Heavy Rain: 72 ಗಂಟೆ ಕಾಲ ಭರ್ಜರಿ ಮಳೆ ಮುನ್ನೆಚ್ಚರಿಕೆ! ಯಾವ ಯಾವ ಜಿಲ್ಲೆಗಳಿಗೆ ತಿಳಿಯಿರಿ

ಮಳೆ.. ಮಳೆ.. ಮಳೆ.. ಮುಂಗಾರು ಮಳೆ.. ಎಲ್ಲಿ ನೋಡಿದರೂ ಬರೀ ನಿರೇ ನೀರು. ಈ ಮಾತನ್ನ ಇಡೀ ಕರ್ನಾಟಕ ಈಗ ಹೇಳುತ್ತಿದೆ. ಯಾಕಂದ್ರೆ ಕೇವಲ 3 ತಿಂಗಳ ಹಿಂದೆ ನಮ್ಮ ಕರ್ನಾಟಕದ ಜನರು ಒಂದೊಂದು ಹನಿ ನೀರಿಗೂ ಪರದಾಡಿದ್ದರು. ಅದರಲ್ಲೂ ಮಳೆಯೇ ಇಲ್ಲದೆ ಇಡೀ ಕರ್ನಾಟಕದ ನದಿಗಳೂ & ಕೆರೆಗಳು, ಡ್ಯಾಂಗಳು ಬತ್ತಿ ಹೋಗಿದ್ದವು. ಹೀಗಾಗಿ ಮಳೆಗಾಗಿ ಬೇಡುವ ಪರಿಸ್ಥಿತಿ ಬಂದಿತ್ತು ಹೀಗೆ ಶುರುವಾಗಿದ್ದ ಮಳೆ ಈಗ ಮುಂಗಾರು ಮಳೆ ತನಕ ಬಂದು ನಿಂತಿದೆ.

ಹೌದು, ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿಯೇ ಎಲ್ಲೆಲ್ಲೂ ಭಾರಿ ಮಳೆ ಬೀಳುತ್ತಿದೆ. ಇನ್ನು ಕರಾವಳಿ & ಮಲೆನಾಡು ಕರ್ನಾಟಕದಲ್ಲಿ ಮಾತ್ರ ಅಲ್ಲ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಲ್ಲೂ ಬರೀ ನೀರೆ ಕಾಣುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಮುಂದಿನ 72 ಗಂಟೆ ಕಾಲ ಅಂದ್ರೆ 3 ದಿನಗಳ ಕಾಲ ಮತ್ತಷ್ಟು ರಣಭೀಕರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಅರೆರೆ ಹಾಗಾದ್ರೆ ಹೀಗೆ ಭಾರಿ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು ಗೊತ್ತಾ? ಮುಂದೆ ಓದಿ.

Monsoon Rain Will Be Heavy In Karnataka State From July 6th Of 2024

ಭರ್ಜರಿ ಮಳೆ ಬೀಳಲಿರುವ ಜಿಲ್ಲೆಗಳು!

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಕಳೆದ 2 ವಾರದಿಂದ ನಿರಂತರ ಮಳೆ ಬೀಳುತ್ತಿದೆ. ಅದ್ರಲ್ಲೂ ಮುಂಗಾರು ಮಳೆಯ ಅಬ್ಬರಕ್ಕೆ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಈ ವಾರದಲ್ಲಿ ಮಳೆ ನಿಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಬೇರೆ ಸುದ್ದಿ ಬರ್ತಿದೆ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮುಂದಿನ 72 ಗಂಟೆಗಳಲ್ಲಿ ಭಾರಿ ಮಳೆ ಬೀಳುತ್ತದೆ, ಹೀಗಾಗಿ ಎಚ್ಚರದಿಂದ ಇರಿ ಎಂದು ಸೂಚನೆ ನೀಡಲಾಗಿದೆ.

ಹೊರಗೆ ಹೋಗುವಾಗ ಎಚ್ಚರ.. ಎಚ್ಚರ..!

ಮುಂಗಾರು ಮಳೆ ಶುರುವಾಗಿ 1 ತಿಂಗಳು ಕಳೆದಿದ್ದು, ಕರ್ನಾಟಕದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಧ್ಯ ಮಧ್ಯದಲ್ಲಿ ಮುಂಗಾರು ಮಳೆ ಒಂದಷ್ಟು ಬ್ರೇಕ್ ಪಡೆದರೂ ಅದರ ಆರ್ಭಟಕ್ಕೆ ಸಮಸ್ಯೆ ಏನೂ ಆಗಿಲ್ಲ. ಅದರಲ್ಲೂ ಕಳೆದ 2 ವಾರಗಳಿಂದ ನಿರಂತರವಾಗಿ ಈ ಮಳೆ ಅಬ್ಬರಿಸುತ್ತಿದೆ. ಇದೀಗ ಮುಂದಿನ ಕೆಲವು ವಾರಗಳ ಕಾಲ ಪರಿಸ್ಥಿತಿ ಹೀಗೆ ಇರಲಿದ್ದು ಜನ ಅಲರ್ಟ್ ಆಗಿರಬೇಕು ಎಂದು ಮುನ್ಸೂಚನೆ ನೀಡಲಾಗಿದೆ.

ಅದ್ರಲ್ಲೂ ಮುಂದಿನ 72 ಗಂಟೆಗಳ ಕಾಲ ಮುಂಗಾರು ಮಳೆಯ ಮಾರುತಗಳು, ಕರ್ನಾಟಕದಲ್ಲಿ ಸಂಚಲನ ಸೃಷ್ಟಿ ಮಾಡಲು ಸಜ್ಜಾಗಿವೆ. ಹೀಗಾಗಿ ಹೊರಗೆ ಹೋಗುವಾಗ ಎಚ್ಚರಿಕೆ ಅಗತ್ಯ. ಹಾಗೇ ಸಿಡಿಲು & ಗುಡುಗು ಇರುವಾಗ ಹೊರಗೆ ಹೋಗುವುದನ್ನು ತಪ್ಪಿಸಿ. ಹಾಗೇ ಮರಗಳ ಕೆಳಗೆ ನಿಲ್ಲುವುದು & ಲೈಟ್ ಕಂಬಗಳನ್ನು ಮಳೆ ಬರುವಾಗ ಅಥವಾ ಮಳೆ ಬಂದು ನಿಂತ ಸಮಯದಲ್ಲಿ ಮುಟ್ಟುವುದು ಮಾಡಬೇಡಿ. ವಿದ್ಯುತ್ ತಂತಿಗಳು ಕಟ್ ಆಗಿ ಕೆಳಗೆ ಬಿದ್ದಿದ್ದರೆ ಕೂಡಲೇ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+