40ರ ವಿವಾಹಿತ ಧರ್ಮಗುರು ಜತೆ 22ರ ಯುವತಿ ಲವ್! ಪೋಷಕರ ಕಣ್ಣೀರಿಗೂ ಕ್ಯಾರೇ ಎನ್ನದೇ ತೆರಳಿದ್ಲು ಮಗದುಮ್ಮ

ಮಂಗಳೂರು: ಮದುವೆ ಆಗಿರುವ ಮುಸ್ಲಿಂ ಧರ್ಮಗುರು ಪ್ರೀತಿಯ ಬಲೆಗೆ ಬಿದ್ದ 22 ವರ್ಷದ ಯುವತಿಯೊಬ್ಬಳು ಆತನೊಂದಿಗೆ ಓಡಿ ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೋಷಕರು ಪೊಲೀಸ್ ಠಾಣೆಯಲ್ಲಿ ಅಂಗಲಾಚಿ, ಕಣ್ಣೀರಿಡುತ್ತಾ ಬೇಡಿಕೊಂಡರು ಕ್ಯಾರೆ ಎನ್ನದೇ ಆತನೊಂದಿಗೆ ಓಡಿಹೋಗಿ ನಿಖಾ (ಮದುವೆ) ಆಗಿರುವ ಘಟನೆ ಹೆಚ್ಚು ಚರ್ಚೆ ಆಗುತ್ತಿದೆ.

22 ವರ್ಷದ ಯುವತಿ ಮಗದುಮ್ಮ ಬುದ್ವನ್ ಅವರು ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರ ಮನವಿಗೆ ಸ್ಪಂದಿಸದೇ 40 ವರ್ಷದ ಅಶ್ರಫ್ ಸ ಅದಿ ಅವರೊಂದಿಗೆ ಓಡಿ ಹೋಗಿದ್ದಾಳೆ. ಈ ಧರ್ಮಗುರು ಕುಮಟಾದ ಮದರಸಾವೊಂದರಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಯುವತಿ ಆತನೊಂದಿಗೆ ಓಡಿ ಹೋಗಿದ್ದು, ವಿಚಾರ ಗೊತ್ತಾಗುತ್ತಿದ್ದಂತೆ ಮಗಳನ್ನು ಹುಡುಕಿ ಕುಟುಂಬಸ್ಥರು ಮಂಗಳೂರಿಗೆ ಬಂದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಅವರಿಬ್ಬರನ್ನು ಕೊಣಾಜೆ ಠಾಣೆಗೆ ಪೊಲೀಸರು ಕರೆಸಿ ಪೋಷಕರ ಮುಂದೆಯೇ ವಿಚಾರಿಸಿದ್ದಾರೆ.

Mangaluru News

ಯುವತಿ ಹೇಳಿಕೆಗೆ ಕುಟುಂಬಸ್ಥರೇ ಶಾಕ್!

ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಹೇಳಿಕೆ ದಾಖಲಿಸಿದ ಯುವತಿಯು, ತಾನು ಈ ಧರ್ಮಗುರು ಜೊತೆ ತೆರಳುತ್ತೇನೆ, ಅವರನ್ನೇ ವರಿಸುವುದಾಗಿ ಹೇಳಿದ್ದಾಳೆ. ಆಗ ಅವಳ ಮನವೊಲಿಸಲು ಪೋಷಕರು ಎಷ್ಟೇ ಹರಸಾಹಪಟ್ಟರು, ಆಕೆಯ ಮನಸ್ಸು ಬಲದಾಗಿಲ್ಲ. ಪೊಲೀಸರು ಮತ್ತು ಕುಟುಂಬಸ್ಥರ ಕಣ್ಣೆದುರೇ ತಾನು ಮರಳಿ ಬರುವುದಿಲ್ಲ ಎಂದು ಹಠ ಹಿಡಿದು ಧರ್ಮಗುರು ಜೊತೆ ಹೋಗಿದ್ದಾಳೆ. ಇದೆಲ್ಲ ಕಂಡು ಕುಟುಂಬಸ್ಥರು ಠಾಣೆಯಲ್ಲೇ ಅಳ್ಳುತ್ತಾ ನಿಂತ ದೃಶ್ಯ ಎಂಥವರ ಕರುಳನ್ನು ಒಂದು ಕ್ಷಣ ಹಿಂಡಿದಂತಿದೆ.

ಲವ್ ಆಗಿದ್ದೇಗೆ?

ಅಶ್ರಫ್ ಕೆಲಸ ಮಾಡುತ್ತಿದ್ದ ಕುಮಟಾದ ಮದರಸಾದಲ್ಲೇ ಧರ್ಮಶಿಕ್ಷಣಕ್ಕೆ ಕುಮಟಾದ ಬೆಟಗುಳಿ ನಿವಾಸಿ ದಾವುದ್ ಖಾಸಿಂ ಪುತ್ರಿ ಮಗದುಮ್ಮ (22) ಬರುತ್ತಿದ್ದಳು. ಈ ವೇಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ, ಮದುವೆಯಾಗಿ ಮಕ್ಕಳಿದ್ದರೂ ಅಶ್ರಫ್ ಮೂರು ವರ್ಷಗಳಿಂದ ಯುವತಿ ಜೊತೆಗೆ ಒಡನಾಟ ಬೆಳೆಸಿದ್ದಾನೆ. ಇವರಿಬ್ಬರು ಸಂಬಂಧ ಬಹುದೂರ ಸಾಗುತ್ತಿದ್ದಂತೆ ಮನೆಯಿಂದ ಕಾಲ್ಕಿತ್ತಿದ್ದಾರೆ.

ರಿಜಿಸ್ಟ್ರಾರ್ ಮದುವೆ ಆದ ಜೋಡಿ

ಮನೆಯಿಂದ ಓಡಿ ಹೋಗುತ್ತಿದ್ದಂತೆ ನಿಖಾ ಮಾಡಿಕೊಂಡು ರಿಜಿಸ್ಟ್ರಾರ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಮದುವೆ ಆದ ಅಶ್ರಫ್ ತನ್ನ ಮಂಗಳೂರಿನ ಅಸೈಗೋಳಿ ನಿವಾಸಕ್ಕೆ ಯುವತಿ ಕರೆದುಕೊಂಡು ಬಂದಿದ್ದಾರೆ.

ಮದುವೆ ಮುಚ್ಚಿಟ್ಟು ಬಲೆಗೆ ಬೀಳಿಸಿಕೊಂಡ ಆರೋಪ

ಧರ್ಮ ಶಿಕ್ಷಣದ ಹೆಸರಿನಲ್ಲಿ ಯುವತಿಗೆ ಪ್ರೀತಿ ಪ್ರೇಮದ ಗುಂಗು ಹಿಡಿಸಿದ ಈ ಧರ್ಮಗುರು, ಯುವತಿಗೆ ತನ್ನ ಮೊದಲ ಮದುವೆಯ ವಿಚಾರ ಮುಚ್ಚಿಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಮುಸ್ಲಿಂ ಸಮಾಜ ಧರ್ಮಗುರು ಬಹಿಷ್ಕಾರ ಮಾಡುವಂತೆ ಪೋಷಕರ ಒತ್ತಾಯಿಸಿದ್ದಾರೆ ಎಂದು ಸುವರ್ಣ ಸುದ್ದಿ ವಾಹಿನಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+