ್ನುವ ಘೋಷಣೆ ಕೇಳಿ ಅವಕ್ಕಾದಾರು.
ಮೋದಿ ಮುರ್ದಾಬಾದ್.. ವಾಪಸ್ ಜಾವೋ.. ಎನ್ನುವ ವಿದ್ಯಾರ್ಥಿಗಳ ಘೋಷಣೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೇ, #NarendraModiMurdabad ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಲಾರಂಭಿಸಿತು.
ಪ್ರಧಾನಿ ಮೋದಿಯನ್ನು ಕೀಳುಮಟ್ಟದಲ್ಲಿ ಅಣಕಿಸುವ ಟ್ವೀಟ್ ಗಳು ಆ ಹ್ಯಾಷ್ ಟ್ಯಾಗ್ ನಲ್ಲಿ ಬರಲಾರಂಭಿಸುತ್ತಿದ್ದ ಒಂದೇ ಗಂಟೆಯಲ್ಲಿ #NarendraModiJindabad ಹ್ಯಾಷ್ ಟ್ಯಾಗಿಗೆ ಪ್ರವಾಹೋಪಾದಿಯಲ್ಲಿ ಟ್ವೀಟ್ ಹರಿದುಬಂದು ಈ ಹ್ಯಾಷ್ ಟ್ಯಾಗ್ ಮೇಲುಗೈ ಸಾಧಿಸಿತು. (ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ)
ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮೋದಿ ಪರವಾದ ಟ್ವೀಟುಗಳು ಜಿಂದಾಬಾದ್ ಟ್ಯಾಗ್ ನಲ್ಲಿ ಬೀಳಲಾರಂಭಿಸಿದವು. ಎರಡು ಗಂಟೆಯಲ್ಲಿ ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಟ್ವೀಟುಗಳು ಮೋದಿ ಪರವಾಗಿ ಬಿದ್ದಿದ್ದವು.
ಕೆಲವೊಂದು ಟ್ವೀಟ್ ಸ್ಯಾಂಪಲ್ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
|
ಮೋದಿ ಬೆಂಬಲಿಸುವ ಟ್ವೀಟ್
ಭಾರತ ಯಾವತ್ತಿಗೂ ಮೋದಿ ಬೆನ್ನಿಗೆ ನಿಂತಿರುತ್ತದೆ.
|
ಮೋದಿ ಬೆಂಬಲಿಸುವ ಮತ್ತೊಂದು ಟ್ವೀಟ್ ಹೀಗಿದೆ
ಇಡೀ ಜಗತ್ತು ನಿಮ್ಮ ನೇತೃತ್ವದಲ್ಲಿ ಭಾರತ ಒಂದು ಶಕ್ತಿಶಾಲಿ ರಾಷ್ಟ್ರವಾಗುತ್ತಿರುವುದನ್ನು ನೋಡುತ್ತಿದೆ. ಥ್ಯಾಂಕ್ಯೂ ಮೋದಿಜೀ.
|
ರೋಹಿತ್ ಬಗ್ಗೆ ಮಾತನಾಡಲಾರಂಭಿಸಿದ ಮೋದಿ
ಮೋದಿ ಮುರ್ದಾಬಾದ್ ಎನ್ನುವ ಘೋಷಣೆ ಬರುತ್ತಿದ್ದಂತೆಯೇ, ಮೋದಿ ರೋಹಿತ್ ಬಗ್ಗೆ ಮಾತನಾಡಲಾರಂಭಿಸಿ, ಭಾವೋದ್ವೇಗಕ್ಕೊಳಗಾಗುವ ನಾಟಕವಾಡಿದ್ದಾರೆ.
|
ಭಕ್ತರು ಸನ್ನದ್ದರಾಗಿದ್ದಾರೆ
ಭಕ್ತರು ಡ್ಯಾಮೇಜ್ ಕಂಟ್ರೋಲಿಗೆ ಸಜ್ಜಾಗಿದ್ದಾರೆ, ಆದರೆ #NarendraModiMurdabad ಈಗಾಗಲೇ ಸಾಕಷ್ಟು ಡ್ಯಾಮೇಜ್ ಮಾಡಿಯಾಗಿದೆ.
|
ಘನತೆ ಕಳೆದುಕೊಂಡ ಮೋದಿ
ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಮೋದಿ ತನ್ನ ಘನತೆ ಕಳೆದುಕೊಂಡಿದ್ದಾರೆ.
|
ಮೋದಿ ವಿರೋಧಿಗಳಿಗೆ ಮುಖಭಂಗ
ಮೋದಿ ವಿರೋಧಿಗಳಿಗೆ ಸರಿಯಾದ ಮುಖಭಂಗವಾಗಿದೆ, ಮೂವತ್ತು ಸಾವಿರಕ್ಕೂ ಹೆಚ್ಚು ಟ್ವೀಟ್ ಗಳು ಒಂದು ಗಂಟೆಯಲ್ಲಿ ಬಂದಿದೆ.
|
ಚಿಕನ್ ನೆನಪಾಗುತ್ತದೆ
ಭಕ್ತರು ಮೋದಿ ಜಿಂದಾಬಾದ್ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಮಾಡೋದನ್ನು ನೋಡಿದರೆ ನನಗೆ ಈ ಕೋಳಿ ನೆನಪಾಗುತ್ತದೆ.

ಮೋದೀಜಿ ಮುನ್ನುಗ್ಗಿ
ಮೋದೀಜಿ ಮುನ್ನುಗಿ, ನಾವು ನಿಮ್ಮ ಜೊತೆಗಿದ್ದೇವೆ. ಭಾರತೀಯರೆಲ್ಲರೂ ನಿಮ್ಮ ಜೊತೆಗಿದ್ದಾರೆ. ದೇಶಕ್ಕಾಗಿ ಒಳ್ಳೆಯದನ್ನು ಮಾಡಿ.
|
ಭಕ್ತರೇ ನಿಜ ಹೇಳಿ
ನಿಜ ಹೇಳಿ ಭಕ್ತರೇ.. ಮೋದಿ ಮುರ್ದಾಬಾದ್ ಘೋಷಣೆ ಕೇಳಿ ನಿಮಗೆ ಉರಿದಿರಬೇಕಲ್ವಾ..
|
ನೀವೇ ಎಷ್ಟೇ ಕೂಗಾಡಿ
ವಿರೋಧಿಗಳು ಎಷ್ಟೇ ಕೂಗಾಡಿದರೂ, ಮೋದಿ ದೇಶ ಕಂಡ ಅತ್ಯುತ್ತಮ ಪ್ರಧಾನಿ












Click it and Unblock the Notifications