Modi roadshow: ವಾಹನ ಸವಾರರೇ ರಸ್ತೆಗಿಳಿಯುವ ಮುನ್ನ ಗಮನಿಸಿ, ಶನಿವಾರ ಬೆಂಗಳೂರಿನಲ್ಲಿ 36 ಕಿಮೀ ಮೋದಿ ರೋಡ್‌ಶೋ!

ಬೆಂಗಳೂರು, ಮೇ. 03: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಸ್ಟಾರ್ ಕ್ಯಾಂಪೇನರ್ ಪ್ರಧಾನಿ ನರೇಂದ್ರ ಮೋದಿ ಮತ್ತೆ ಮೇ 6ರ ಶನಿವಾರದಂದು ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ಹಿಂದೆ ನಡೆದ ರೋಡ್‌ಶೋ ಹಿನ್ನೆಲೆ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ್ದರು.

ಈಗ ಮತ್ತೆ ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬರೋಬ್ಬರಿ 36.6 ಕಿಮೀ ರೋಡ್ ಶೋ ನಡೆಸಲಿದ್ದಾರೆ. "ಮೇ 8 ರ ಸೋಮವಾರದ ರೋಡ್‌ಶೋ ಅನ್ನು ಮೇ 6 ಕ್ಕೆ ನಡೆಸಲು ನಿರ್ಧರಿಸಲಾಗಿದೆ. ಸೋಮವಾರದ ರೋಡ್‌ಶೋದಿಂದ ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ" ಎಂದು ಪ್ರಧಾನಿ ತಿಳಿಸಿದ್ದಾರೆ.

Modi’s 36 km roadshow in Bengaluru on Saturday: Check route details

ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸಲು ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು. 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗಲಿದ್ದು, ಈ ರ‍್ಯಾಲಿ ಬೆಳಗ್ಗೆ ಮತ್ತು ಸಂಜೆ ನಡೆಯಲಿದೆ ಎಂದು ಪಿ.ಸಿ.ಮೋಹನ್ ವಿವರಿಸಿದ್ದಾರೆ.

"ಈ ರೋಡ್‌ಶೋ ಭಾರತ್ ಜೋಡೋ ಯಾತ್ರೆಗಿಂತ ಭಿನ್ನವಾಗಿದೆ. ಸಾಮಾನ್ಯ ಜನರು ಹೇಗೆ ಬದುಕುತ್ತಾರೆ ಎಂಬುದನ್ನು ನೋಡಲು ಈ ರೋಡ್‌ಶೋ ನಡೆಸಲಾಗುತ್ತಿದೆ. ನಮ್ಮ ರೋಡ್‌ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಅವರೆಲ್ಲಾ ಪ್ರಧಾನ ಮಂತ್ರಿಗೆ ತಮ್ಮ ಆಶೀರ್ವಾದವನ್ನು ನೀಡುತ್ತಾರೆ ಎಂದು ನಾವು ನಂಬುತ್ತೇವೆ" ಎಂದು ಪಿ.ಸಿ.ಮೋಹನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Modi’s 36 km roadshow in Bengaluru on Saturday: Check route details

ಮೊದಲ ರೋಡ್ ಶೋನ ವಿವರಗಳು

ಬಿಜೆಪಿಯ ಮೊದಲ ರೋಡ್‌ಶೋ 10.1 ಕಿಮೀ ಉದ್ದವಾಗಿದೆ. ಬೆಂಗಳೂರು ಸೆಂಟ್ರಲ್‌ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಪ್ರಧಾನಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ಕೂಡಲೇ ಸುರಂಜನ್ ದಾಸ್ ರಸ್ತೆಯಿಂದ ರೋಡ್ ಶೋ ಆರಂಭವಾಗಲಿದ್ದು, ಮಹದೇವಪುರ, ಕೆಆರ್ ಪುರಂ, ಸಿವಿ ರಾಮನ್ ನಗರ, ಶಿವಾಜಿನಗರ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ.

ರೋಡ್‌ಶೋ ನಡೆಯುವ ಮಾರ್ಗ: ಸುರಂಜನ್ ದಾಸ್ ರಸ್ತೆ - ಹೊಸ ತಿಪ್ಪಸಂದ್ರ ರಸ್ತೆ - 12 ನೇ ಮುಖ್ಯ ರಸ್ತೆ - ಇಎಸ್‌ಐ ಆಸ್ಪತ್ರೆ - ದೊಮ್ಮಲೂರು - ಎಂಜಿ ರಸ್ತೆ - ಬ್ರಿಗೇಡ್ ರಸ್ತೆಯಲ್ಲಿ ರೋಡ್‌ಶೋ ನಡೆಯಲಿದ್ದು, ಈ ವೇಳೆ ಈ ಮಾರ್ಗಗಳಲ್ಲಿ ವಾಹನ ಸಂಚಾರ ಇರುವುದಿಲ್ಲ.

ಎರಡನೇ ರೋಡ್ ಶೋ ನಡೆಯುವ ವಿವರಗಳು

ಎರಡನೇ ರೋಡ್ ಶೋ ಬೆಂಗಳೂರು ದಕ್ಷಿಣದಲ್ಲಿ ಸಂಜೆ 4 ರಿಂದ ರಾತ್ರಿ 10 ರವರೆಗೆ ನಡೆಯಲಿದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿ ನಗರ, ಮಹಾಲಕ್ಷ್ಮಿ ಲೇಔಟ್, ವಿಜಯ ನಗರ, ಗೋವಿಂದ್ ರಾಜ್ ನಗರ, ರಾಜಾಜಿ ನಗರ ಮತ್ತು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ 26.5 ಕಿ.ಮೀ ರೋಡ್ ಶೋ ನಡೆಯಲಿದೆ.

ರೋಡ್‌ಶೋ ನಡೆಯುವ ಮಾರ್ಗ: ಜೆಪಿ ನಗರದಲ್ಲಿ ಆರ್‌ಬಿಐ ಲೇಔಟ್ - ಜೆಪಿ ನಗರ 24 ನೇ ಮುಖ್ಯ ರಸ್ತೆ - ಜಯನಗರ, ಅರಬಿಂದೋ ಮಾರ್ಗ - ಕೂಲ್ ಜಾಯಿಂಟ್ (ಬೆಂಗಳೂರು ಹೈಸ್ಕೂಲ್) - ಮೈಯಾಸ್ ರೆಸ್ಟೋರೆಂಟ್ - ಕರಿಸಂದ್ರ - ಸೌತ್ ಎಂಡ್ ಸರ್ಕಲ್ - ಎಂಎನ್ ಕೃಷ್ಣರಾವ್ ಪಾರ್ಕ್ - ನೆಟ್ಟಕಲ್ಲಪ್ಪ ವೃತ್ತ - ಎನ್‌ಆರ್ ಕಾಲೋನಿ - ಬಸವನಗುಡಿ - ಬ್ಯೂಗಲ್ ರಾಕ್ ಪಾರ್ಕ್ - ರಾಮಕೃಷ್ಣ ಆಶ್ರಮ - ಉಮಾ ಥಿಯೇಟರ್ - ಟಿಆರ್ ಮಿಲ್ಸ್ - ಸಿರ್ಸಿ ಸರ್ಕಲ್ - ಇಟಿಎ ಮಾಲ್ - ಮಾಗಡಿ ರಸ್ತೆ (ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೋವಿಂದರಾಜ ನಗರ) - ಬಸವೇಶ್ವರ ನಗರ - ವೆಸ್ಟ್ ಆಫ್ ಕಾರ್ಡ್ ರಸ್ತೆ - ಶಂಕರ್ ಮಠ - ರಾಜಾಜಿನಗರ - ಡಾ ಎಂಸಿ ಮೋದಿ ನೇತ್ರಾಲಯ - ನವರಂಗ ವೃತ್ತ - ಮಹಾಕವಿ ಕುವೆಂಪು ರಸ್ತೆ - ಸಂಪಿಗೆ ರಸ್ತೆ - ಮಲ್ಲೇಶ್ವರಂ - ಮಲ್ಲೇಶ್ವರಂ 18ನೇ ಕ್ರಾಸ್. ರೋಡ್‌ಶೋ ನಡೆಯುವ ವೇಳೆ ಈ ಮಾರ್ಗಗಳಲ್ಲಿ ವಾಹನ ಸಂಚಾರ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+