Milk Price Hike: ರೈತರಿಗೆ ಸಿಹಿ ಸುದ್ದಿ-ಗ್ರಾಹಕರಿಗೆ ಶಾಕ್! ಪ್ರತಿ ಲೀ. ಹಾಲಿನ ದರ ₹8 ಹೆಚ್ಚಳ? ನ.1ರಿಂದ ಅನ್ವಯ

ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಲಿನ ಪ್ರತಿ ಲೀಟರ್ ದರವನ್ನು ಇದೇ ಮೊದಲ ಬಾರಿಗೆ ಬರೋಬ್ಬರಿ 08ರೂ. ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸಚಿವ ಸಂಪುಟ ಸಭೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ 08 ಏರಿಕೆಗೆ ಒಲವು ತೋರಿದ್ದಾರೆ. ಆದರೆ ಚುನಾವಣಾ ನೀತಿ ಸಂಹಿತಿ ಜಾರಿ ಇರುವ ಕಾರಣಕ್ಕೆ ನವೆಂಬರ್ 1ರಿಂದ ದರ ಹೆಚ್ಚಳ ಜಾರಿಗೆ ಬರುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ಮಹತ್ವದ ಸಚಿವ ಸಂಪುಟ ಸಭೆ ಜರುಗಿತು. ಇದರಲ್ಲಿ ಹಾಲಿನ ದರ ಹೆಚ್ಚಳ ಕುರಿತು ಮಹತ್ವದ ಚರ್ಚೆಗಳು ನಡೆದವು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ಮತ್ತು ರಾಜ್ಯದ ಇನ್ನಿತರ ಹಾಲು ಒಕ್ಕೂಟಗಳ ಬೇಡಿಕೆ ಮೇರೆಗೆ ಹಾಲಿನ ದರ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಸಂಪುಟ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಒಂದು ಲೀಟರ್‌ ಹಾಲಿಗೆ 8 ರೂ. ಹೆಚ್ಚಳಕ್ಕೆ ಒಪ್ಪಿಗೆ ಇದ್ದು, ಗ್ರೀನ್ ಸಿಗ್ನಲ್ ನೀಡಲಾಗಿದೆ. ಶೀಘ್ರವೇ ಅಧಿಕೃತ ಮಾಹಿತಿ ಹೊರ ಬೀಳಲಿದೆ.

Milk Price Hike

ಹಾಲು ಉತ್ಪಾದಕ ಒಕ್ಕೂಟಗಳು ಕೇಳಿದ್ದೆಷ್ಟು?

ಇತ್ತೀಚೆಗೆ ಎಲ್ಲ ಅಗತ್ಯ ವಸ್ತುಗಳು ಏರಿಕೆ ಆಗಿವೆ. ಇದಕ್ಕೆ ಹಸು, ಎಮ್ಮೆಗಳಿಗೆ ಹಾಕುವ ಹಿಂಡಿ, ಮೇವು, ಕಾಳುಗಳು ಹೊರತಾಗಿದೆ. ಹೀಗಾಗಿಯೇ ಹಾಲು ಕೊಡುವ ಪಶುಗಳ ನಿರ್ವಹಣೆ ದುಬಾರಿಯಾಗಿದೆ. ಇದರಿಂದ ಆದಾಯಕ್ಕೆ ಹೊಡೆತ ಬೀಳುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಪ್ರತಿ ಲೀಟರ್ ಗೆ 8 ರಿಂದ10 ರೂಪಾಯಿ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದ್ದವು.

2025ರಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 4 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಹಿಂಡಿ, ಬೂಸಾ, ಮೇವಿನ ಬೆಲೆ ಗಗನಕ್ಕೇರಿದೆ. ಬರಗಾಲವಿದೆ ಎಂದು ಪಶುಗಳ ನಿರ್ವಹಣೆ ಕೈ ಬಿಡುವಂತಿಲ್ಲ. ದುಬಾರಿ ಆದರೆ ನಿರ್ವಹಿಸುತ್ತಿದ್ದೇವೆ. 10 ರೂ.ನಲ್ಲಿ ಹಾಲು ಉತ್ಪಾದಕರಿಗೆ 7 ರೂಪಾಯಿ, ರೈತರಿಗೆ 7 ರೂಪಾಯಿ ನೀಡುವಂತೆಯು ಪ್ರಸ್ತಾವನೆ ಇದೆ.

ದರಿ ಏರಿಕೆ ಜಾರಿ ತಡ ಯಾಕೆ?

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದ ದರ ಏರಿಕೆಗೆ ತೀರ್ಮಾನಿಸಲಾಗಿದೆ. 8 ರೂಪಾಯಿ ದರ ಹೆಚ್ಚಳ ಫಿಕ್ಸ್ ಆಗಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಇರುವ ಕಾರಣ ಇಡೀ ಸಂಪುಟ ಸದಸ್ಯರು ಜಾರಿ ನಿರ್ಧಾರವನ್ನು ಸಿಎಂ ಡಿಕೆ ಶಿವಕುಮಾರ್ ಅವರ ವಿವೇವಚನೆಗೆ ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+