ವಿಜಯನಗರದ ಪರಿವರ್ತನಾ ಯಾತ್ರೆಯಲ್ಲಿ ಮೋದಿ ಮೋಡಿ!

Posted By:
Subscribe to Oneindia Kannada

ಬೆಂಗಳೂರು, ಜನವರಿ 07: ಬಿಜೆಪಿ ಪರಿವರ್ತನಾ ಯಾತ್ರೆ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಮುಖ ಆಕರ್ಷಣೆಯಾಗಿದ್ದರೆ, ವೇದಿಕೆಯ ಹೊರಗಡೆ ಪ್ರಧಾನಿ ಮೋದಿ ಅವರನ್ನು ಹೋಲುವ ವ್ಯಕ್ತಿಯೊಬ್ಬರು ಮೋಡಿ ಮಾಡಿದರು.

ವಿಜಯನಗರದ ಎಂ.ಸಿ.ಎ ಲೇಔಟ್ ನಲ್ಲಿರುವ ಬಿ.ಜಿ.ಎಸ್ ಆಟದ ಮೈದಾನದಲ್ಲಿ ಈ ಬೃಹತ್ ಸಾರ್ವಜನಿಕ ಸಭೆ ಯಶಸ್ವಿಯಾಗಿದ್ದು, ಯೋಗಿ ಆದಿತ್ಯನಾಥ್ ಅವರು ಎಂದಿನಂತೆ ತಮ್ಮ ಭಾಷಣದ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಚುರುಕು ಮುಟ್ಟಿಸಿದರು.

Modi lookalike attracts crowd at BJP Rally Vijayanagar Bengaluru

ಇದಕ್ಕೂ ಮುನ್ನ ವೇದಿಕೆಯ ಹೊರ ಭಾಗದಲ್ಲಿ ವಿಜಯನಗರದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ವ್ಯಕ್ತಿಯೊಬ್ಬರ ಜತೆ ಮೆರವಣಿಗೆ ಸಾಗಿತ್ತು.

ಬೆಂಗಳೂರಿನಲ್ಲಿ ಬಿಜೆಪಿ ಸಮಾವೇಶಕ್ಕೆ ಯೋಗಿ ಆದಿತ್ಯನಾಥ್ ಚಾಲನೆ

ಪ್ರಧಾನಿ ಮೋದಿ ಅವರು ನಮ್ಮ ಮನೆ ಮುಂದೆ ಬಂದಿದ್ದಾರೆ ಎಂಬ ಸಂತಸದಿಂದ ಬಂದು ನೋಡಿದ ಸಾರ್ವಜನಿಕರು, ಮೋದಿ ಹೋಲುವ ವ್ಯಕ್ತಿಯ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

PM Modi lookalike attracts crowd at BJP Rally Vijayanagar Bengaluru

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ಅವರನ್ನು ಹೋಲುವ ವ್ಯಕ್ತಿಗಳನ್ನು ಚುನಾವಣೆ ಪ್ರಚಾರಕ್ಕಾಗಿ ಬಳಸಲು ಆರಂಭಿಸಲಾಯಿತು. ಮೋದಿ ಹೋಲುವ ಸುಮಾರು 10ಕ್ಕೂ ಅಧಿಕ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಮೋದಿಯಂತೆ ಭಾಷಣ ಮಾಡುವ ಚಿಣ್ಣರು ಕೂಡಾ ಜನಪ್ರಿಯತೆ ಗಳಿಸುತ್ತಿದ್ದಾರೆ.

ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ

ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ, 12 ಗಂಟೆಗೆ ಆರಂಭವಾಯಿತು. ಸಾರ್ವಜನಿಕರು ಶಾಂತ ರೀತಿಯಿಂದ ನಾಯಕರ ಭಾಷಣಕ್ಕಾಗಿ ಕಾದು ಕುಳಿತ್ತಿದ್ದರು.

PM Modi lookalike attracts crowd at BJP Rally Vijayanagar Bengaluru

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಡಿ.ವಿ ಸದಾನಂದ ಗೌಡ, ಬಿಜೆಪಿ ನಾಯಕರಾದ ಈಶ್ವರಪ್ಪ, ಆರ್.ಅಶೋಕ್, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾಗವಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Narendra Modi lookalike attracted crowd at BJP Rally Vijayanagar Bengaluru. People throng to take selfie with Modi lookalike. Uttar Pradesh CM Yogi Adityanath today(January 07) attended Jana parivarthana rally.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ