Metro Price Hike: ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ಬ್ರೇಕ್‌: ಬಿಜೆಪಿ - ಜೆಡಿಎಸ್‌ ನಡುವೆ ಕ್ರೆಡಿಟ್‌ ವಾರ್!

Metro Price Hike: ರಾಜ್ಯ ಸರ್ಕಾರವು ವಿವಿಧ ಸೇವೆಗಳ ಬೆಲೆ ಏರಿಕೆ ಮಾಡುತ್ತಿದ್ದು. ಈ ನಡುವೆ ಬಿಎಂಆರ್‌ಸಿಎಲ್ ಸಹ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವುದಕ್ಕೂ ಮುಂದಾಗಿತ್ತು. ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆಗಳು ನಡೆದಿದ್ದವು.

ಫೆಬ್ರವರಿ 1ರಿಂದ ಬೆಂಗಳೂರಿನ ಮೆಟ್ರೋದ ಪ್ರಯಾಣ ದರ ಹೆಚ್ಚಳವಾಗುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಿರುವುದರಿಂದ ಮೆಟ್ರೋ ಪ್ರಯಾಣ ದರ ಹೆಚ್ಚಳ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಆದರೆ ಪ್ರಯಾಣ ದರ ಹೆಚ್ಚಳ ತಡೆಗೆ ಕ್ರೆಡಿಟ್‌ ತೆಗೆದುಕೊಳ್ಳುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್‌ನ ನಡುವೆ ಕ್ರೆಡಿಟ್‌ ವಾರ್‌ ಮುಸುಕಿನ ಗುದ್ದಾಟ ನಡೆದಿದೆ.

Metro Price Hike Temporary Break on Metro Fare Hike Credit War Between BJP and JDS

ಮೆಟ್ರೋದ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರವು ತಡೆಯೊಡ್ಡಿದೆ. ಅಲ್ಲದೆ ಪ್ರಯಾಣ ದರವನ್ನು ಯಾವ ಕಾರಣಕ್ಕೆ ಹೆಚ್ಚಳ ಮಾಡಲಾಗುತ್ತಿದೆ ವಿವರಣೆ ಕೊಡಿ ಎಂದು ಸಹ ಕೇಳಿದೆ. ಟಿಕೆಟ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಾದರೂ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಲಾಗಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ದರ ಏರಿಕೆಗೆ ಮೂಗುದಾರ ಹಾಕಿದ ಕೇಂದ್ರದ #NDA ಸರ್ಕಾರ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ. ದರ ಏರಿಸಿ ಬೆಂಗಳೂರಿನ ಜನರ ಜೇಬಿಗೆ ಕನ್ನಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ನೇತೃತ್ವದ ಸರ್ಕಾರಕ್ಕೆ ಕೇಂದ್ರದ ಎನ್‌ಡಿಎ ಮೈತ್ರಿ ಸರ್ಕಾರ ತಡೆ ನೀಡಿದೆ ಎಂದು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಕಾಂಗ್ರೆಸ್‌ ಸರ್ಕಾರವು ಮೆಟ್ರೋದ ದರ ಏರಿಕೆಯನ್ನು ಶೇ 45% ಏರಿಕೆ ಮಾಡುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಫೆಬ್ರವರಿ 1ರಿಂದ ಜಾರಿಗೊಳಿಸುವುದಕ್ಕೆ ಮುಂದಾಗಿತ್ತು. ಆದರೆ ಯಾವುದೇ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕಿಂತ ಮುಂಚೆ ಈ ಸಂಬಂಧ ಸಮಗ್ರ ವರದಿ ಸಲ್ಲಿಸಿ ಅಂತ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಬಿಎಂಆರ್‌ಸಿಎಲ್‌ಗೆ ನಿರ್ದೇಶನ ಕೊಟ್ಟಿದೆ ಅಂತ ಜೆಡಿಎಸ್‌ ಹೇಳಿಕೊಂಡಿದೆ.

ಬಿಜೆಪಿ ಸಂಸದರ ಟ್ವೀಟ್‌: ಇನ್ನು ಈ ಸಂಬಂಧ ಬಿಜೆಪಿ ಸಂಸದ ಪಿ.ಸಿ ಮೋಹನ್‌ ಅವರು ಸಹ ಟ್ವೀಟ್‌ ಮಾಡಿದ್ದಾರೆ. ಬಿಎಂಆರ್‌ಸಿಎಲ್‌ ಫೆಬ್ರವರಿ 1ರಿಂದ ನಿಗದಿ ಮಾಡಿದ್ದ ಮೆಟ್ರೋ ಪ್ರಯಾಣ ದರವನ್ನು ಕೇಂದ್ರ ಸರ್ಕಾರವು ತಡೆಹಿಡಿದಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಮಗ್ರ ವರದಿಯನ್ನು ಸಲ್ಲಿಸುವಂತೆ ಮೋದಿ ಸರ್ಕಾರ ಬಿಎಂಆರ್‌ಸಿಎಲ್‌ಗೆ ನಿರ್ದೇಶನ ನೀಡಿದೆ. ಬೆಂಗಳೂರಿನ ಜನರಿಗೆ ಇದೊಂದು ದೊಡ್ಡ ಗೆಲುವು. ಅಲ್ಲದೆ ಬಿಎಂಆರ್‌ಸಿಎಲ್ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನ್ಯಾಯ ಸಮ್ಮತ ಮೆಟ್ರೋ ಬೆಲೆ ನಿಗದಿ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

ಸೈಲೆಂಟ್ ಕ್ರೆಡಿಟ್‌ ವಾರ್: ಇನ್ನು ಮೆಟ್ರೋದ ಬೆಲೆ ಏರಿಕೆ ಮಾಡುವ ನಿರ್ಧಾರ ಸಂಪೂರ್ಣವಾಗಿ ಹಿಂಪಡೆಯಲಾಗಿಲ್ಲ. ಇನ್ನು ವರದಿಯನ್ನಷ್ಟೇ ಕೇಳಲಾಗಿದೆ. ಇದರ ನಡುವೆಯೇ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಪರೋಕ್ಷವಾಗಿ ಕ್ರೆಡಿಟ್‌ವಾರ್‌ ನಡೆಸಿರುವಂತೆ ಇದೆ. ಬಿಎಂಆರ್‌ಸಿಎಲ್‌ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿ ಒಂದೊಮ್ಮೆ ಬೆಂಗಳೂರು ಮೆಟ್ರೋದ ಬೆಲೆ ಏರಿಕೆ ಪ್ರಸ್ತಾವನೆಯನ್ನು ಕೈಬಿಡಬೇಕಾದರೆ ಮುಂದೆ ಇದರ ಕ್ರೆಡಿಟ್‌ ವಾರ್‌ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಮೆಟ್ರೋಗೆ ಬಂಪರ್ ನಿರೀಕ್ಷೆ: ಇನ್ನು ಫೆಬ್ರವರಿ 1ರಂದು ಕೇಂದ್ರ ಬಿಜೆಪಿ ಬಜೆಟ್ ಮಂಡನೆಯಾಗಲಿದ್ದು. ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋ ಸೇವೆ ವಿಸ್ತರಣೆಗೆ ಸಂಬಂಧಿಸಿದಂತೆ ಬಂಪರ್‌ ಸಿಗುವ ನಿರೀಕ್ಷೆ ಇದೆ. ಪ್ರತಿ ಬಾರಿಯೂ ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಬೆಂಗಳೂರಿಗೆ ವಿಶೇಷ ಕೊಡುಗೆಗಳು ಸಿಗುತ್ತವೆ. ಬಜೆಟ್‌ನಲ್ಲಿ ವಿಶೇಷ ಅನುದಾನವನ್ನು ಮೀಸಲಿರಿಸುವ ಅಥವಾ ಸಾರಿಗೆ ಸೇವೆಗೆ ವಿಶೇಷ ಆದ್ಯತೆ ಕೊಡುವುದು ಇದೆ. ಇದೇ ಮಾದರಿಯಲ್ಲಿ ಈ ಬಾರಿಯ ಬಜೆಟ್‌ನಲ್ಲೂ ಬೆಂಗಳೂರು ಮೆಟ್ರೋಗೆ ಅನುದಾನ ಮೀಸಲಿರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+