Onion price: 80 ರೂಪಾಯಿ ದಾಟಿರುವ ಈರುಳ್ಳಿ ಜನವರಿಯಲ್ಲಿ ಎಷ್ಟಾಗುತ್ತದೆ ಗೊತ್ತಾ?-ಈ ಮಾಹಿತಿ ಪಡೆಯಿರಿ
ನವದೆಹಲಿ, ಡಿಸೆಂಬರ್, 11: ಕಳೆದ ತಿಂಗಳಷ್ಟೇ ಟೊಮೆಟೋ ಬೆಲೆ ಗಗನಕ್ಕೇರಿದ್ದು, ಕೆಲವು ದಿನಗಳ ನಂತರ ಬೆಲೆ ಕುಸಿದಿತ್ತು. ಮತ್ತೊಂದೆಡೆ ಈರುಳ್ಳಿ ಬೆಲೆ ಕೂಡ ಕೆಲವು ದಿನಗಳಿಂದ ಏರಿಕೆಯಾಗಿದ್ದು, ಈ ಬೆಲೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗಾದರೆ ಆ ಕ್ರಮಗಳು ಯಾವುವು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನೆರಡು ತಿಂಗಳಲ್ಲಿ ಅದರ ಬೆಲೆ ತುಂಬಾ ಕಡಿಮೆಯಾಗುವ ನಿರೀಕ್ಷೆಯಿದೆ. ಇನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಜನವರಿ ತಿಂಗಳೊಳಗೆ ಕೆ.ಜಿ. ಈರುಳ್ಳಿ ಬೆಲೆ 40 ರೂಪಾಯಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಸದ್ಯ ಇದೀಗ 80 ರೂಪಾಯಿ ಆಸುಪಾಸಿನಲ್ಲಿದೆ.

ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈರುಳ್ಳಿ ದರ ಕೆ.ಜಿಗೆ. 80 ದಾಟಿದ್ದರಿಂದ ಮುಂದಿನ ವರ್ಷ ಮಾರ್ಚ್ ರಫ್ತು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿತ್ತು. ಇನ್ನು ಜನವರಿಯಲ್ಲಿ ಈರುಳ್ಳಿ ದರ ಕೆ.ಜಿ.ಗೆ 40 ರೂಪಾಯಿಗಿಂತ ಕೆಳಗಿಳಿಯುವ ಸಾಧ್ಯತೆ ಹೆಚ್ಚಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಮತ್ತೊಂದೆಡೆ ಕೆಲವರು ಕೆ.ಜೆ. ಈರುಳ್ಳಿ 100 ಮುಟ್ಟುತ್ತದೆ ಅಂತಾ ಹೇಳುತ್ತಿದ್ದಾರೆ. 60 ದಾಟುವುದಿಲ್ಲ ಎಂದು ನಾವು ಹೇಳಿದ್ದೆವು. ಸದ್ಯ ಇಡೀ ದೇಶದ ಸರಾಸರಿ ಇಂದು ಬೆಳಗ್ಗೆ 57.02 ಇದೆ. ಇದು 60 ದಾಟುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಈರುಳ್ಳಿ ರಫ್ತು ನಿಷೇಧದಿಂದ ಸಣ್ಣ ರೈತರಿಗೆ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಭಾರತದ ಹಾಗೂ ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಮಾರಾಟಗಾರರು ದರ ವ್ಯತ್ಯಾಸ ಮಾಡಿ ದೌರ್ಜನ್ಯ ಮಾಡುತ್ತಿದ್ದರು. ರಫ್ತು ನಿಷೇಧದಿಂದ ದೌರ್ಜನ್ಯ ಮಾಡುತ್ತಿರುವವರು ನಷ್ಟ ಅನುಭವಿಸುತ್ತಿದ್ದಾರೆ. ಭಾರತದ ಗ್ರಾಹಕರಿಗೆ ಲಾಭ ಆಗಲಿದೆ ಎಂದು ತಿಳಿಸಿದ್ದಾರೆ.
ಖಾರಿಫ್ ಬೆಳೆಯಲ್ಲಿ ಈರುಳ್ಳಿ ಉತ್ಪಾದನೆ ಕುಸಿದಿದ್ದರಿಂದ ದರ ಏರಿಕೆಯಾಗಿದೆ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ. ಈ ಆರ್ಥಿಕ ವರ್ಷದ ಏಪ್ರಿಲ್ 1ರಿಂದ ಆಗಸ್ಟ್ 4ರವರೆಗೆ 9.75 ಲಕ್ಷ ಟನ್‌ಗಳಷ್ಟು ಈರುಳ್ಳಿ ರಫ್ತು ಮಾಡಲಾಗಿದೆ. ಬಾಂಗ್ಲಾದೇಶ, ಮಲೇಷ್ಯಾ ಹಾಗೂ ಯುಎಇಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ರಫ್ತಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಎರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಗಗನಕ್ಕೇರಿತ್ತು. ಈ ಹಿನ್ನೆಲೆ ಸರ್ಕಾರ ಈರುಳ್ಳಿ ವಿಚಾರದಲ್ಲಿ ಮುಂಚಿತವಾಗಿ ಎಚ್ಚೆತ್ತುಕೊಂಡಿದ್ದು, ಈರುಳ್ಳಿ ಮೇಲಿದ್ದ ಕನಿಷ್ಠ ರಫ್ತು ಬೆಲೆಯ ನಿರ್ಬಂಧದ ಬದಲು ಇಡೀ ಈರುಳ್ಳಿ ರಫ್ತನ್ನೇ ನಿಷೇಧಿಸಿದೆ. 2024ರ ಮಾರ್ಚ್ ತಿಂಗಳವರೆಗೂ ಈರುಳ್ಳಿ ರಫ್ತು ನಿಷೇಧ ಆಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ತಜ್ಞರ ಪ್ರಕಾರ ಈರುಳ್ಳಿ ರಫ್ತನ್ನು ಸರ್ಕಾರ ನಿಷೇಧ ಮಾಡಿದ್ದರಿಂದ ಬೆಳೆಗಾರರಿಗೆ ಯಾವೂದೇ ಪರಿಣಾಮ ಬೀರುವುದಿಲಗಲ. ಕೆಲವೇ ವರ್ತಕರು ಈರುಳ್ಳಿ ಸಂಗ್ರಹ ಇಟ್ಟುಕೊಂಡು ರಫ್ತಿನ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ರಫ್ತು ನಿಷೇಧದಿಂದ ಈರುಳ್ಳಿ ಬೆಲೆ ಕಡಿಮೆ ಆಗಿ, ಸಾಮಾನ್ಯ ಗ್ರಾಹಕರಿಗೆ ಲಾಭ ಆಗಲಿದೆ. ಇನ್ನು ಈಗಾಗಲೇ ಕೆಲವು ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಕೆ.ಜಿ.ಈರುಳ್ಳಿ ಬೆಲೆ 40, 50, 60, 80 ಹೀಗೆ ಇದೆ. ಇನ್ನು 2024 ಜನವರಿಯೊಳಗೆ 40ರೊಳಗೆ ಆಗಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.












Click it and Unblock the Notifications