ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಂದ ಚಾಮುಂಡಿ ಬೆಟ್ಟದಲ್ಲಿ ಪೂಜೆ

Recommended Video

      Lok Sabha Elections 2019: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಶ್

      ಮೈಸೂರು/ಮಂಡ್ಯ ಏ.18: ಲೋಕಸಭಾ ಚುನಾವಣೆಗೆ ಮಂಡ್ಯ, ಮೈಸೂರಿನಲ್ಲಿ ಮತದಾನ ಈಗಾಗಲೇ ಆರಂಭವಾಗಿದ್ದು, ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಳಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

      ಮೈಸೂರು-ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮತದಾನ 7 ಗಂಟೆಗೆ ಆರಂಭಗೊಂಡಿದೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2187 ಮತಗಟ್ಟೆಗಳಿವೆ. ನಗರ ವ್ಯಾಪ್ತಿಯಲ್ಲಿ 986 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಮತದಾನಕ್ಕಾಗಿ 5084 ಬ್ಯಾಲೆಟ್ ಯುನಿಟ್ ಬಳಕೆ ಮಾಡಲಾಗುತ್ತಿದೆ.

      2671 ಕಂಟ್ರೋಲ್ ಯುನಿಟ್, 2717 ವಿವಿ ಪ್ಯಾಟ್ ಗಳ ಬಳಕೆ ಮಾಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಚುನಾವಣಾ ಆಯೋಗವು ಹೆಚ್ಚುವರಿ ಮತಯಂತ್ರ ತರಿಸಿಕೊಂಡಿದೆ. ಒಟ್ಟಾರೆ ಮೈಸೂರಿನಲ್ಲಿ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

      Mandya candidate Sumalatha offers special Pooja at Chamundeshwari Temple

      ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಭದ್ರತೆಗೆ ಹೆಚ್ಚಿನ ಮಹತ್ವ ಇದ್ದು, ಶಾಂತಿಯುತ ಮತದಾನಕ್ಕಾಗಿ 3 ಸಾವಿರಕ್ಕೂ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳ ನಿಯೋಜಿಸಲಾಗಿದೆ.

      1562 ಪೋಲಿಸ್ ಹಾಗೂ ಹೋಂಗಾರ್ಡ್ ಸಿಬ್ಬಂದಿಗಳ ನಿಯೋಜನೆ.., 4 ksrp ತುಕಡಿ, ಸಿಆರ್ ಪಿಎಫ್ ಹಾಗೂ ಅಶ್ವರೋಹಿ ದಳ 20 ನಿಯೋಜನೆ ಮಾಡಲಾಗಿದೆ. ಒಟ್ಟು ಈ ಬಾರಿಯ ಚುನಾವಣೆಯ ಮತದಾರರ ಸಂಖ್ಯೆ 98,95,056 ಮತದಾರರಿದ್ದಾರೆ.

      ಪುರುಷ ಮತದಾರರು 9.44.819, ಮಹಿಳಾ 9.50.087, ಇತರೆ 150 ಮತದಾರರಿದ್ದಾರೆ, 2,406 ಮತಗಟ್ಟೆ ಅಧಿಕಾರಿ, 2.406 ಅಷ್ಟೆ ಸಹಾಯ ಅಧಿಕಾರಿ , 4816 ಮತದಾನ ಅಧಿಕಾರಿಗಳು, ಮಸ್ಟರಿಂಗ್ ಕಾರ್ಯಕ್ಕೆ 405 ಕೆಎಸ್‌ಆರ್‌ಟಿ ಬಸ್, 114 ಜೀಪ್ 95 ಮಿನಿ ಬಸ್ಗಳ ಬಳಕೆ, ಮೈಸೂರು ಕೊಡಗು ಲೋಕಸಭಾ ವ್ಯಾಪ್ತಿಗೆ 11, ಸಖಿ 22 ಮತಗಟ್ಟೆಯಲ್ಲಿ ಮತದಾನ ಆರಂಭಗೊಂಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+