Digital e Stamp Paper: ಡಿಜಿಟಲ್ ಸ್ಟಾಂಪ್ ಪಡೆಯುವುದು ಹೇಗೆ, ಇಲ್ಲಿದೆ ಹೊಸ ಅಪ್ಡೇಟ್ಸ್
Digital e Stamp Paper: ಕರ್ನಾಟಕ ಸರ್ಕಾರವು ಆಸ್ತಿಗಳ ರಿಜಿಸ್ಟ್ರೇಷನ್‌ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ಮಾಡಿದೆ. ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ 'ಇ- ಸ್ಟ್ಯಾಂಪ್' ಬದಲಿಗೆ 'ಡಿಜಿಟಲ್ ಇ- ಸ್ಟ್ಯಾಂಪ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಇಷ್ಟು ದಿನ ರಿಜಿಸ್ಟ್ರೇಷನ್‌ನಲ್ಲಿ ಆಗುತ್ತಿರುವ ಲೋಪಗಳು ಇಳಿಕೆಯಾಗಲಿವೆ ಎಂದು ಸರ್ಕಾರ ಹೇಳಿದೆ. ಹಾಗಾದರೆ ಏನಿದು ಡಿಜಿಟಲ್ ಇ - ಸ್ಟಾಂಪ್ ವ್ಯವಸ್ಥೆ ಹಾಗೂ ಡಿಜಿಟಲ್ ಸ್ಟಾಂಪ್ ಪಡೆಯುವುದು ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಡಿಜಿಟಲ್ ಇ - ಸ್ಟಾಂಪ್ ವ್ಯವಸ್ಥೆ: ಆಸ್ತಿಗಳ ನೋಂದಣಿಯ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯನ್ನು ಮಾಡಿದೆ. ರಾಜ್ಯ ಸರ್ಕಾರವು ಇದೀಗ ಇ- ಸ್ಟ್ಯಾಂಪ್ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪ್ ಪರಿಚಯಿಸಿದೆ. ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಇ- ಸ್ಟ್ಯಾಂಪ್ ಬಳಕೆಯಲ್ಲಿತ್ತು. ಇನ್ಮುಂದೆ ಡಿಜಿಟಲ್ ಇ- ಸ್ಟ್ಯಾಂಪ್ ವ್ಯವಸ್ಥೆಯನ್ನು ರಾಜ್ಯ ಕಂದಾಯ ಇಲಾಖೆ ಪರಿಚಯಿಸಿದೆ.

ಡಿಜಿಟಲ್ ಸ್ಟಾಂಪ್ ಪಡೆಯುವುದು ಹೇಗೆ
1. ಮೊದಲಿಗೆ https://kaveri.karnataka.gov.in/landing-page ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಒಂದೇ ಬಾರಿ ನೋಂದಣಿ ಖಾತೆ ಸೃಷ್ಟಿಸಿ.
3 ಲಾಗಿನ್ ಆದ ಬಳಿಕ ಬೇಕಾದ ದಸ್ತಾವೇಜಿನ / ದಾಖಲೆ ಪ್ರಕಾರವನ್ನು (ಉದಾ: ಬಾಡಿಗೆ ಒಪ್ಪಂದ, ಅಫಿಡವಿಟ್, ಮಾರಾಟ ಒಪ್ಪಂದ) ಆಯ್ಕೆ ಮಾಡಿ ವಿವರಗಳನ್ನು ಭರ್ತಿ ಮಾಡಿ.
4. ಅರ್ಜಿದಾರರು ಹಾಗೂ ಸಹಿ ಮಾಡುವ ಎಲ್ಲರೂ Aadhaar ಆಧಾರಿತ ಪರಿಶೀಲನೆ ಮೂಲಕ ಗುರುತು ದೃಢೀಕರಿಸಿ.
5. ಆಸ್ತಿ ಸಂಬಂಧಿತ ದಸ್ತಾವೇಜುಗಳಿದ್ದರೆ, ಸಿಸ್ಟಂ ಸರ್ಕಾರಿ ಡೇಟಾ ಬೇಸ್‌ಗಳಿಂದ ಆಸ್ತಿ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಿದೆ.
6. ನಿಮ್ಮ ಸ್ವಂತ ವಿಷಯವನ್ನು ಸೇರಿಸಿ ದಸ್ತಾವೇಜನ್ನು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಪಡೆಯಬಹುದು.
7. ಸ್ಟ್ಯಾಂಪ್ ಶುಲ್ಕ ಲೆಕ್ಕ ಹಾಕಿದ ನಂತರ, ಖಜಾನೆ ಪಾವತಿ ಗೇಟ್‌ವೇ ಮೂಲಕ ಪಾವತಿಸಿ ಆಯ್ಕೆ ಸಿಗಲಿದೆ.
8. ಪಾವತಿ ದೃಢಪಟ್ಟ ನಂತರ ಸಿಸ್ಟಂ ಡಿಜಿಟಲ್ ಇ-ಸ್ಟ್ಯಾಂಪ್ ಸೃಷ್ಟಿಯಾಗುತ್ತದೆ.
9. ಎಲ್ಲರ ಸಹಿ ಪಡೆಯಲು ಅವರ ಮೊಬೈಲ್‌ಗೆ ಲಿಂಕ್ ಬರುತ್ತದೆ. ಅದರಲ್ಲಿ Aadhaar e-Sign ಅಥವಾ DSC ಮೂಲಕ ಸಹಿ ಮಾಡಬಹುದು.
10. ಎಲ್ಲರೂ ಸಹಿ ಮಾಡಿದ ನಂತರ ನಿಮ್ಮ ಅಂತಿಮ ಸ್ಟ್ಯಾಂಪ್ ಮಾಡಲ್ಪಟ್ಟ ಹಾಗೂ ಸಹಿ ಮಾಡಲ್ಪಟ್ಟ ದಸ್ತಾವೇಜು ಕಾನೂನಿನಂತೆ ಮಾನ್ಯವಾಗುತ್ತದೆ.
11. ಇದನ್ನು ಡೌಪ್ಲೋಡ್ ಮಾಡಬಹುದು ಹಾಗೂ ನೋಂದಣಿಗೆ ಬಳಸಬಹುದು.
ಮೋಸ ತಪ್ಪಿಸಲು ಡಿಜಿಟಲ್ ಇ - ಸ್ಟ್ಯಾಂಪ್
ನೋಂದಣಿ ಮತ್ತು ನೋಂದಣಿಯೇತರ ಛಾಪಾ ಕಾಗದ ವಹಿವಾಟುಗಳಿಗೆ ಬಳಸುವ 'ಇ- ಸ್ಟ್ಯಾಂಪ್' ಬದಲಿಗೆ 'ಡಿಜಿಟಲ್ ಇ- ಸ್ಟ್ಯಾಂಪ್' ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸ್ಟ್ಯಾಂಪ್ ವಂಚನೆ ಮತ್ತು ಭದ್ರತಾ ಲೋಪವನ್ನು ಸಂಪೂರ್ಣ ತೊಡೆದು ಹಾಕಲು ಈ ಹೊಸ ವ್ಯವಸ್ಥೆ ಪರಿಚಯಿಸಲಾಗಿದ್ದು, ಮುಂದಿನ ದಿನಗಳಲ್ಲಿ 'ಡಿಜಿಟಲ್ ಇ-ಸ್ಟ್ಯಾಂಪ್' ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಮಧ್ಯವರ್ತಿಗಳ ನೆರವಿಲ್ಲದೆ, ಮನೆಯಲ್ಲಿಯೇ ಕುಳಿತು 'ಡಿಜಿಟಲ್ ಇ- ಸ್ಟ್ಯಾಂಪ್' ತಯಾರಿಸಿಕೊಳ್ಳಬಹುದು. ಇಂಟರ್‌ನೆಟ್ ಇದ್ದರೆ 24x7 ಜಗತ್ತಿನಲ್ಲಿ ಎಲ್ಲಿಯೇ ಕುಳಿತು ಈ ಸೇವೆಯನ್ನು ಪಡೆಯಬಹುದು. ಎಲ್ಲ ಸೇವೆಗಳು ಸಂಪೂರ್ಣ ಡಿಜಿಟಲ್ ಆಗಿರಲಿದೆ. ಸುರಕ್ಷಿತ ಮತ್ತು ವೇಗವಾಗಿ ಆನ್‌ಲೈನ್ ಪಾವತಿ ಮಾಡಲು ಕೂಡಾ ಅವಕಾಶವಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.












Click it and Unblock the Notifications