KSRTC: ಹೊಸ 2000 ಬಸ್ ಖರೀದಿ,ಕ್ಯಾಶ್‌ಲೆಸ್ ಪ್ರಯಾಣ ಯೋಜನೆ ಜಾರಿ, ಯಾವ ಬಸ್‌ಗಳು ಎಷ್ಟು ಖರೀದಿ? ಅಂಕಿ ಸಂಖ್ಯೆ, ಮಾಹಿತಿ
ಬೆಂಗಳೂರು, ಜನವರಿ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಾಡಿನ ಜನರಿಗೆ ನಾಡಿಮಿಡಿತ ಅರ್ಥ ಮಾಡಿಕೊಂಡಂತಿದೆ. ಏಕೆಂದರೆ ಅವರು ತರುತ್ತಿರುವ ಹೊಸ ಹೊಸ ಬಸ್‌ಗಳು, 'ಇವಿ'ಗಳಿಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜನರು ಹೊಸ ಯೋಜನೆಗಳಿಗೆ ಮನಸೋತಿದ್ದಾರೆ. ಇದನ್ನೆ ಗಮನದಲ್ಲಿಟ್ಟುಕೊಂಡು ಕೆಎಸ್‌ಆರ್‌ಟಿಸಿ 2024ರಲ್ಲಿ ಸಾವಿರಾರು ಬಸ್‌ಗಳನ್ನು, ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಈ ವರ್ಷ ತನ್ನ ಯೋಜನೆಗಳನ್ನು ಮತ್ತಷ್ಟು ವಿಸ್ತರಿಸಿಕೊಡಿದೆ. ಈ ಮೂಲಕ ಕರ್ನಾಟಕದ ಜನರಿಗೆ ವಿವಿಧ ಸುಮಾರು 2000 ಬಸ್‌ಗಳನ್ನು ಪರಿಚಯಿಸುತ್ತಿದೆ. ಜೊತೆಗೆ ನಗದು ರಹಿತ ಬಸ್ ಪ್ರಯಾಣಕ್ಕೂ ವ್ಯವಸ್ಥೆ ಮಾಡುತ್ತಿದೆ ಎಂದು 'ದಿ ಹಿಂದು' ವರದಿ ಮಾಡಿದೆ. ಹಾಗಾದರೆ ನಿಮಗಕ್ಕೆ ಸೇರ್ಪಡೆ ಆಗಲಿರುವ ಹೊಸ ಬಸ್‌ಗಳಲ್ಲಿ ಯಾವೆಲ್ಲ ಬಸ್‌ಗಳು ಇರಲಿವೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ.

ಹೊಸ ಬಸ್‌ಗಳ ಸೇರ್ಪಡೆ ಅಂಕಿ ಸಂಖ್ಯೆಗಳು ಹೀಗಿವೆ
KSRTC ವಿಸ್ತರಿತ ಯೋಜನೆಗಳ ಭಾಗವಾಗಿ 500 ಇ-ಬಸ್‌ಗಳನ್ನು (KSRTC 500 Electric bus) ಒಳಗೊಂಡಂತೆ 2,000 ಹೊಸ ಬಸ್‌ಗಳನ್ನು ಪರಿಚಯಿಸಲು ಯೋಜಿಸಿದೆ ಮತ್ತು VTMS (ವಾಹನ ಟ್ರ್ಯಾಕಿಂಗ್ ಮತ್ತು ಮಾನಿಟರಿಂಗ್ ಸಿಸ್ಟಮ್), ಮೊಬೈಲ್ ಅಪ್ಲಿಕೇಶನ್ ಮತ್ತು ನಗದು ರಹಿತ ಪ್ರಯಾಣವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.
ಒಟ್ಟು 2000 ಬಸ್‌ಗಳ ಪೈಕಿ, 20 ಐರಾವತ ಕ್ಲಬ್ ಕ್ಲಾಸ್, 20 ಅಂಬಾರಿ ಉತ್ಸವ, ನಾನ್ ಎಸಿ ಸ್ಲೀಪರ್ ವಿಭಾಗದಲ್ಲಿ ಬರುವ 100 ಪಲ್ಲಕ್ಕಿ ಬಸ್‌ಗಳು, 1000 ಪಾಯಿಂಟ್ ಟು ಪಾಯಿಂಟ್ ಕರ್ನಾಟಕ ಸರಿಗೆ ಬಸ್‌ಗಳು ಹಾಗೂ 500 ಎಲೆಕ್ಟ್ರಿಕ್ ಬಸ್‌ಗಳನ್ನು ನಿಮಗಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್‌ಗಳಿಗೆ ಬೇಡಿಕೆ ಏರಿಕೆ
ಮೇಲಿನ ಎರಡು ಸಾವಿರ ಬಸ್‌ಗಳ ಹೊರತಾಗಿ ಈ ವರ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 1000 ನವೀಕರಿಸಿದ ಬಸ್‌ಗಳನ್ನು ಫ್ಲೀಟ್‌ಗೆ ಮಾಡಲಿದೆ. ಅಂದರೆ ಬಸ್‌ಗಳನ್ನು ತಪಾಸಣೆ ಮಾಡಿ ಅಭಿವೃದ್ಧಿಪಡಿಸಿ, ಸುವ್ಯವಸ್ಥಿತ ಬಸ್‌ಗಳನ್ನು ಓಡಿಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಜಾರಿ ಬಳಿಕ ಸರ್ಕಾರಿ ಸ್ವಾಮ್ಯದ ಪ್ರೀಮಿಯಂ ಅಲ್ಲದ ಸಾರಿಗೆ ಬಸ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಈ ಪ್ರೀಮಿಯಂ ಅಲ್ಲದ ಬಸ್‌ಗಳಲ್ಲಿ ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಬಸ್‌ಗಳ ಸಂಚಾರದತ್ತ ನಿಗಮ ಗಮನ ಹರಿಸಿದ್ದ ಪರಿಣಾಮವಾಗಿ 1000 ಕರ್ನಾಟಕ ಸಾರಿಗೆ ಬಸ್ ನಿಗಮಕ್ಕೆ ಸೇರಿಕೊಳ್ಳಲಿವೆ ಎಂದು ಅಧಿಕಾರಿಗಳು ಹೇಳಿದರು.
ನಗದು ರಹಿತ ಪ್ರಯಾಣ
ಇಂದು ಆನ್‌ಲೈನ್ ವ್ಯವಹಾರಗಳು ನಡೆಯುತ್ತಿವೆ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದು, ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಅಂದರೆ ಈ ವರ್ಷ ಕೆಎಸ್‌ಆರ್‌ಟಿಸಿ ನಗದು ರಹಿತ ಪ್ರಯಾಣದ ಅನುಭವ ನೀಡಲು ನಗದು ರಹಿತ ವ್ಯವಸ್ಥೆ ಪರಿಚಯಿಸಲಿದೆ.
ಕೈಯಲ್ಲಿ ಹಣ ಹಿಡಿದವರಷ್ಟೇ ಪ್ರಯಾಣ ಮಾಡಬೇಕು ಎಂಬುದು ಬದಲಾಗಲಿದೆ. ನಗರದು ರಹಿತ ಪಾವತಿ ಆಯ್ಕೆಗಳನ್ನು ಪರಿಚಯಿಸಿ ಜನರಿಗೆ ನಿಗಮವು ಇನ್ನಷ್ಟು ಅನುಕೂಲ ಒದಗಿಸಲಿದೆ. ಪ್ರಯಾಣಿಕರು UPI, ATM, ಡೆಬಿಟ್ ಅಥವಾ ಬಳಸಿ ಟಿಕೆಟ್ ಖರೀದಿಗೆ ಪಾವತಿಸಿ ಬಸ್‌ನಲ್ಲಿ ಸಂಚಾರ ಮಾಡಬಹುದಾಗಿದೆ. ಇದು ಈ ವರ್ಷವೇ ಜಾರಿಗೆ ಬರಲಿದೆ ಎನ್ನಲಾಗುತ್ತಿದೆ.
ಒಟ್ಟು 3,888 ಹೊಸ ಬಸ್ ಖರೀದಿಗೆ ನಿರ್ಧಾರ
ರಾಜ್ಯದ ಸರ್ಕಾರವು ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 3,888 ಹೊಸ ಬಸ್‌ಗಳನ್ನು ಖರೀದಿಸಲು ಯೋಜಿಸಿವೆ. ಈ ಬಸ್‌ಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC), ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC), ಕಲ್ಯಾಣ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KKRTC) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿಗಮಗಳ ವ್ಯಾಪ್ತಿಯಲ್ಲಿ ಸೇವೆ ನೀಡಲಿವೆ.
ಹಾಲಿ 24,000 ಬಸ್‌ಗಳು ಸೇವೆ
ಹಾಲಿ ನಾಲ್ಕು ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು 24000 ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳುವೆ ನಿತ್ಯ ಸರಾಸರಿ 65.02 ಲಕ್ಷ ಕಿಲೋಮೀಟರ್ ಸಂಚಾರ ಸೇವೆ ನೀಡುತ್ತಿವೆ. ಇದರೊಂದಿಗೆ KSRTC ವಾರ್ಷಿಕವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (ಆರ್‌ಟಿಒ) ಫಿಟ್‌ನೆಸ್ ಪ್ರಮಾಣಪತ್ರ ಪಡೆಯಬೇಕು ಎಂಬ ನಿರ್ದೇಶನ ಪಡೆದುಕೊಂಡಿದೆ. ಈ ಬಗ್ಗೆ ಅಂಕಿ ಸಂಖ್ಯೆಗಳು ಲಭ್ಯವಾಗಬೇಕಿದೆ.












Click it and Unblock the Notifications