Karnataka Election: 2018ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಯಾರದ್ದಾಗಿತ್ತು ಮೇಲುಗೈ?

ಹಳೇ ಮೈಸೂರು ಭಾಗ ಅಥವಾ ಕಾವೇರಿ ಜಲಾಯನ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆಯಿದ್ದರೆ, ಕೆಲವೊಂದು ಕಡೆ ತ್ರಿಕೋಣ ಸ್ಪರ್ಧೆಯ ಮೇಲಾಟಕ್ಕೆ ಹಲವು ವಿಧಾನಸಭಾ ಚುನಾವಣೆಗಳು ಸಾಕ್ಷಿಯಾಗಿವೆ. ಹಾಗಾಗಿ, ಈ ಬಾರಿಯ ಚುನಾವಣೆಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ರಾಜಕಾರಣ ಒಂದು ರೀತಿಯಾದರೆ ಮಂಡ್ಯ, ಮೈಸೂರು ರಾಜಕಾರಣ ಇನ್ನೊಂದು ರೀತಿ ಎಂದೇ ವಿಶ್ಲೇಷಿಸಲಾಗುತ್ತಿದೆ. ಜಿದ್ದಿನ ರಾಜಕಾರಣಕ್ಕೆ ಹೆಸರಾಗಿರುವ ಈ ಭಾಗದಲ್ಲಿ ಜಾತಿ ಲೆಕ್ಕಾಚಾರ ಮತ್ತು ಅದರ ಸುತ್ತಮುತ್ತಲಿನ ವಿದ್ಯಮಾನಗಳೇ ಪ್ರಮುಖವಾಗಿರುತ್ತದೆ. ಒಕ್ಕಲಿಗ ಸಮುದಾಯದ ಹೆಚ್ಚಾಗಿರುವ ಪ್ರದೇಶಗಳು ಇವಾಗಿವೆ.

Old Mysuru Belt 2018 Assembly Elections, Parties Triangular Contest

ಅಪಾರ ಶಿಷ್ಯಂದಿರು ಮತ್ತು ಭಕ್ತರನ್ನು ಹೊಂದಿರುವ ಸುತ್ತೂರು, ಆದಿಚುಂಚನಗಿರಿ, ಸಿದ್ದಗಂಗಾ ಮುಂತಾದ ಪ್ರಭಾವೀ ಮಠಗಳು ಹಳೇ ಮೈಸೂರು ಭಾಗದ ವ್ಯಾಪ್ತಿಗೆ ಬರುತ್ತದೆ. ರಾಜ್ಯದ ಎಲ್ಲಾ ರಾಜಕೀಯ ನಾಯಕರು ಈ ಮಠಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.

ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು ಹಳೇ ಮೈಸೂರು ಭಾಗಕ್ಕೆ ಸೇರಿವೆ. ಬೆಂಗಳೂರು ಕೂಡಾ ಇದೇ ಭಾಗದಲ್ಲಿದ್ದರೂ, ನಗರ ಮತ್ತು ಗ್ರಾಮೀಣ ಭಾಗವನ್ನು ಪ್ರತ್ಯೇಕ ವಿಭಾಗವಾಗಿ ವಿಂಗಡಿಸಲಾಗಿದೆ.

ಒಂಬತ್ತು ಜಿಲ್ಲೆಗಳಿಂದ 57 ಕ್ಷೇತ್ರಗಳನ್ನು ಹೊಂದಿರುವ ಹಳೇ ಮೈಸೂರು ಭಾಗದಲ್ಲಿನ ರಾಜಕೀಯದಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೆ ಮತ್ತಷ್ಟು ಜಿಲ್ಲೆಗಳಲ್ಲಿ ಬಿಜೆಪಿಯೂ ಸೇರಿದಂತೆ ತ್ರಿಕೋಣ ಸ್ಪರ್ಧೆಯಿದೆ.

ತುಮಕೂರು ಜಿಲ್ಲೆಯ ಹನ್ನೊಂದು, ಚಿಕ್ಕಬಳ್ಳಾಪುರದ ಐದು, ಕೋಲಾರದ ಆರು, ರಾಮನಗರದ ನಾಲ್ಕು, ಮಂಡ್ಯ ಮತ್ತು ಹಾಸನದ ತಲಾ ಏಳು, ಕೊಡಗಿನ ಎರಡು, ಮೈಸೂರಿನ ಹನ್ನೊಂದು, ಚಾಮರಾಜನಗರದ ನಾಲ್ಕು ಕ್ಷೇತ್ರಗಳು ಹಳೇ ಮೈಸೂರು ಭಾಗಕ್ಕೆ ಸೇರಿದೆ.

ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಬೋಪಯ್ಯ, ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಸುರೇಶ್ ಗೌಡ, ಡಾ.ಸುಧಾಕರ್, ಡಿ.ಕೆ.ಶಿವಕುಮಾರ್, ಮಾಧುಸ್ವಾಮಿ ಮುಂತಾದವರು ಈ ಭಾಗದಿಂದ ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಒಟ್ಟು 57 ಕ್ಷೇತ್ರಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 17, ಜೆಡಿಎಸ್ 26, ಇತರರು ಎರಡು ಸ್ಥಾನವನ್ನು (ಮುಳಬಾಗಲು, ಕೊಳ್ಳೇಗಾಲ) ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಪ್ರಾಂತ್ಯಾವರು ಪಕ್ಷಗಳು ಎಷ್ಟು ಸ್ಥಾನವನ್ನು ಗೆದ್ದಿದ್ದವು? ಟೇಬಲ್ ನಲ್ಲಿ ಕೊಡಲಾಗಿದೆ

ಜಿಲ್ಲೆ ಒಟ್ಟು ಕ್ಷೇತ್ರಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು
ಚಾಮರಾಜನಗರ 04 01 02 00 01
ಮೈಸೂರು 11 03 04 04 00
ಕೊಡಗು 02 02 00 00 00
ಹಾಸನ 07 01 00 06 00
ಮಂಡ್ಯ 07 00 00 07 00
ರಾಮನಗರ 04 00 01 03 00
ಕೋಲಾರ 06 00 04 01 01
ಚಿಕ್ಕಬಳ್ಳಾಪುರ 05 01 03 01 00
ತುಮಕೂರು 11 04 03 04 01
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+