ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಳಿಗಿಂತ ಕಡೆ'

By Madhusoodhan
|
Google Oneindia Kannada News

ಬೆಂಗಳೂರು, ಮೇ. 18: 'ಖಾಸಗಿ ಶಾಲೆಗಳು ವೇಶ್ಯಾವಾಟಿಕೆ ಅಡ್ಡೆಗಳಿಗಿಂತ ಕಡೆ ' ಎಂದು ಕಾರ್ಯಕ್ರಮವೊಂದರ ವೇಳೆ ಹೇಳಿಕೆ ನೀಡಿ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಸಚಿವ ಆಂಜನೇಯ ನಾಲಗೆ ಹರಿ ಬಿಟ್ಟಿದ್ದರು. ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಖಾಸಗಿ ಶಾಲೆಗಳ ಒಕ್ಕೂಟ ಪ್ರತಿಭಟನೆಗೆ ಮುಂದಾಗಿದ್ದು ಆಂಜನೇಯ ಕ್ಷಮೆ ಯಾಚಿಸುವಂತೆ ಪಟ್ಟು ಹಿಡಿದಿದೆ.[ಎಚ್ಕೆ ಪಾಟೀಲರ ಲೆಕ್ಕದಲ್ಲಿ ಬರಗಾಲ ಅಂದ್ರೆ ಯಾವುದು?]

karanataka

ಆರ್ ಟಿಐ ಸಿಟು ನೀಡಲು ಕೆಲ ಖಾಸಗಿ ಶಾಲೆಗಳೂ ಹಿಂದೇಟು ಹಾಕುತ್ತಿವೆ. ಖಾಸಗಿ ಶಾಲೆಗಳು ಹಣ ವಸೂಲಿ ಕೇಂದ್ರಗಳಾಗಿ ಬದಲಾಗಿವೆ. ನಾನು ಆಕ್ರೋಶದಿಂದ ಈ ಮಾತು ಹೇಳಿದ್ದು ಎಲ್ಲ ಶಾಲೆಗಳನ್ನು ಉದ್ದೇಶಿಸಿ ಹೇಳಿಲ್ಲ ಎಂದು ಆಂಜನೇಯ ಸ್ಪಷ್ಟನೆ ನೀಡಿದ್ದಾರೆ.[ಜನಾದೇಶ ಸಿಕ್ಕಿದ್ದರೆ ಖರ್ಗೆ ಸಿಎಂ ಆಗ್ತಿದ್ರು : ಆಂಜನೇಯ]

ನಾನು ತಪ್ಪು ಮಾಡಿಲ್ಲ. ಒಂದು ವೇಳೆ ಧರಣಿ ನಡೆಸಿದರೆ ನನ್ನ ಅಭ್ಯಂತರ ಇಲ್ಲ. ಅದು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದ್ದು ನಾನು ಅಡ್ಡ ಬರುವುದಿಲ್ಲ ಎಂದು ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.

'ರಾಜ್ಯದಲ್ಲಿ ಇರುವುದು ಬಿರು ಬೇಸಿಗೆ ಹೊರತು ಬರವಲ್ಲ' ಎಂದು ಹೇಳಿಕೆ ನೀಡಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್ ಕೆ ಪಾಟೀಲ್ ಆಕ್ರೋಶಕ್ಕೆ ತುತ್ತಾಗಿದ್ದರು. ನಂತರ ತಮ್ಮ ಹೇಳಿಕೆಯನ್ನು ತಿದ್ದುಕೊಂಡಿದ್ದರು.ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿಸದ್ದಾರೆ.

English summary
Bengaluru: Minister for Social Welfare H. Anjaneya gave a controversial statement towards private schools. According to minister, Private Schools like prostitution centers!.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X