Petrol, Diesel Prices down: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ!
ವಾಹನ ಸವಾರರಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ವಾಹನ ಸವಾರರು ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಎನ್ನುವ ಸುದ್ದಿಯನ್ನು ಕೇಳಿಯೇ ಹಲವು ತಿಂಗಳು ಕಳೆದಿವೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗುವ ಮುನ್ಸೂಚನೆ ಸಿಕ್ಕಿದೆ. ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 3 ರೂಪಾಯಿ ಹೆಚ್ಚಿಸುವ ಮೂಲಕ ಶಾಕ್ ನೀಡಿತ್ತು. ಇದೀಗ ವಾಹನ ಸವಾರರು ಖುಷಿಪಡುವಂತಹ ಸುದ್ದಿ ಬಂದಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಹಾಗೂ ಇಳಿಕೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರಧಾನ ಅಂಶವಾಗಿದೆ. ಇದು ಇದೇ ರೀತಿ ಮುಂದುವರಿಯುತ್ತಿದ್ದರೆ, ಮುಂದಿನ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಯಾಗುವುದರಲ್ಲಿ ಅನುಮಾನವಿಲ್ಲ. ಇನ್ನು ಸಂತೋಷದ ಸಂಗತಿಯೆಂದರೆ 2021ರ ಡಿಸೆಂಬರ್‌ನ ನಂತರ ಇದೇ ಮೊದಲ ಬಾರಿ ಎನ್ನುವಂತೆ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೆಲದ ಬೆಲೆ ಪ್ರತಿ ಬ್ಯಾರಲ್‌ಗೆ 70 ಡಲರ್‌ನಷ್ಟು ಇಳಿಕೆಯಾಗಿರುವುದು ವರದಿಯಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಇಳಿಯುತ್ತೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿರುವುದರಿಂದ ಭಾರತದಲ್ಲೂ ತೈಲ ಬೆಲೆ ಇಳಿಕೆ ಸಿದ್ಧತೆ ನಡೆದಿದೆ. ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯವು ಸಹ ಇದನ್ನು ಪರೋಕ್ಷವಾಗಿ ಖಚಿತಪಡಿಸಿದೆ. ಅಂತರರಾಷ್ಟ್ರಯ ಮಟ್ಟದಲ್ಲಿ ಕಚ್ಚಾ ತೈಲದ ವಿಷಯದಲ್ಲಿ ಇದೇ ಬೆಳವಣಿಗೆ ಮುಂದುವರಿದರೆ, ಆ ಆಧಾರದ ಮೇಲೆ ಇಂಧನ ಬೆಲೆಯನ್ನು (ಪರಿಷ್ಕರಣೆ) ಇಳಿಸುವುದಕ್ಕೆ ತೈಲ ಕಂಪನಿಗಳು ಕ್ರಮ ವಹಿಸಲಿವೆ ಎಂದು ಹೇಳಲಾಗಿದೆ. ಈ ಮೂಲಕ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವುದು ಬಹುತೇಕ ಖಚಿತವಾದಂತಾಗಿದೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಅಲ್ಲದಿದ್ದರೂ, 2 ರೂಪಾಯಿ ಇಳಿಸುವ ಸಾಧ್ಯತೆ ಇದೆ.
ಚುನಾವಣೆಯೂ ಕಾರಣ ಬೆಲೆ ಇಳಿಕೆ ?
ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸುವುದಕ್ಕೆ ಮುಖ್ಯವಾಗಿ ದೇಶದ ವಿವಿಧ ಭಾಗದಲ್ಲಿ ಚುನಾವಣೆ ಸನ್ನಿಹಿತವಾಗಿರುವುದು ಸಹ ಕಾರಣ ಎಂದು ವಿಶ್ಲೇಷಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರಮುಖ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಮಹಾರಾಷ್ಟ್ರ, ಹರಿಯಾಣ ಹಾಗೂ ಜಮ್ಮು - ಕಾಶ್ಮೀರ ಪ್ರಮುಖವಾಗಿವೆ. ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿಗೆ ಟಫ್ ಫೈಟ್ ಇದೆ. ಇನ್ನು ಜಮ್ಮು - ಕಾಶ್ಮೀರದಲ್ಲಿ ಬಿಜೆಪಿಗೆ ಹೇಳಿಕೊಳ್ಳವಂತಹ ರಾಜಕೀಯ ಪರಿಸ್ಥಿತಿ ಏನು ಇಲ್ಲ. ಹೀಗಾಗಿ, ಕೇಂದ್ರ ಸರ್ಕಾರವು ಸಹ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಮುತುವರ್ಜಿ ವಹಿಸಲಿದೆ ಎನ್ನಲಾಗಿದೆ. ಯಾಕೆಂದರೆ ಈ ಹಿಂದೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಅದರ ಲಾಭವನ್ನು ತೈಲ ಕಂಪನಿಗಳು ಗ್ರಾಹಕರಿಗೆ ನೀಡಿರಲಿಲ್ಲ. ಇದಕ್ಕೆ ಆಕ್ಷೇಪವೂ ಸಹ ವ್ಯಕ್ತವಾಗಿತ್ತು. ಇದೀಗ ಚುನಾವಣೆಗೆ ಕೆಲವೇ ದಿನಗಳಿರುವುದರಿಂದ ಸಹಜವಾಗಿಯೇ ಬೆಲೆ ಇಳಿಕೆ ಖಚಿತ ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆ ಸಮಯದಲ್ಲಿ ಇಳಿಕೆ
ಕೇಂದ್ರ ಸರ್ಕಾರವು ಲೋಕಸಭೆ ವೇಳೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿತ್ತು. ಎರಡೂ ತೈಲಗಳ ಮೇಲೆ ತಲಾ 2 ರೂಪಾಯಿ ಇಳಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತಲಾ 3 ರೂಪಾಯಿ ಹೆಚ್ಚಳ ಮಾಡಿ ವಾಹನ ಸವಾರರಿಗೆ ಶಾಕ್ ನೀಡಿತ್ತು. ಇದಕ್ಕೆ ರಾಜ್ಯ ಸರ್ಕಾರ ನೀಡಿದ ಉದಾ ದಕ್ಷಿಣ ಭಾರತದ ಉಳಿದ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ ಎನ್ನುವುದು.












Click it and Unblock the Notifications