KRS Dam: KRS ಜಲಾಶಯದ ನೀರಿನ ಮಟ್ಟ ಒಂದೇ ವಾರದಲ್ಲಿ ಇಷ್ಟೊಂದು ಕುಸಿತ, ಮುಂದೇನ್ ಗತಿ.!
ಕರ್ನಾಟಕ, ಆಗಸ್ಟ್, 28: ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಲ್ಲದೇ ಬರೀ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಹಾಗೆಯೇ ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಕೂಡ ಕುಸಿಯುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು, ಸಕ್ಕರೆ ನಾಡು ಮಂಡ್ಯ, ಸಾಂಸ್ಕೃತಿಕ ನಗರಿ ಮೈಸೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ (KRS) ಜಲಾಶಯದ ನೀರಿನ ಮಟ್ಟ 101 ಅಡಿಗೆ ಕುಸಿತ ಕಂಡಿದೆ.
ಕೆಆರ್‌ಎಸ್ ಜಲಾಶಯದಲ್ಲಿ ಕಳೆದ ಎರಡ್ಮೂರು ವಾರಗಳಿಂದ ನೀರಿನ ಪ್ರಮಾಣ ಕುಸಿಯುತ್ತಿದೆ. 105, 104, 102, 101 ಹೀಗೆ ಕುಸಿತ ಕಾಣುತ್ತಿದ್ದು, ಇನ್ನೂ ಒಂದು ವಾರದಲ್ಲಿ ಮಳೆ ಬಾದರೇ ಇದ್ದರೆ 95ರವರೆಗೂ ಕುಸಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಳಹರಿವಿನ ಪ್ರಮಾಣಕ್ಕಿಂತ ಹೊರಹರಿವೇ ಹೆಚ್ಚಾಗಿದೆ. ಹಾಗಾದರೆ ಕೆಆರ್‌ಎಸ್ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಪ್ರಮಾಣ ಎಷ್ಟಿದೆ ಅನ್ನವ ವಿವರವನ್ನು ಇಲ್ಲಿ ತಿಳಿಯಿರಿ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 101.93 ಅಡಿ
* ಒಳಹರಿವು - 2,931 ಕ್ಯೂಸೆಕ್
* ಹೊರಹರಿವು - 2,294 ಕ್ಯೂಸೆಕ್
2. ಆಲಮಟ್ಟಿ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ- 519.60 ಮೀಟರ್
* ಇಂದಿನ ನೀರಿನ ಮಟ್ಟ - 519.55 ಮೀಟರ್
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1,025 ಕ್ಯೂಸೆಕ್
3. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಇಂದಿನ ನೀರಿನ ಮಟ್ಟ- 1,625.97 ಅಡಿ
* ಒಳಹರಿವು - 409 ಕ್ಯೂಸೆಕ್
* ಹೊರಹರಿವು - 7,030 ಕ್ಯೂಸೆಕ್
4. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಇಂದಿನ ನೀರಿನ ಮಟ್ಟ - 2,067.20 ಅಡಿ
* ಒಳಹರಿವು - 694 ಕ್ಯೂಸೆಕ್
* ಹೊರಹರಿವು - 694 ಕ್ಯೂಸೆಕ್
5. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಇಂದಿನ ನೀರಿನ ಮಟ್ಟ - 1,789.30 ಅಡಿ
* ಒಳಹರಿವು - 3,940 ಕ್ಯೂಸೆಕ್
* ಹೊರಹರಿವು - 6,056.92 ಕ್ಯೂಸೆಕ್
6. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,274.29 ಅಡಿ
* ಒಳಹರಿವು - 1,495 ಕ್ಯೂಸೆಕ್
* ಹೊರಹರಿವು - 4,325 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಇಂದಿನ ನೀರಿನ ಮಟ್ಟ - 165.2 ಅಡಿ
* ಒಳಹರಿವು - 306 ಕ್ಯೂಸೆಕ್
* ಹೊರಹರಿವು - 3,223 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಇಂದಿನ ನೀರಿನ ಮಟ್ಟ - 2,162.61 ಅಡಿ
* ಒಳಹರಿವು - 1,146 ಕ್ಯೂಸೆಕ್
* ಹೊರಹರಿವು - 4,513 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಇಂದಿನ ನೀರಿನ ಮಟ್ಟ - 2,909.80 ಅಡಿ
* ಒಳಹರಿವು - 848 ಕ್ಯೂಸೆಕ್
* ಹೊರಹರಿವು - 5,000 ಕ್ಯೂಸೆಕ್
10. ಸೂಪಾ ಜಲಾಶಯ (ಮೀ)
* ಗರಿಷ್ಠ ನೀರಿನ ಮಟ್ಟ - 564 ಮೀಟರ್
* ಇಂದಿನ ನೀರಿನ ಮಟ್ಟ - 546.5 ಮೀಟರ್
* ಒಳಹರಿವು - 2,666 ಕ್ಯೂಸೆಕ್
* ಹೊರಹರಿವು - 4,767 ಕ್ಯೂಸೆಕ್
11. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಇಂದಿನ ನೀರಿನ ಮಟ್ಟ - 2,857.64 ಅಡಿ
* ಒಳಹರಿವು - 714 ಕ್ಯೂಸೆಕ್
* ಹೊರಹರಿವು - 1,700 ಕ್ಯೂಸೆಕ್












Click it and Unblock the Notifications