Karnataka Dam Water Level: ಭಾರೀ ಮಳೆ: ಕರ್ನಾಟಕದ 13 ಪ್ರಮುಖ ಜಲಾಶಯದ ನೀರಿನ ಮಟ್ಟ ಹೆಚ್ಚಳ!

Karnataka Dam Water Level: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದೆ. ಈ ಭಾರಿ ಮುಂಗಾರು ಮಳೆ ಅವಧಿಯೂ ವಿಸ್ತರಿಸಿರುವುದು ಸಹ ಈ ಬಾರಿ ಜಲಾಶಯಗಳಿಗೆ ವರದಾನವಾಗಿದೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ಪ್ರಾರಂಭದ ಹಂತದಲ್ಲಿ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಭಾರೀ ಸಂಕಷ್ಟ ಎದುರಾಗಿತ್ತು. ಆದರೆ ಈ ಬಾರಿ ಉತ್ತಮ ಮಳೆ ಆಗಿರುವುದು ಜಲಾಶಯಗಳಿಗೆ ಜೀವಕಳೆ ತುಂಬಿದೆ.

ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯಕ್ಕೆ ಮುಂಗಾರು ಮಳೆ ಅಂತ್ಯವಾಗುತ್ತಿತ್ತು. ಆದರೆ, ಈ ಬಾರಿ ಚಂಡ
ಮಾರುತದ ಪ್ರಭಾವ ಹಾಗೂ ವಾಯುಭಾರ ಕುಸಿತದ ಕಾರಣಕ್ಕೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ಅವಧಿ ವಿಸ್ತರಣೆ ಆಗಿದೆ. ಅಲ್ಲದೇ ಈ ವರ್ಷ ಮುಂಗಾರು ಮಳೆ / ನೈರುತ್ಯ ಮಾನ್ಸೂನ್‌ನಲ್ಲಿ ಉತ್ತಮ ಮಳೆ ಆಗಿರುವುದರಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣವೂ ಸಹ ಹೆಚ್ಚಳವಾಗಿದೆ. ಕರ್ನಾಟಕದ ಪ್ರಮುಖ 13 ಪ್ರಮುಖ ಜಲಾಶಯಗಳ ನೀರಿನ ಮಟ್ಟದ ವಿವರ ಇಲ್ಲಿದೆ.

Monsoon Revival Karnataka s 13 Major Dams See Significant Rise in Water Levels Rain

ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80
ಇಂದಿನ ಮಟ್ಟ: 123.12
ಒಳಹರಿವು: 4,282
ಹೊರಹರಿವು: 5,609 ಕ್ಯೂಸೆಕ್ಸ್‌ಗಳಲ್ಲಿ

ಹಾರಂಗಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859
ಇಂದಿನ ಮಟ್ಟ: 2,857.91
ಒಳಹರಿವು: 1,040
ಹೊರಹರಿವು: 1,600 ಕ್ಯೂಸೆಕ್ಸ್‌ಗಳಲ್ಲಿ

ಕಬಿನಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284
ಇಂದಿನ ಮಟ್ಟ: 2,282.77
ಒಳಹರಿವು: 891
ಹೊರಹರಿವು: 1,300 ಕ್ಯೂಸೆಕ್ಸ್‌ಗಳಲ್ಲಿ

ಹೇಮಾವತಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922
ಇಂದಿನ ಮಟ್ಟ: 2,916.74
ಒಳಹರಿವು: 4,497
ಹೊರಹರಿವು: 6,610 ಕ್ಯೂಸೆಕ್ಸ್‌ಗಳಲ್ಲಿ

ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819
ಇಂದಿನ ಮಟ್ಟ: 1,816.15
ಒಳಹರಿವು: 3,352
ಹೊರಹರಿವು: 6,891 ಕ್ಯೂಸೆಕ್ಸ್‌ಗಳಲ್ಲಿ

ಸೂಪಾ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 564
ಇಂದಿನ ಮಟ್ಟ: 559.35
ಒಳಹರಿವು: 1,451.93
ಹೊರಹರಿವು: 4,681.78 ಕ್ಯೂಸೆಕ್ಸ್‌ಗಳಲ್ಲಿ

ಮಾಣಿ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 595
ಇಂದಿನ ಮಟ್ಟ: 594.08
ಒಳಹರಿವು: 890
ಹೊರಹರಿವು: 632

ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633
ಇಂದಿನ ಮಟ್ಟ: 1,625.99
ಒಳಹರಿವು: 7,970
ಹೊರಹರಿವು: 10,419

ಮಲಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.5
ಇಂದಿನ ಮಟ್ಟ: 2,079.50
ಒಳಹರಿವು: 394
ಹೊರಹರಿವು: 394

ಘಟಪ್ರಭಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175
ಇಂದಿನ ಮಟ್ಟ: 2,174.86
ಒಳಹರಿವು: 1,702
ಹೊರಹರಿವು: 2,340

ಭದ್ರಾ ಜಲಾಶಯ
ಗರಿಷ್ಠ ಮಟ್ಟ (ಅಡಿಗಳಲ್ಲಿ): 186
ಇಂದಿನ ಮಟ್ಟ: 184.1
ಒಳಹರಿವು: 3,494
ಹೊರಹರಿವು: 4,084

ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ (ಮೀ.ಗಳಲ್ಲಿ): 519.6
ಇಂದಿನ ಮಟ್ಟ: 519.60
ಒಳಹರಿವು: 20,992
ಹೊರಹರಿವು: 20,992

ನಾರಾಯಣಪುರ ಜಲಾಶಯ
ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25
ಇಂದಿನ ಮಟ್ಟ: 492.24
ಒಳಹರಿವು: 21,000
ಹೊರಹರಿವು: 7,030

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+