ಅನೈತಿಕ ಸಂಬಂಧ : ಬೀದರ್ ನಲ್ಲಿ ನವವಧುವಿನ ಹತ್ಯೆ
ಬೀದರ್, ಜೂನ್ 07 : ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಸುಖವಾಗಿ ಬಾಳುವ ಕನಸು ಕಂಡಿದ್ದ ನವ ವಧುವನ್ನು ಆಕೆಯ ಅತ್ತೆ, ಮಾವ, ಗಂಡ ಸೇರಿ ಕೊಲೆ ಮಾಡಿದ್ದಾರೆ.
ಈ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಲ್ಲೂರ್ ತಾಂಡಾದಲ್ಲಿ ನಡೆದಿದೆ. 19 ವರ್ಷದ ದೀಪಾ ಕೊಲೆಯಾದ ದುರ್ದೈವಿ.

ಗಂಡ ದಿಲೀಪ್, ಅತ್ತೆ ಶೂಲಾಬಾಯಿ ಹಾಗೂ ಮಾವ ಸೋಮಲ್ಲಾ ಪವಾರ ಸೇರಿಕೊಂಡು ಹಾಡಹಗಲೇ ದೀಪಾಳನ್ನು ಹೊಡೆದು ಕೊಲೆ ಮಾಡಿ ಹೊಲದ ಬಾವಿಯಲ್ಲಿ ಬಿಸಾಡಿದ್ದಾರೆ. ಕಳೆದ ಮೇ 29ರಂದು ಕಲ್ಲೂರ್ ತಾಂಡಾದಲ್ಲಿ ದೀಪಾ ಹಾಗೂ ದಿಲೀಪ್ ಮದುವೆಯಾಗಿತ್ತು.
ಸಂಬಂಧಿಯೊಬ್ಬರ ಜತೆ ಮಾತನಾಡುತ್ತಿದ್ದಕ್ಕೆ ಅನೈತಿಕ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆ ಮಾಡಲಾಗಿದೆ ಎಂದು ದೀಪಾ ಸಹೋದರ ಪ್ರವಿಣ್ ಜಾಧವ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ದಿಲೀಪ್ ಪವಾರ್ ನನ್ನ ಪೊಲೀಸರು ಬಂಧಿಸಿದ್ದು, ಆತನ ತಂದೆ-ತಾಯಿ ಪರಾರಿಯಾಗಿದ್ದಾರೆ.












Click it and Unblock the Notifications