ಲೋಕಸಭೆ ಚುನಾವಣೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆಲ್ಲಬಹುದಾದ ಸ್ಥಾನಗಳೆಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಮೇ 17: 2023 ರ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆಲ್ಲುವ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೊಟ್ಟ ಟಾರ್ಗೆಟ್ ನಂತೆ 20 ಕ್ಕೂ ಹೆಚ್ಚು ಸ್ಥಾನವನ್ನ ಗೆಲ್ಲುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಹಂತದಲ್ಲಿ ನಡೆದಿದ್ದು, ಮೈತ್ರಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಸೋಲು ಗೆಲುವಿನ ಲೆಕ್ಕಾಚಾರವನ್ನ ನಡೆಸಿದ್ದಾರೆ.
ಹೌದು, ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ಮೇ 7 ರಂದು ಎರಡನೇ ಹಂತದ ಚುನಾವಣೆ ನಡೆದಿದ್ದು, ಎಲ್ಲರ ಚಿತ್ತ ಜೂನ್ 4ರ ಫಲಿತಾಂಶದ ಕಡೆ ನೆಟ್ಟಿದೆ. ಇದರ ನಡುವೆ ಆಡಳಿತರೂಢ ಕಾಂಗ್ರೆಸ್ ಕನಿಷ್ಟ 20 ಸ್ಥಾನಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ರೆ, ಕಾಂಗ್ರೆಸ್ ಠಕ್ಕರ್ ಕೊಡುವ ನಿಟ್ಟಿನಲ್ಲಿ 20 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹಲವು ಬಿಜೆಪಿ ನಾಯಕರು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

ಇತ್ತ ಆಂತರಿಕ ವರದಿಯೊಂದು ಕಾಂಗ್ರೆಸ್ ನಾಯಕರ ಕೈ ಸೇರಿದ್ದು, ವರದಿಯಲ್ಲಿನ ಅಂಕಿ ಅಂಶಗಳ ಲೆಕ್ಕವನ್ನ ಕಂಡು ರಾಜ್ಯ ಕಾಂಗ್ರೆಸ್ ನಾಯಕರ ಸಂತಸದಲ್ಲಿದ್ದಾರೆ ಎನ್ನಲಾಗಿದೆ. ಈ ವರದಿಯಲ್ಲಿ ಬಿಜೆಪಿಗಿಂತಲೂ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆಯನ್ನ ಮಾಡಿದೆ ಎಂಬ ವಿಶ್ವಾಸವನ್ನ ರಾಜ್ಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಗೆಲ್ಲಬಹುದಾದ ಕ್ಷೇತ್ರಗಳು?
ಚಾಮರಾಜನಗರ - ಕಾಂಗ್ರೆಸ್
ತುಮಕೂರು- ಕಾಂಗ್ರೆಸ್
ಚಿತ್ರದುರ್ಗದ - ಕಾಂಗ್ರೆಸ್
ಕಲಬುರಗಿ - ಕಾಂಗ್ರೆಸ್
ಕೊಪ್ಪಳ - ಕಾಂಗ್ರೆಸ್
ಬೆಳಗಾವಿ - ಕಾಂಗ್ರೆಸ್
ದಾವಣಗೆರೆ - ಕಾಂಗ್ರೆಸ್ ( 50 -50 )
ಬೆಂ,ಗ್ರಾಮಾಂತರ - ಕಾಂಗ್ರೆಸ್ ( 50 - 50)
ಜೆಡಿಎಸ್ ಗೆಲ್ಲಬಹುದಾದ ಕ್ಷೇತ್ರಗಳು?
ಮಂಡ್ಯ - ಜೆಡಿಎಸ್
ಹಾಸನ- ಜೆಡಿಎಸ್
ಕೋಲಾರ -ಜೆಡಿಎಸ್
ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳು?
ಚಿಕ್ಕೋಡಿ - ಬಿಜೆಪಿ
ಮೈಸೂರು- ಬಿಜೆಪಿ
ಚಿಕ್ಕಬಳ್ಳಾಪುರ - ಬಿಜೆಪಿ
ಬಳ್ಳಾರಿ- ಬಿಜೆಪಿ
ವಿಜಯಪುರ- ಬಿಜೆಪಿ
ರಾಯಚೂರು- ಬಿಜೆಪಿ
ಕಲಬುರಗಿ- ಬಿಜೆಪಿ
ಉತ್ತರ ಕನ್ನಡ - ಬಿಜೆಪಿ
ದಕ್ಷಿಣ ಕನ್ನಡ- - ಬಿಜೆಪಿ
ಉಡುಪಿ -ಚಿಕ್ಕಮಗಳೂರು- ಬಿಜೆಪಿ
ಧಾರವಾಡ- ಬಿಜೆಪಿ
ಬೆಂಗಳೂರು ದಕ್ಷಿಣ- ಬಿಜೆಪಿ
ಬೆಂಗಳೂರು ಉತ್ತರ- ಬಿಜೆಪಿ
ಬೆಂಗಳೂರು ಸೆಂಟ್ರಲ್- ಬಿಜೆಪಿ
ಶಿವಮೊಗ್ಗ- ಬಿಜೆಪಿ
ಬೀದರ್- ಬಿಜೆಪಿ
ಬಾಗಲಕೋಟೆ- ಬಿಜೆಪಿ












Click it and Unblock the Notifications