ಬೀದರ್: ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ, ಕಾರ್ಮಿಕ ಸಾವು
ಬೀದರ್, ಜೂನ್ 09 : ಇಲ್ಲಿನ ಹುಮನಾಬಾದ್ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ತಡರಾತ್ರಿ ಬಾಯ್ಲರ್ ಸ್ಫೋಟಗೊಂಡಿದೆ.
ಬಾಯ್ಲರ್ ಸ್ಫೋಟಗೊಂಡ ಹಿನ್ನಲೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ವೆಂಕಟೇಶ್ (40) ಎನ್ನುವ ಕಾರ್ಮಿಕ ಮೃತಪಟ್ಟಿದ್ದಾನೆ.[ಅನೈತಿಕ ಸಂಬಂಧ : ಬೀದರ್ ನಲ್ಲಿ ನವವಧುವಿನ ಹತ್ಯೆ]
Karnataka: One killed in boiler explosion in a chemical factory in Bidar district's Humnabad, last night. pic.twitter.com/P1BuoupWaO
— ANI (@ANI_news) June 9, 2017
ಈತನ ಜತೆ ಎಂಟು ಜನ ಕೆಲಸ ನಿರ್ವಹಿಸುತ್ತಿದ್ದರು. ಸ್ಫೋಟಗೊಳ್ಳುವ ಸಂದರ್ಭದಲ್ಲಿ ಅವರೆಲ್ಲ ಕಾರ್ಖಾನೆಯ ಹೊರಗೆ ಇದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಯ್ಲರ್ ಸ್ಫೋಟಗೊಂಡ ತಕ್ಷಣದಲ್ಲಿ ಬೆಂಕಿ ಇಡೀ ಕಾರ್ಖಾನೆಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.












Click it and Unblock the Notifications