ರಾಜ್ಯದಲ್ಲಿ ತಗ್ಗಿದ ಮಳೆಯ ಆರ್ಭಟ: ಜಲಾಶಯಗಳ ನೀರಿನ ಮಟ್ಟ ಹೇಗಿದೆ ?
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವರುಣಾರ್ಭಟ ತುಸು ಇಳಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಧಾರಾಕಾರ ಮಳೆಯಾಗಿದೆ. ಈ ಬಾರಿ ಹಿಂಗಾರು ಮಳೆ ಹೆಚ್ಚಾಗಿಯೇ ಆಗಿದೆ. ಇದೀಗ ಮಳೆ ತುಸು ಇಳಿಕೆಯಾಗಿದೆ. ಆದರೆ, ಮುಂದಿನ ಒಂದು ವಾರದ ಅವಧಿಯಲ್ಲಿ ಕರ್ನಾಟಕದ ವಿವಿಧ ಭಾಗದಲ್ಲಿ ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಹಿಂಗಾರು ಮಳೆ ತುಸು ಬಿಡುವು ಕೊಟ್ಟಿದೆ. ಆದರೆ, ಸಾಧಾರಣ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಅಕ್ಟೋಬರ್ 27ರ ವರೆಗೆ ರಾಜ್ಯದಲ್ಲಿ ಹಿಂಗಾರು ಮಳೆಯ ಆರ್ಭಟ ಹೆಚ್ಚಾಗಿ ಇರಲಿದೆ. ಇದಾದ ನಂತರ ತುಸು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಅದರಂತೆ ರಾಜ್ಯದಲ್ಲಿ ಮಳೆಯ ಆರ್ಭಟ ತುಸು ಇಳಿಕೆಯಾಗಿದೆ. ಈ ನಡುವೆ ಭರ್ಜರಿ ಹಿಂಗಾರಿನಿಂದಾಗಿ ರಾಜ್ಯದ ಹಲವು ಜಲಾಶಯಗಳು ಭರ್ತಿಯಾಗಿವೆ.

ಈ ಬಾರಿ ಹಿಂಗಾರು ಮಳೆ ನಿರೀಕ್ಷೆಗಿಂತ ಹೆಚ್ಚಾಗಿಯೇ ಆಗಿದೆ. ಇದರಿಂದ ಈಗಾಗಲೇ ಹಲವು ಜಲಾಶಯಗಳು ಭರ್ತಿಯಾಗಿವೆ. ನದಿ ಹಾಗೂ ಕೆರೆಗಳು ತುಂಬಿ ಹರಿಯುತ್ತಿವೆ. ಕರ್ನಾಟಕದ ಹಲವು ಜಲಾಶಯಗಳು ತುಂಬಿ ಹರಿಯುತ್ತಿದ್ದು, ಕೆಲವು ಜಲಾಶಯಗಳು ವರ್ಷದಲ್ಲಿ ಎರಡೆರಡು ಬಾರಿ ಭರ್ತಿಯಾಗಿವೆ.
ವಿವಿಧ ಜಲಾಶಯಗಳ ನೀರಿನ ಮಟ್ಟ ಈ ರೀತಿ ಇದೆ.
ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 8.50 ಟಿಎಂಸಿ
ಇಂದಿನ ನೀರಿನ ಮಟ್ಟ: 7.49 ಟಿಎಂಸಿ
ಹೊರಹರಿವು: 1,300 ಕ್ಯೂಸೆಕ್ಸ್
ಒಳಹರಿವು: 157 ಕ್ಯೂಸೆಕ್ಸ್
ಸೂಪಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 145.33 ಟಿಎಂಸಿ
ಇಂದಿನ ನೀರಿನ ಮಟ್ಟ: 138.85 ಟಿಎಂಸಿ
ಹೊರಹರಿವು: 4418 ಕ್ಯೂಸೆಕ್ಸ್
ಒಳಹರಿವು: 1009 ಕ್ಯೂಸೆಕ್ಸ್
ವಾರಾಹಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 31.10 ಟಿಎಂಸಿ
ಇಂದಿನ ನೀರಿನ ಮಟ್ಟ: 29.22 ಟಿಎಂಸಿ
ಹೊರಹರಿವು: 1,291 ಕ್ಯೂಸೆಕ್ಸ್
ಒಳಹರಿವು: 190 ಕ್ಯೂಸೆಕ್ಸ್
ಕಬಿನಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 19.52 ಟಿಎಂಸಿ
ಇಂದಿನ ನೀರಿನ ಮಟ್ಟ: 19.17 ಟಿಎಂಸಿ
ಹೊರಹರಿವು: 1,300 ಕ್ಯೂಸೆಕ್ಸ್
ಒಳಹರಿವು: 273 ಕ್ಯೂಸೆಕ್ಸ್
ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 71.54 ಟಿಎಂಸಿ
ಇಂದಿನ ನೀರಿನ ಮಟ್ಟ: 71.48 ಟಿಎಂಸಿ
ಹೊರಹರಿವು: 3,207 ಕ್ಯೂಸೆಕ್ಸ್
ಒಳಹರಿವು: 2,607 ಕ್ಯೂಸೆಕ್ಸ್
ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 105.79 ಟಿಎಂಸಿ
ಇಂದಿನ ನೀರಿನ ಮಟ್ಟ: 101.77 ಟಿಎಂಸಿ
ಹೊರಹರಿವು: 15,626 ಕ್ಯೂಸೆಕ್ಸ್
ಒಳಹರಿವು: 15,626 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 51.00 ಟಿಎಂಸಿ
ಇಂದಿನ ನೀರಿನ ಮಟ್ಟ: 50.97 ಟಿಎಂಸಿ
ಹೊರಹರಿವು: 2,286 ಕ್ಯೂಸೆಕ್ಸ್
ಒಳಹರಿವು: 2,286 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 37.73 ಟಿಎಂಸಿ
ಇಂದಿನ ನೀರಿನ ಮಟ್ಟ: 37.73 ಟಿಎಂಸಿ
ಹೊರಹರಿವು: 1694 ಕ್ಯೂಸೆಕ್ಸ್
ಒಳಹರಿವು: 1694 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ: 123.08 ಟಿಎಂಸಿ
ಇಂದಿನ ನೀರಿನ ಮಟ್ಟ: 123.08 ಟಿಎಂಸಿ
ಒಳಹರಿವು: 22,411 ಕ್ಯೂಸೆಕ್ಸ್
ಹೊರಹರಿವು: 22,411 ಕ್ಯೂಸೆಕ್ಸ್
ನಾರಾಯಣಪುರ ಜಲಾಶಯ
ಗರಿಷ್ಠ ನೀರಿನ ಮಟ್ಟ: 33.31 ಟಿಎಂಸಿ
ಇಂದಿನ ನೀರಿನ ಮಟ್ಟ: 32.27 ಟಿಎಂಸಿ
ಹೊರಹರಿವು: 20,317 ಕ್ಯೂಸೆಕ್ಸ್
ಒಳಹರಿವು: 21,414 ಕ್ಯೂಸೆಕ್ಸ್
ವಾಣಿ ವಿಲಾಸ ಸಾಗರ
ಗರಿಷ್ಠ ನೀರಿನ ಮಟ್ಟ: 30.42 ಟಿಎಂಸಿ
ಇಂದಿನ ನೀರಿನ ಮಟ್ಟ: 27.78 ಟಿಎಂಸಿ
ಹೊರಹರಿವು: 133 ಕ್ಯೂಸೆಕ್ಸ್
ಒಳಹರಿವು: 1,040 ಕ್ಯೂಸೆಕ್ಸ್












Click it and Unblock the Notifications