ಕೆಎಸ್‌ಆರ್‌ಟಿಸಿ ಬಸ್ ಮತ್ತಷ್ಟು ಪ್ರಯಾಣಿಕ ಸ್ನೇಹಿ
ಬೆಂಗಳೂರು, ಏಪ್ರಿಲ್ 24 : ಕೆಎಸ್ಆರ್‌ಟಿಸಿ ಬಸ್ ಮತ್ತಷ್ಟು ಜನಸ್ನೇಹಿಯಾಗಲಿದೆ. ಈ ವರ್ಷದ ಅಂತ್ಯದೊಳಗೆ ಬಸ್ಸಿನಲ್ಲಿ ಜಿಪಿಎಸ್ ಟ್ರಾಕರ್ ಮತ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗುತ್ತದೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ನೈಋತ್ಯ ಸಾರಿಗೆ ಸೇರಿ ಸುಮಾರು 25 ಸಾವಿರ ಬಸ್‌ಗಳಿವೆ. ಎಲ್ಲಾ ಬಸ್‌ಗಳಿಗೂ ಜಿಪಿಎಸ್ ಟ್ರಾಕರ್ ಮತ್ತ ಪ್ಯಾನಿಕ್ ಬಟನ್ ಅಳವಡಿಕೆ ಮಾಡಲಾಗುತ್ತದೆ.
ಕೆಎಸ್‌ಆರ್‌ಟಿಸಿ ಈಗಾಗಲೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ದೂರದ ಊರುಗಳಿಗೆ ಸಂಚಾರ ನಡೆಸುವ ಬಸ್‌ಗಳಿಗೆ ಮೊದಲ ಹಂತದಲ್ಲಿ ಜಿಪಿಎಸ್ ಅಳವಡಿಸಲಾಗುತ್ತದೆ. ಬಿಎಂಟಿಸಿ ಈಗಾಗಲೇ ಜಿಪಿಎಸ್ ಆಳವಡಿಕೆ ಆರಂಭಿಸಿದೆ.

ಕೆಎಸ್ಆರ್‌ಟಿಸಿಯಲ್ಲಿ ಸುಮಾರು 30 ಲಕ್ಷ ಜನರು ಪ್ರತಿನಿತ್ಯ ಪ್ರಯಾಣ ಮಾಡುತ್ತಾರೆ. ಬಿಎಂಟಿಸಿಯಲ್ಲಿ 45 ಲಕ್ಷ ಜನರು ಪ್ರಯಾಣಿಸುತ್ತಾರೆ. ಕೆಎಸ್ಆರ್‌ಟಿಸಿಯಲ್ಲಿ 8700, ಬಿಎಂಟಿಸಿಯಲ್ಲಿ 6700 ಬಸ್‌ಗಳಿವೆ.
ಎಲ್ಲಾ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರಾಕರ್ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಇದರ ಅನ್ವಯ ಬಟಲ್ ಅಳವಡಿಕೆ ಮಾಡಲಾಗುತ್ತಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಖಾಸಗಿ ಬಸ್‌ಗಳೂ ಸಹ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಆಳವಡಿಸಿಕೊಳ್ಳಬೇಕು. ಆದರೆ, ಈ ಮಾರ್ಗಸೂಚಿ ಬಗ್ಗೆ ಬಸ್ ಮಾಲೀಕರು ತಲೆಕೆಡಿಸಿಕೊಂಡಿಲ್ಲ. ಸಾರಿಗೆ ಇಲಾಖೆ ಸಹ ಇದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ.












Click it and Unblock the Notifications