ಶಾಸಕರ ಲೆಟರ್ ಫೋರ್ಜರಿ; 10 ಲಕ್ಷ ಸಾಲಕ್ಕಾಗಿ ಡಿಸಿಎಂಗೆ ಶಿಫಾರಸು!

ಬೆಂಗಳೂರು, ಅಕ್ಟೋಬರ್ 16 : ಸಮಾಜ ಕಲ್ಯಾಣ ಸಚಿವ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಶಾಸಕರ ಫೋರ್ಜರಿ ಪತ್ರ ನೋಡಿ ಗಾಬರಿಗೊಂಡಿದ್ದಾರೆ.10 ಲಕ್ಷ ರೂ. ಸಾಲ ಸೌಲಭ್ಯಕ್ಕಾಗಿ ಫೋರ್ಜರಿ ಪತ್ರದಲ್ಲಿ ಮನವಿ ಸಲ್ಲಿಸಲಾಗಿದೆ.

ಶಾಸಕರೊಬ್ಬರ ಲೆಟರ್ ಹೆಡ್ ಪೋರ್ಜರಿ ಮಾಡಿ 12 ಜನರಿಗೆ ತಲಾ 10 ಲಕ್ಷ ರೂ. ಸಾಲ ಸೌಲಭ್ಯ ನೀಡಬೇಕು ಎಂದು ಸಮಾಜ ಕಲ್ಯಾಣ ಸಚಿವರಿಗೆ ಶಿಫಾರಸು ಮಾಡಲಾಗಿತ್ತು. ವಿಧಾನಸೌಧದಲ್ಲಿ ಪತ್ರ ನೋಡಿ ಸಚಿವ ಗೋವಿಂದ ಕಾರಜೋಳ ಗಾಬರಿಗೊಂಡರು.

2019-20ನೇ ಸಾಲಿನ ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಐಎಸ್‌ಬಿ ಯೋಜನೆಯಡಿ ಸಾಲ ಸೌಲಭ್ಯ ನೀಡಬೇಕು ಎಂದು ಫೋರ್ಜರಿ ಮಾಡಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.

Govind M.Karjol

ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಕ್ಕೆ ಸೇರಿದ್ದಾರೆ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಇವರು ನನಗೆ ಪರಿಚಿತರು ಗಾರ್ಮೆಂಟ್ಸ್ ಉದ್ಯಮ ಆರಂಭಿಸಲು ಸಾಲ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ದಾವಣಗೆರೆ ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ ಪ್ರೊ. ಎನ್. ಲಿಂಗಣ್ಣ ಲೆಟರ್ ಹೆಡ್ ಫೋರ್ಜರಿ ಮಾಡಲಾಗಿದೆ. ಸ್ವತಃ ಲಿಂಗಣ್ಣ ಈ ಕುರಿತು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳಗೆ ದೂರು ನೀಡಿದ್ದಾರೆ.

"ನನ್ನ ಲೆಟರ್ ಹೆಡ್ ಫೋರ್ಜರಿ ಮಾಡಲಾಗಿದೆ. ಯಾರು ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಾಲ ನೀಡುವಂತೆ ಯಾರಿಗೂ ಶಿಫಾರಸು ಪತ್ರ ನೀಡಿಲ್ಲ" ಎಂದು ದೂರಿನಲ್ಲಿ ಪ್ರೊ. ಎನ್. ಲಿಂಗಣ್ಣ ಹೇಳಿದ್ದಾರೆ.

"ದಾವಣಗೆರೆ ಜಿಲ್ಲಾ ಪೊಲೀಸರಿಗೆ ಈ ಕುರಿತು ದೂರು ನೀಡಿ. ಅವರು ಫೋರ್ಜರಿ ಮಾಡಿದವರನ್ನು ಪತ್ತೆ ಹಚ್ಚಲಿದ್ದಾರೆ" ಎಂದು ಗೋವಿಂದ ಕಾರಜೋಳ ಶಾಸಕ ಪ್ರೊ. ಎನ್. ಲಿಂಗಣ್ಣಗೆ ಸಲಹೆ ನೀಡಿದರು.

"ಶಾಸಕರ ಶಿಫಾರಸು ಪತ್ರ ಬಂದರೆ ತಿರಸ್ಕಾರ ಮಾಡಲಾಗುವುದಿಲ್ಲ. ಅದು ಫೋರ್ಜರಿ ಎಂದೂ ಗೊತ್ತಾಗುವುದಿಲ್ಲ" ಎಂದು ಗೋವಿಂದ ಕಾರಜೋಳ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+