Lakshmi Hebbalkar: "ಎಷ್ಟು ದಿನ" ಅಂತ ಕೇಳಿ ಟ್ರೋಲ್‌ಗೆ ಗುರಿಯಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!
ರಾಜಕಾರಣಿಗಳು ಹಾಗೂ ನಟ, ನಟಿಯರು ಸೇರಿದಂತೆ ಸೋಷಿಯಲ್ ಪರ್ಸನ್ಸ್ ಸಣ್ಣ ತಪ್ಪು ಮಾಡಿದರೂ ಸುದ್ದಿಯಾಗುತ್ತದೆ. ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂತಹದ್ದೇ ಸಣ್ಣ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಷ್ಟು ಸಣ್ಣ ವಿಷಯ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಈ ಎಡವಟ್ಟು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ವರ್ಷಕ್ಕೆ ಎಷ್ಟು ದಿನ ಎನ್ನುವುದನ್ನು ಅವರು ತಪ್ಪಾಗಿ ಹೇಳಿದ್ದಾರೆ. ಆದರೆ ಇದನ್ನು ಮೊದಲು ಸಭೀಕರ ಮೇಲಾಕಿ ಆ ಮೇಲೆ ಆ ವಿಷಯವೇ ಬೇಡ ಬಿಡಿ ಅಂತಲೂ ಹೇಳಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಸಮಾರಂಭದಲ್ಲಿ ಮಾತನಾಡುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವರ್ಷಕ್ಕೆ ಎಷ್ಟು ದಿನ ಅಂತ ಹೇಳುವಾಗ 354, 364 ದಿನ ಅಂತ ತಡವರಿಸಿದ್ದಾರೆ. ಇದಾದ ಮೇಲೆ ಈ ವಿಷಯದ ಬಗ್ಗೆ ಗೊಂದಲ ಮೂಡಿ 354 ದಿನ ಇದ್ಯಾ, ಇಲ್ಲ 364 ಅಂತ ಕೇಳಿದ್ದಾರೆ. ಇದಕ್ಕೆ ಸಭೀಕರು ಸರಿಯಾದ ಉತ್ತರವನ್ನು ನೀಡಿದ್ದಾರೆ.
ಆಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಸ್ವಲ್ಪ ಮ್ಯಾಕ್ಸ್‌ನಲ್ಲಿ ವೀಕ್ ಅಂತ ಹೇಳಿದ್ದಾರೆ. ಮತ್ತೆ ಮುಂದುವರಿದು 364 ದಿನದಲ್ಲಿ 354 ದಿನದಲ್ಲಿ ಅಂತ ಹೇಳಿದ್ದಾರೆ. ನೀವು ಕನ್ಫೂಸ್ ಮಾಡ್ತಿದ್ದೀರಿ. 5 ಅಥವಾ 6 ನಾನು ಹೇಳ್ತಾ ಇದ್ದೀನಿ.. ಬಿಡಿ ಪಾಪ ನನ್ನನ್ನ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಿಕ್ವೆಸ್ಟ್ ಮಾಡಿದ್ದಾರೆ. ಇದಕ್ಕೆ ಜನ ನಕ್ಕಿರುವುದು ವಿಡಿಯೋದಲ್ಲಿ ಇದೆ.

ಇದಾದ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪುನಃ 354 ದಿನದಲ್ಲಿ ಅಂತ ಮಾತು ಶುರು ಮಾಡಿದ್ದಾರೆ. ಇದೊಳ್ಳೆ ತಮಾಷೆ ಆಯ್ತಲ್ಲ ಅಂತ ಹೇಳಿರುವ ಅವರು ವರ್ಷ ಪೂರ್ತಿ.. ಆಗಬಹುದಾ.. ವರ್ಷ ಪೂರ್ತಿ ಅಂತ ಮಾತು ಮುಂದುವರಿಸಿದ್ದಾರೆ.
ಜನರಿಂದ ಟ್ರೋಲ್: ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜನ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈಗ ಗೊತ್ತಾಯ್ತು ನಮಗೆ ಗೃಹ ಲಕ್ಷ್ಮಿ ಹಣ ಯಾಕೆ ತುಂಬಾ ತಡವಾಗಿ ಬರ್ತಿದೆ ಎಂದು ಜನ ಈ ವಿಡಿಯೋಗೆ ರಿಯಾಕ್ಟ್ ಮಾಡಿದ್ದಾರೆ.
ವರ್ಷಕ್ಕೆ 365 ದಿನ ಎನ್ನುವುದು ಮ್ಯಾಕ್ಸ್ ಅಲ್ಲ ಸಾಮಾನ್ಯ ಜ್ಞಾನ ಅಂತ ಶೈಲೇಶ್ ಕುಮಾರ್ ಅವರು ರಿಯಾಕ್ಟ್ ಮಾಡಿದ್ದಾರೆ.
ವರ್ಷಕ್ಕೆ ಎಷ್ಟು ದಿನಗಳು ?
ಪ್ರತಿ ವರ್ಷವೂ ಒಟ್ಟು 365 ದಿನಗಳು ಇರುತ್ತವೆ.
ವರ್ಷದಲ್ಲಿ 366 ದಿನ ಯಾವಾಗ ಆಗುತ್ತದೆ ?
ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ಅಧಿಕ ವರ್ಷ ಎಂದು ಪರಿಗಣಿಸಲಾಗುತ್ತದೆ. ಆ ವರ್ಷ ಫೆಬ್ರವರಿ 29ನೇ ತಾರೀಖು ಸಹ ಇರುತ್ತದೆ.












Click it and Unblock the Notifications