ಚುನಾವಣಾ ಕಾಲದಲ್ಲಿ ಏನಿದು ಲಿಂಗಾಯಿತ ಸಮುದಾಯ ಇಬ್ಬಾಗದ ಕೂಗು?

Posted By:
Subscribe to Oneindia Kannada

ನೆಲನೊಂದೇ ಹೊಲಗೇರಿ ಶಿವಾಲಯಕ್ಕೆ, ಜಲವೊಂದೇ ಶೌಚಾ ಚಮನಕ್ಕೆ, ಕುಲವೊಂದೇ ತನ್ನ ತಾನರಿದವಂಗೆ, ಫಲವೊಂದೇ ಫಡದರ್ಶನ ಮುಕ್ತಿಗೆ, ನಬಿಲವೊಂದೇ ಕೂಡಲ ಸಂಗಮದೇವ... (ನಾವು ಆಚರಿಸುವ ಆಚರಣೆಗಳಿಂದ ಮಾತ್ರ ಉತ್ತಮ, ಅಧಮರೆನಿಸಿಕೊಳ್ಳುತ್ತೇವೆ ಹೊರತು ಜಾತಿ, ಧರ್ಮದಿಂದಲ್ಲಾ)

ವೀರಶೈವ ಮತ್ತು ಲಿಂಗಾಯಿತ ಬೇರೆ ಬೇರೆ ಧರ್ಮಗಳು ಎನ್ನುವ ಏಳು ದಶಕಗಳ ಹಿಂದಿನ ಸಣ್ಣಕೂಗು, ಚುನಾವಣಾ ಈ ವರ್ಷದಲ್ಲಿ ದೊಡ್ಡಕೂಗಾಗಿ ಮುನ್ನೆಲೆಗೆ ಬಂದು ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಜಗತ್ತಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದ ಬಸವಣ್ಣನ ಹೆಸರಿನಲ್ಲಿ ವೀರಶೈವ/ ಲಿಂಗಾಯಿತ ಧರ್ಮ ಇಬ್ಭಾಗದತ್ತ ಸಾಗಿದೆ.

ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

ಹಿಂದಿನ ಎಲ್ಲಾ ಸರಕಾರದ ಅವಧಿಯಲ್ಲೂ ಸಮುದಾಯ ಬೇರೆಬೇರೆಯಾಗ ಬೇಕು ಎನ್ನುವ ಕೂಗಿಗೆ, ಬುಧವಾರ (ಜುಲೈ 19) ಬೀದರ್ ನಲ್ಲಿ ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ನೇತೃತ್ವದಲ್ಲಿ ಶಕ್ತಿ ಪ್ರದರ್ಶನದಂತೆ ನಡೆದ ಲಿಂಗಾಯಿತ ಸಮುದಾಯದ ಸಮಾವೇಶ ಹೊಸ ಮುನ್ನುಡಿ ಬರೆದಿದೆ.

ಇದಾದ ಮರುದಿನವೇ ಧಾರವಾಡದಲ್ಲಿ ನಡೆದ ವೀರಶೈವ ಮಹಾಸಭಾದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಭರವಸೆಯ ಮಾತಿನ ನಂತರ ಸಮುದಾಯದ ಇಬ್ಬಾಗ ಹೊಸ ವೇಗ ಪಡೆಯುವ ಸಾಧ್ಯತೆಯಿಲ್ಲದಿಲ್ಲ.

ರಾಜ್ಯದ ಜಾತಿ ಲೆಕ್ಕಾಚಾರಣದಲ್ಲಿ ಲಿಂಗಾಯಿತ ಸಮುದಾಯ ಮೊದಲ ಸ್ಥಾನದಲ್ಲಿ ನಿಲ್ಲುವುದರಿಂದ, ಈ ಸಮುದಾಯದ ಮತ ಎಲ್ಲಾ ಪಕ್ಷಗಳಿಗೂ ಅತ್ಯಂತ ನಿರ್ಣಾಯಕ. ಹಾಗಾಗಿ, ಚುನಾವಣಾ ವರ್ಷವಾಗಿರುವುದರಿಂದ ಈಗ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳ ಹಿಂದೆ ರಾಜಕೀಯ ದುರ್ವಾಸನೆ ಯಾಕಿರಬಾರದು ಎನ್ನುವುದಕ್ಕೆ ಕಾರಣಗಳು ಹಲವು.. ಮುಂದೆ ಓದಿ

ಬೀದರ್ ನಲ್ಲಿ ನಡೆದ ಬೃಹತ್ ಸಮಾವೇಶ

ಬೀದರ್ ನಲ್ಲಿ ನಡೆದ ಬೃಹತ್ ಸಮಾವೇಶ

ಬೀದರ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮಾತೆ ಮಹಾದೇವಿ, ವೀರಶೈವ ಮತ್ತು ಲಿಂಗಾಯಿತ ಎರಡು ಬೇರೆ ಬೇರೆ ಧರ್ಮ. ಇವೆರಡೂ ಬೇರೆ ಬೇರೆ ಎಂದು ಮುಕ್ತ ವೇದಿಕೆಯಲ್ಲಿಇತಿಹಾಸ ತಜ್ಞರ ಜೊತೆ ಮಾತನಾಡಲು ನಾನು ಸಿದ್ದ. ವೀರಶೈವ ಎನ್ನುವ ಪದವನ್ನು ಲಿಂಗಾಯಿತ ಎನ್ನುವ ಪದದ ಜೊತೆ ತುಳುಕು ಹಾಕುವುದು ನಿಂತರೆ, ನಮ್ಮ ಧರ್ಮಕ್ಕೆ ಮಾನ್ಯತೆ ಯಾಕೆ ಸಿಗುವುದಿಲ್ಲ ಎಂದು ಮಾತೆ ಹೇಳಿದ್ದರು.

ಸಿದ್ದರಾಮಯ್ಯ ಭರವಸೆಯ ಮಾತು

ಸಿದ್ದರಾಮಯ್ಯ ಭರವಸೆಯ ಮಾತು

ಬೀದರ್ ಸಮಾವೇಶದ ಮರುದಿನವೇ ಸಿಎಂ ಸಿದ್ದರಾಮಯ್ಯ, ವೀರಶೈವ ಸಮಾವೇಶದಲ್ಲಿ ಮಾತನಾಡಿದ ರೀತಿ ಈ ಎಲ್ಲಾ ವಿದ್ಯಮಾನಕ್ಕೆ ರಾಜಕೀಯ ಟ್ವಿಸ್ಟ್ ಬರಲಾರಂಭಿಸಿತು. ಎರಡೂ ಧರ್ಮಗಳು ಬೇರೆ ಬೇರೆ ಎನ್ನುವ ಕೂಗು ಇಂದು ನಿನ್ನೆಯದಲ್ಲ. ಈಗ ದೊಡ್ಡ ಪ್ರಮಾಣದ ಹೋರಾಟ ಆರಂಭವಾಗಿದೆ. ಎಲ್ಲರೂ ಒಟ್ಟಾಗಿ ಬಂದರೆ ಕೇಂದ್ರಕ್ಕೆ ಇವರಡೂ ಬೇರೆ ಬೇರೆ ಧರ್ಮ ಎಂದು ಶಿಫಾರಸು ಮಾಡುತ್ತೇನೆಂದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಉತ್ತರ ಕರ್ನಾಟಕದ ಪ್ರಭಲ ಸಮುದಾಯ

ಉತ್ತರ ಕರ್ನಾಟಕದ ಪ್ರಭಲ ಸಮುದಾಯ

ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಅತ್ಯಂತ ಪ್ರಭಲ ಸಮುದಾಯವಾಗಿರುವ ಲಿಂಗಾಯಿತ ಸಮುದಾಯದ ಮೇಲೆ ಬಿಜೆಪಿಗೆ, ಅದಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪನವರಿಗೆ ಹಿಡಿತ ಜಾಸ್ತಿ. ಬಿಎಸ್ವೈ, ಕೆಜಿಪಿ ಸ್ಥಾಪಿಸಿದಾಗಲೂ, ಬಿಜೆಪಿಗೆ ಹೊಡೆದ ಬಿದ್ದಿದ್ದೇ ಈ ಭಾಗದಿಂದ. ಹಾಗಾಗಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತಬ್ಯಾಂಕಿಗೆ ಕೈಹಾಕಲು ಸಿದ್ದರಾಮಯ್ಯ ನಡೆಸುತ್ತಿರುವ ಭರ್ಜರಿ ರಾಜಕೀಯ ಇದು ಯಾಕಿರಬಾರದು ಎನ್ನುವುದು ಈಗ ಚರ್ಚೆಯ ವಿಷಯ.

ಕಾವೇರಿ ಜಲಾಯನ ಪ್ರದೇಶ

ಕಾವೇರಿ ಜಲಾಯನ ಪ್ರದೇಶ

ಪ್ರಮುಖವಾಗಿ ಜೆಡಿಎಸ್ಸಿನ ಮತಬ್ಯಾಂಕ್ ಏನಿದ್ದರೂ ಕಾವೇರಿ ಜಲಾಯನ ಪ್ರದೇಶ, ಅದು ಬಿಟ್ಟರೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ. ಅದಕ್ಕಿಂತಲೂ ನೇರವಾಗಿ ಹೇಳಬೇಕೆಂದರೆ ಒಕ್ಕಲಿಗ ಸಮುದಾಯ. ಈ ಸಮುದಾಯದ ಮಂಚೂಣಿಯಲ್ಲಿ ದೊಡ್ಡ ಗೌಡ್ರು ಇದ್ರೂ, ಕಾಂಗ್ರೆಸ್ಸಿನಲ್ಲಿ ಗೌಡ್ರಿಗೆ ಚಾಲೆಂಜ್ ಮಾಡುವ ಹಲವು ಮುಖಂಡರಿದ್ದಾರೆ. ಜೊತೆಗೆ, ಕನ್ನಡ.. ಕನ್ನಡ.. ಎನ್ನುವ ಇತ್ತೀಚಿನ ಮುಖ್ಯಮಂತ್ರಿಗಳ ಸಿಕ್ಸರ್ ನಿಂದ ಜೆಡಿಎಸ್ ಪ್ರಾದೇಶಿಕ ಪಕ್ಷ ಎನ್ನುವ ಸೆಂಟಿಮೆಂಟಿಗೆ ಸಿಎಂ ಒಂದು ರೌಂಡ್ ಟಾಂಗ್ ಕೊಟ್ಟಾಗಿದೆ.

ಯಡಿಯೂರಪ್ಪ ನಿಲುವೇನು?

ಯಡಿಯೂರಪ್ಪ ನಿಲುವೇನು?

ಲಿಂಗಾಯಿತ ಅಥವಾ ವೀರಶೈವ ಧರ್ಮವನ್ನು ಇಬ್ಬಾಗ ಮಾಡುವ ಪ್ರಯತ್ನಕ್ಕೆ ಯಡಿಯೂರಪ್ಪ ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಒಂದು ವೇಳೆ ಈ ಸಮುದಾಯ ಬೇರೆಬೇರೆಯಾದರೆ, ಒಂದು ಸಮುದಾಯದ ಒಲವು ಸಿದ್ದರಾಮಯ್ಯನವರ ಪಕ್ಷದ ಮೇಲೆ ತಿರುಗುವ ಸಾಧ್ಯತೆಯಿಲ್ಲದಿಲ್ಲ. ಈ ಪ್ರಯತ್ನದಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರೆ, ಬಿಜೆಪಿಗಾಗುವ ಬಹುದೊಡ್ಡ ಹಿನ್ನಡೆಯಿದು.

ಸಮುದಾಯದ ಬಹುತೇಕ ಪೀಠಾಧಿಪತಿಗಳ ವಿರೋಧ

ಸಮುದಾಯದ ಬಹುತೇಕ ಪೀಠಾಧಿಪತಿಗಳ ವಿರೋಧ

ಬಸವಣ್ಣ ನಮ್ಮ ಗುರುಗಳು, ವಚನ ನಮ್ಮ ಧರ್ಮಗ್ರಂಧ, ಮಾತೆ ಮಹಾದೇವಿಗೆ ಹೆಸರುಗಳಿಸಬೇಕು ಎನ್ನುವ ಹುಚ್ಚು. ವೀರಶೈವ ಮತ್ತು ಲಿಂಗಾಯಿತ ಎರಡೂ ಒಂದೇ ಸಮುದಾಯ ಎಂದು ಸಮುದಾಯವನ್ನು ಇಬ್ಬಾಗ ಮಾಡುವ ಪ್ರಯತ್ನಕ್ಕೆ ಸಮುದಾಯದ ಬಹುತೇಕ ಪೀಠಾಧಿಪತಿಗಳ ಮತ್ತು ಜನರ ವಿರೋಧವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dominant Lingayat community in Karnataka seeking its own religious status. It is interesting to note that this demand comes just months before Karnataka goes to polls in 2018.
Please Wait while comments are loading...