ಮೋದಿ ಕನ್ನಡ ಮಾತಾಡಿದ್ರೆ ಕೇಳೋಕೆ ಚೆಂದ ಎಂದ ಯುವತಿಗೆ ಮೋದಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 12: ಮೋದಿ ಕನ್ನಡ ಮಾತನಾಡಿದ್ರೆ ಕೇಳೋಕೆ ಚೆಂದ ಎಂದು ಟ್ವೀಟ್ ಮಾಡಿದ್ದ ಕನ್ನಡತಿಗೆ ಮೋದಿ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ. ಕನ್ನಡ ಒಂದು ಸುಂದರ ಭಾಷೆ ಎಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದಾರೆ.
ಮೋದಿ ಕನ್ನಡ ಮಾತನಾಡಿದರೆ ಕೇಳೋಕೆ ಚೆಂದ ಎಂದು ಟ್ವೀಟ್ ಮಾಡಿದ್ದ ಸಹನಾ ಅವರ ಟ್ವೀಟಿಗೆ ಪ್ರತಿಕ್ರಿಯಿಸಿದ ಮೋದಿಯವರು ಕನ್ನಡ ಒಂದು ಸುಂದರ ಭಾಷೆ ಎಂದು ಹೇಳಿದ್ದಾರೆ.
Kannada is a beautiful language. https://t.co/opw8Rz4znA
— Narendra Modi (@narendramodi) March 11, 2019
ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಬಂದಾಗಲೆಲ್ಲಾ ಭಾಷಣ ಆರಂಭಿಸುವಾಗ ಕನ್ನಡದಲ್ಲೇ ಮಾತನಾಡುತ್ತಿದ್ದರು.ಕಲಬುರಗಿಯಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ ಅವರು ಪ್ರಾರಂಭದಲ್ಲಿ ಕನ್ನಡದಲ್ಲಿ ಮಾತನಾಡಿದ್ದರು.
ಇದನ್ನು ಉಲ್ಲೇಖಿಸಿ ಸಹನಾ ಅವರು ಮೋದಿಜೀ ಕನ್ನಡದಲ್ಲಿ ಮಾತನಾಡಿದಾಗ ಖುಷಿ ಆಗುತ್ತದೆ ಅಲ್ವ ಎಂದಿದ್ದರು. ಅಲ್ಲದೆ, ಅವರು ಕನ್ನಡದಲ್ಲಿ ಮಾತನಾಡುವುದೇ ಒಂದು ಸುಂದರ ಕ್ಷಣ ಎಂದು ಟ್ವೀಟ್ ಮಾಡಿದ್ದರು.

ಪ್ರಧಾನಿ ಪ್ರತಿಕ್ರಿಯೆ ನೋಡಿ ಅದನ್ನು ಮೆಚ್ಚಿಕೊಂಡಿರುವ ಕನ್ನಡಿಗರು ಪ್ರಧಾನಿ ಟ್ವೀಟ್ಗೆ ಬಹಳ ವಿಶೇಷವಾಗಿ ಮರು ಉತ್ತರಿಸಿದ್ದಾರೆ. ತುಂಬಾ ಚೆನ್ನಾಗಿ ಹೇಳಿದಿರಿ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications