ಕರ್ನಾಟಕದ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ಪಟ್ಟಿ ಹೀಗಿದೆ

Vande Bharat Express: ಈಗಾಗಲೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ದೇಶಾದ್ಯಂದ ಸಂಚರಿಸುತ್ತಿದ್ದು, ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಲಿದೆ. ಅಲ್ಲದೆ ಈ ಐಷಾರಾಮಿ ರೈಲಿನಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣ ಮಾಡಲು ಬಯಸುತ್ತಿದ್ದಾರೆ. ಆದ್ದರಿಂದ ಹಲವು ಭಾಗಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತಿದೆ. ಹಾಗಾದರೆ ಕರ್ನಾಟಕದಲ್ಲಿ ಎಷ್ಟು ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿವೆ ಎಂದು ಇಲ್ಲಿ ತಿಳಿಯಿರಿ.

ಪ್ರಯಾಣಿಕರ ಬೇಡಿಕೆಯ ಮೇರೆಗೆ ವಂದೇ ಭಾರತ್‌ ರೈಲು ಸೇವೆಯನ್ನು ವಿವಿಧ ಭಾಗಗಳಿಗೆ ಭಾರತೀಯ ರೈಲ್ವೆ ವಿಸ್ತರಣೆ ಮಾಡುತ್ತಲೇ ಇದೆ. ಅದರಲ್ಲೂ ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್‌ ರೈಲುಗಳು ಸಂಚರಿಸುತ್ತಿದೆ. ಹಾಗಾದರೆ ಯಾವ್ಯಾವ ಭಾಗಗಳಲ್ಲಿ ಈ ರೈಲು ಸಂಚರಿಸುತ್ತಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Know list of Vande Bharat Express trains in Karnataka

1. ರೈಲು ಸಂಖ್ಯೆ 20607/20608 ಮೈಸೂರು-ಎಂಜಿಆರ್‌ ಚೆನ್ನೈ ಸೆಂಟ್ರಲ್

2. ರೈಲು ಸಂಖ್ಯೆ 20661/20662 ಕೆಎಸ್‌ಆರ್‌ ಬೆಂಗಳೂರು-ಧಾರವಾಡ

3. ರೈಲು ಸಂಖ್ಯೆ 20703/20704 ಯಶವಂತಪುರ-ಕಾಚಿಗುಡ

4. ರೈಲು ಸಂಖ್ಯೆ 20631/20632 ಮಂಗಳೂರು ಸೆಂಟ್ರಲ್‌-ತಿರುವಂತಪುರ

5. ರೈಲು ಸಂಖ್ಯೆ 20642/20641 ಬೆಂಗಳೂರು ಕಂಟೋನ್ಮೆಂಟ್-ಕೊಯಮತ್ತೂರು

6. ರೈಲು ಸಂಖ್ಯೆ 20646/20645

ಮಂಗಳೂರು ಸೆಂಟ್ರಲ್-ಮಡಂಗಾವ್

7. ರೈಲು ಸಂಖ್ಯೆ 22231/22232 ಕಲಬುರಗಿ (ಗುಲ್ಬರ್ಗ)-ಎಸ್‌ಎಂವಿಟಿ

8. ರೈಲು ಸಂಖ್ಯೆ 060021/06002 ಎಸ್‌ಎಂವಿಟಿ ಬೆಂಗಳೂರು-ಎರ್ನಾಕುಲಂ

9. ರೈಲು ಸಂಖ್ಯೆ 20671/20672 ಮಧುರೈ-ಬೆಂಗಳೂರು

10. ರೈಲು ಸಂಖ್ಯೆ 20669/20670 ಪುಣೆ ಬೆಳಗಾವಿ ಹುಬ್ಬಳ್ಳಿ

ನಮೋ ಮೆಟ್ರೋ: ವಂದೇ ಮೆಟ್ರೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್‌ 16) ಗುಜರಾತ್‌ನಲ್ಲಿ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೆ ಇದೀಗ ವಂದೇ ಮೆಟ್ರೋಗೆ ನಮೋ ಭಾರತ್ ರಾಪಿಡ್ ರೈಲ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ತಿಳಿದುವಂದಿದೆ. ಕಾರಣ ಏನೆಂದು ಇಲ್ಲಿ ತಿಳಿಯಿರಿ.

ಬಹುನಿರೀಕ್ಷಿತ ವಂದೇ ಮೆಟ್ರೋವನ್ನು ಭಾರತೀಯ ರೈಲ್ವೆ ಅಧಿಕೃತವಾಗಿ "ನಮೋ ಭಾರತ್ ರಾಪಿಡ್ ರೈಲ್ ಎಂದು ಮರುನಾಮಕರಣ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನದ ಮುನ್ನಾ ದಿನವಾದ ಇಂದು (ಸೆಪ್ಟೆಂಬರ್‌ 16) ಗುಜರಾತ್‌ನಲ್ಲಿ ದೇಶದ ಮೊಟ್ಟ ಮೊದಲ ನಮೋ ಭಾರತ್ ರ‍್ಯಾಪಿಡ್ ರೈಲು ಸೇವೆಗೆ ಚಾಲನೆ ನೀಡಿದ್ದಾರೆ.

ನಮೋ ಭಾರತ್ ರ‍್ಯಾಪಿಡ್ ರೈಲು ಗುಜರಾತ್‌ನ ಕಚ್ ಜಿಲ್ಲೆಯಲ್ಲಿರುವ ಭುಜ್ ಅನ್ನು ರಾಜ್ಯದ ಅತಿದೊಡ್ಡ ನಗರಗಳಲ್ಲಿ ಒಂದಾದ ಅಹಮದಾಬಾದ್‌ನೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ 6 ಗಂಟೆಗಳಲ್ಲಿ 360 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. ಇದು ಗಂಟೆಗೆ ಗರಿಷ್ಠ 110 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು ಪ್ರಮುಖ ನಿಲ್ದಾಣಗಳಾದ ಅಂಜಾರ್, ಗಾಂಧಿಧಾಮ್, ಭಚೌ, ಸಮಖಿಯಾಲಿ, ಹಲ್ವಾಡ್, ಧ್ರಂಗಾಧ್ರ, ವಿರಾಮಗಮ್, ಚಂದ್ಲೋಡಿಯಾ, ಸಬರಮತಿ ಮತ್ತು ಅಂತಿಮವಾಗಿ ಅಹಮದಾಬಾದ್‌ನ ಕಲುಪುರ್ ಸೇರಿದಂತೆ ಅನೇಕ ನಿಲುಗಡೆಯಾಗಲಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+