ಓಯೋ ರೂಂ ಬುಕಿಂಗ್ ಹೊಸ ರೂಲ್ಸ್ ವಿರುದ್ಧ ರೊಚ್ಚಿಗೆದ್ದ ಪ್ರೇಮಿಗಳಿಂದ... OYO Rooms
ಓಯೋ ರೂಂ ಬುಕಿಂಗ್ ಮಾಡುವುದು ಈಗಿನ ಹೊಸ ಟ್ರೆಂಡ್ ಅಂತಾ ಹೇಳಬಹುದು. ಈ ವಿಚಾರದಲ್ಲಿ ಹಲವು ಕಾರಣಕ್ಕೆ 'ಓಯೋ ರೂಂ' ಬುಕಿಂಗ್ ಮಾಡುತ್ತಾರೆ ಜನ. ಈ ಮೊದಲು ಯಾವುದಾದರೂ ಊರಿಗೆ ಟೂರ್ ಹೋಗಿದ್ದರೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಹೋಟೆಲ್ ರೂಂ ಬುಕ್ ಮಾಡಬೇಕಿತ್ತು ಜನ. ಆದರೆ 'ಓಯೋ ರೂಂ' ಮೂಲಕ ಕೇವಲ 500 ರಿಂದ 700 ರೂಪಾಯಿಗೆ ರೂಂ ಬುಕ್ ಮಾಡಬಹುದು.
'ಓಯೋ ರೂಂ' ಬುಕಿಂಗ್ ಮಾಡುವ ಜನರಿಗೆ ಡಿಸ್ಕೌಂಟ್ & ಅತ್ಯುತ್ತಮ ಹೋಟೆಲ್ ಕೇವಲ 500 ರಿಂದ 700 ರೂಪಾಯಿಗೆ ಸಿಗುತ್ತಿದೆ ಎಂಬುದೆ ಖುಷಿಯ ಸುದ್ದಿ ಆಗಿತ್ತು. ಹೀಗಾಗಿ ಸುಮಾರು 10 ವರ್ಷಗಳಲ್ಲಿ ಜಗತ್ತಿನಾದ್ಯಂತ ಹೆಸರು ಮಾಡಿದೆ 'ಓಯೋ ರೂಂ'. ಅದರಲ್ಲೂ ಪ್ರೇಮಿಗಳ ಪಾಲಿಗೆ 'ಓಯೋ ರೂಂ' ಬುಕ್ ಮಾಡುವುದು ಅತ್ಯಂತ ಖುಷಿಯ ವಿಚಾರ ಆಗಿತ್ತು. ಆದರೆ ಹೀಗಿದ್ದಾಗಲೇ, ಓಯೋ ರೂಂ ಬುಕಿಂಗ್ ಹೊಸ ರೂಲ್ಸ್ ವಿರುದ್ಧ ರೊಚ್ಚಿಗೆದ್ದ ಪ್ರೇಮಿಗಳಿಂದ....

ಓಯೋ ವಿರುದ್ಧ ರೊಚ್ಚಿಗೆದ್ದ ಪ್ರೇಮಿಗಳಿಂದ...
ಓಯೋ.. ಓಯೋ.. ಓಯೋ.. ಹಿಂಗೆ ಯಾರಾದ್ರೂ ಹೋಟೆಲ್ ರೂಂ ಬುಕಿಂಗ್ ಮಾಡೋಕೆ ಕೇಳಿದರೆ ಇದೊಂದೇ ಹೆಸರು ಪಠಣ ಮಾಡುತ್ತಾರೆ. ಅದ್ರಲ್ಲೂ, ಚಿಕ್ಕ ವಯಸ್ಸಿನಲ್ಲೇ ಈ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ ಓಯೋ ಸಂಸ್ಥೆಯ ಮಾಲೀಕರು. ಇಡೀ ಭಾರತವೇ ಈಗ ಜಾಗತಿಕ ಮಟ್ಟದಲ್ಲಿ ಹೋಟೆಲ್ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲು ಕಾರಣವಾಗಿದೆ 'ಓಯೋ' ಅಂತಾ ಕೂಡ ಹೇಳಬಹದು. ಹೀಗಿದ್ದಾಗಲೇ, ಓಯೋ ರೂಂ ಬುಕಿಂಗ್ ಹೊಸ ರೂಲ್ಸ್ ವಿರುದ್ಧ ರೊಚ್ಚಿಗೆದ್ದ ಪ್ರೇಮಿಗಳಿಂದ...
ಪ್ರೇಮಿಗಳು ರೊಚ್ಚಿಗೇಳಲು ಕಾರಣ ಏನು?
ಈ ಮೊದಲು 'ಓಯೋ ರೂಮ್ಸ್' ಹೋಗಲು ಮದುವೆ ಆಗದೇ ಇದ್ದರೂ ಓಕೆ ಎಂಬಂತೆ ಇತ್ತು. ಆದ್ರೆ ಈಗ ಉತ್ತರಪ್ರದೇಶ ಮೀರತ್‌ನಲ್ಲಿ ಓಯೋ ರೂಮ್ಸ್ ಬುಕ್ ಮಾಡುವವರು ಕಡ್ಡಾಯವಾಗಿ ತಾವು ಮದುವೆ ಆಗಿರುವ ದಾಖಲೆ ತರಬೇಕು, ಎಂಬ ರೂಲ್ಸ್ ಹಾಕಲಾಗಿದೆ ಎಂಬ ಸುದ್ದಿ ಹಬ್ಬಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು.
ಇಷ್ಟೆಲ್ಲದರ ನಡುವೆ ಇಡೀ ಇಂಡಿಯಾ ಪೂರ್ತಿ ಈ ರೀತಿ ಮದುವೆ ಆಗದ ಜೋಡಿಗಳಿಗೆ ಓಯೋ ರೂಮ್ಸ್ ಬುಕ್ ಮಾಡಲು ಅವಕಾಶ ಕೊಡದಂತೆ ಸಿಕ್ಕಾಪಟ್ಟೆ ಕಂಪ್ಲೇಂಟ್ ಬಂದಿವೆ ಎನ್ನುವಂತೆ ಸುದ್ದಿ ಹಬ್ಬಿದೆ. ಹೀಗಾಗಿ 'ಓಯೋ ರೂಮ್ಸ್' ಇನ್ನು ಮುಂದೆ ಮದುವೆ ಆಗದ ಜೋಡಿಗಳಿಗೆ ಸಿಗಲ್ಲ ಎಂಬ ವದಂತಿ ಹರಡಿದ್ದು, ಪ್ರೇಮಿಗಳ ದಿನಾಚರಣೆಗೆ ಮೊದಲು ಲವರ್ಸ್ ರೊಚ್ಚಿಗೆದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಜೊರು ಜೋರಾಗಿದೆ.












Click it and Unblock the Notifications