Bengaluru Metro: ತನ್ನ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವಕನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಯುವತಿ!
ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬರಿಗೆ ಕೆಟ್ಟ ಅನುಭವ ಆಗಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನನಗೆ ಈಗ ನಡುಕ ಶುರುವಾಗಿದೆ. ಮೆಟ್ರೋದಲ್ಲಿ ಒಬ್ಬ ವ್ಯಕ್ತಿ ನನ್ನ ರೆಕಾರ್ಡ್ ಮಾಡುತ್ತಿದ್ದುದನ್ನು ನಾನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ಬೆಂಗಳೂರಿನ ಮೆಟ್ರೋ ಪ್ರಯಾಣದ ವೇಳೆ ತನ್ನನ್ನು ರೆಕಾರ್ಡ್ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಹಿಡಿದ ಸ್ವಲ್ಪ ಸಮಯದ ನಂತರ ಚಿತ್ರೀಕರಿಸಿದ ವೀಡಿಯೊದಲ್ಲಿ ಮಹಿಳೆಯೊಬ್ಬರು ಹೇಳಿದ್ದಾರೆ. ನೆನ್ನೆಯಷ್ಟೇ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬರೊಂದಿಗೆ ವ್ಯಕ್ತಿ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ಬೆಂಗಳೂರು ಮೆಟ್ರೋದಲ್ಲೂ ವ್ಯಕ್ತಿಯೊಬ್ಬ ಯುವತಿಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ, ಇದು ಭಾರೀ ಚರ್ಚೆಗೆ ಕಾರಣವಾಗಿದ್ದು ಅಲ್ಲದೆ ಈ ವಿಚಾರದಲ್ಲಿ ಬೆಂಗಳೂರು ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ.

ವ್ಯಕ್ತಿಯೊಬ್ಬ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿರುವುದನ್ನು ಅವರು ಪತ್ತೆ ಮಾಡಿದ್ದಾರೆ. ಆ ವ್ಯಕ್ತಿಗೆ ಬೈಯುತ್ತಿರುವುದು ಹಾ ಅವನ ಫೋನ್ ಅನ್‌ಲಾಕ್ ಮಾಡುವಂತೆ ಒತ್ತಾಯಿಸುತ್ತಿರುವುದು ವೀಡಿಯೊದಲ್ಲಿದೆ. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. Dr. Deepthi Rao (@RekhaS1990) ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮಂಗಳವಾರ ಸಂಜೆ 4:30ರ ಸುಮಾರಿಗೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಮೆಟ್ರೋ ರೈಲಿನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ. ಸಹ ಪ್ರಯಾಣಿಕನೊಬ್ಬ ತನ್ನನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದ ಎಂದು ಯುವತಿ ಹೇಳಿದ್ದಾರೆ.
ತನ್ನ ರೆಕಾರ್ಡ್ ಮಾಡಿದ ವ್ಯಕ್ತಿಯೊಂದಿಗೆ ಯುವತಿ ಮಾತನಾಡುತ್ತಿರುವುದು ಸಹ ವೀಡಿಯೊದಲ್ಲಿದೆ. ಅವನ ಫೋನ್ ಹಿಡಿದುಕೊಂಡು, ಅವಳು ಪದೇ ಪದೇ "ನನ್ನನ್ನು ಏಕೆ ರೆಕಾರ್ಡ್ ಮಾಡುತ್ತಿದ್ದೀಯಾ?" ಎಂದು ಕೇಳಿದ್ದಾಳೆ. ಅಲ್ಲದೆ ಮೊಬೈಲ್ ಲಾಕ್ ತೆಗೆಯುವಂತೆ ಒತ್ತಾಯಿಸಿದ್ದಾಳೆ. ಅಲ್ಲದೆ ನಾನೇ ವಿಡಿಯೋ ನೋಡುತ್ತೇನೆ ಫೋನ್ ಕೊಡು ಅಂತ ಯುವತಿ ಒತ್ತಾಯಿಸಿದ್ದಾರೆ.
"ನಾನು ಅವನ ಫೋನ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಿದೆ. ಆದರೆ ಅವನು ಓಡಿ ಹೋದ ಎಂದಿದ್ದಾರೆ. ನಿಲ್ದಾಣಕ್ಕೆ ಬಂದಾಗ ಅವನು ಮೆಟ್ರೋದಿಂದ ಓಡಿಹೋದ. ನಾನು ಅವನ ಫೋನ್ ಅನ್ನು ಹಿಡಿದು, ಭದ್ರತಾ ಸಿಬ್ಬಂದಿಗೆ ಕೊಟ್ಟೆ, ಆದರೆ ಅವನು ಅದನ್ನು ಕಸಿದುಕೊಂಡು ಓಡಿಹೋದನು. ದಯವಿಟ್ಟು ಬೆಂಗಳೂರಿನವರೇ, ಈ ವ್ಯಕ್ತಿಯನ್ನು ಹುಡುಕಿ, ಅವನ ಕಂಪನಿಯನ್ನು ಹುಡುಕಿ, ಅವನ ಕುಟುಂಬವನ್ನು ಹುಡುಕಿ. ನಾನು ಮೆಟ್ರೋ ನಿಲ್ದಾಣಕ್ಕೆ ಅಧಿಕೃತ ದೂರು ನೀಡಿದ್ದೇನೆ. ಅವರು 7 ದಿನಗಳಲ್ಲಿ ಫಾಲೋ ಅಪ್ ಮಾಡುವುದಾಗಿ ಹೇಳಿದ್ದಾರೆ'
ನಂತರ ವಿಡಿಯೋದಲ್ಲಿ ಮೆಟ್ರೋ ಲಿಫ್ಟ್‌ನಲ್ಲಿ ಇಬ್ಬರು ಮಾತನಾಡುತ್ತಿರುವಂತೆ ತೋರಿಸಲಾಗಿದೆ. ಯುವತಿ ಆ ವ್ಯಕ್ತಿಗೆ, "ನಾನು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತೇನೆ' ಎಂದಿದ್ದಾರೆ. ಇದಕ್ಕೆ ಆ ವ್ಯಕ್ತಿ "ಕ್ಷಮಿಸಿ' ಎಂದಿದ್ದಾನೆ. "ನೀವು ಕ್ಷಮಿಸಿ? ಹಾಗಾದರೆ ನೀವು ನನ್ನನ್ನು ರೆಕಾರ್ಡ್ ಮಾಡಿದ್ದೀರಿ ಎಂದು ಒಪ್ಪಿಕೊಳ್ಳುತ್ತೀರಾ?" ಅಂತ ಕೇಳಿದ್ದಾಳೆ. ಆದರೆ ಇದಕ್ಕೆ ಆ ವ್ಯಕ್ತಿ "ಇಲ್ಲ' ಎಂದಿದ್ದಾನೆ.
ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು
ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ದಯವಿಟ್ಟು ಘಟನೆ ನಡೆದ ನಿಖರವಾದ ಸ್ಥಳವನ್ನು ಒದಗಿಸಿ ಮತ್ತು ನಿಮ್ಮ ಸಂಪರ್ಕ ಸಂಖ್ಯೆಯನ್ನು ಡಿಎಂ ಮಾಡಿ" ಎಂದು ಪೊಲೀಸರು ಕಾಮೆಂಟ್ ಮಾಡಿದ್ದಾರೆ. ನಂತರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ, ಎಫ್‌ಐಆರ್ ದಾಖಲಿಸಿದ್ದಾರೆ ಮತ್ತು ತನಿಖೆ ನಡೆಯುತ್ತಿದೆ ಎಂದೂ ಮತ್ತೊಂದು ವಿಡಿಯೋದಲ್ಲಿ ಯುವತಿ ಅಪ್ಡೇಟ್ಸ್ ಕೊಟ್ಟಿದ್ದಾರೆ.
Please look into this matter and ensure accountability.@BlrCityPolice @OfficialBMRCL https://t.co/EBTFGnUk48
— Dr. Deepthi Rao (@RekhaS1990) October 27, 2026


Click it and Unblock the Notifications
