Aadhaar Card: ಆಧಾರ್ ಕಾರ್ಡ್‌ನಲ್ಲಿ ಯಾವ ಮಾಹಿತಿಯನ್ನು ಎಷ್ಟು ಬಾರಿ ತಿದ್ದುಪಡಿ ಮಾಡಬಹುದು.?-ಇಲ್ಲಿದೆ ಮಾಹಿತಿ
Aadhaar Card: ಪ್ರಮುಖ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದಾಗಿದೆ. ಈಗ ಯಾವುದೇ ಕಚೇರಿಗೆ ಹೋದರೂ ಕೈಯಲ್ಲಿ ಆಧಾರ್ ಹಿಡಿದುಕೊಂಡು ಹೋಗಲೇಬೇಕಾಗುತ್ತದೆ. ಇನ್ನೂ ಒಂದು ವೇಳೆ ಇದರಲ್ಲಿ ಮಾಹಿತಿ ತಪ್ಪಾಗಿದ್ದರೆ, ಎಷ್ಟು ಬಾರಿ ತಿದ್ದುಪಡಿ ಮಾಡಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇದೀಹ ಹುಟ್ಟಿದ ಮಗುವಿಂದಲೂ ಎಲ್ಲಾರಿಗೂ ಸರ್ಕಾರ ಆಧಾರ್ ಕಾರ್ಡ್ ಕಟಡ್ಡಾಯಗೊಳಿಸಿದೆ. ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಸೇವೆಗಳೊಂದಿಗೆ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಬೇಕೇ ಬೇಕಾಗುತ್ತದೆ. ಆದ್ದರಿಂದ ಇದು ತುಂಬಾ ಮುಖ್ಯವಾದ ದಾಖಲೆ ಆಗಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಬಳಸಿಕೊಳ್ಳಲಾಗುತ್ತದೆ.

ಇನ್ನೂ ಈ ಆಧಾರ್ ಕಾರ್ಡ್‌ನಲ್ಲಿ ಹೆಸರು, ಹುಟ್ಟಿದ ದಿನಾಂಕ, ಕುಟುಂಬದ ಹೆಸರು, ವಿಳಾಸ, ಲಿಂಗ ಇತ್ಯಾದಿ ತಪ್ಪುಗಳಿದ್ದರೆ ನೀವು ತೊಂದರೆಗೆ ಸಿಲುಕುವುದು ಗ್ಯಾರಂಟಿ. ಇದನ್ನು ಸರಿಪಡಿಸಬಹುದು, ಆದರೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಅಥವಾ ಇತರ ವಿವರಗಳನ್ನು ಪದೇ ಪದೇ ಬದಲಾಯಿಸಬಹುದು ಎಂದು ನೀವು ಭಾವಿಸಿದರೆ ತಪ್ಪು.
ಯಾಕೆಂದರೆ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗೆ ಒಂದು ಮಿತಿ ಇರುತ್ತದೆ. ಅದರ ನಂತರ ಅದನ್ನು ಬದಲಾವಣೆ ಮಾಡಲಾಗುವುದಿಲ್ಲ. ಆಧಾರ್ ಕಾರ್ಡ್‌ನಲ್ಲಿ ಯಾವ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2019ರ ಮೊದಲು ಆಧಾರ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿಯನ್ನು ಬದಲಾವಣೆ ಮಾಡಲು ಯಾವುದೇ ಮಿತಿ ಇರಲಿಲ್ಲ. ಆದರೆ, ಅದರ ನಂತರ ಯುಐಡಿಎಐ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗದಲ್ಲಿ ಬದಲಾವಣೆಗಳಿಗೆ ಮಿತಿ ಹೇರಲಾಗಿದ್ದು, ಇದಕ್ಕೆ ಶುಲ್ಕವನ್ನೂ ಕೂಡ ಪಾವತಿ ಮಾಡಬೇಕಾಗುತ್ತದೆ ನೆನಪರಲಿ.
ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ತಪ್ಪಾಗಿದ್ದರೆ, ಬದಲಾಯಿಸಲು ಬಯಸಿದರೆ, ನೀವು ಅದನ್ನು ಎರಡು ಬಾರಿ ಮಾತ್ರ ಬದಲಾವಣೆ ಮಾಡಬಹುದು. ಬಳಿಕ ನಿಮ್ಮ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ಯುಐಡಿಎಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಬದಲಾಯಿಸಬೇಕಾದರೆ, ಒಮ್ಮೆ ಮಾತ್ರ ಸಾಧ್ಯ. ಹುಟ್ಟಿದ ದಿನಾಂಕದಲ್ಲಿ ಗರಿಷ್ಠ 3 ವರ್ಷಗಳ ಬದಲಾವಣೆ ಮಾಡಬಹುದು. ಅಂದರೆ, ನಿಮ್ಮ ಹುಟ್ಟಿದ ದಿನಾಂಕ ಏನೇ ಇರಲಿ, ಅದಕ್ಕಿಂತ ಮೂರು ವರ್ಷ ಮುಂದೆ ಅಥವಾ ಹಿಂದಿನ ದಿನಾಂಕವನ್ನು ನೀವು ನಮೂದಿಸಿರಬಹುದು. ದಿನಾಂಕವು ಆಧಾರ್ ದಾಖಲಾತಿಯನ್ನು ಆಧರಿಸಿರುತ್ತದೆ. ಆದ್ದರಿಂದ ಹುಟ್ಟಿದ ದಿನಾಂಕವನ್ನು ಭರ್ತಿ ಮಾಡುವಾಗ ಜಾಗರೂಕರಾಗಿರಬೇಕಾಗುತ್ತದೆ.
ಇನ್ನು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಲು ನೀವು ಬಯಸಿದರೆ, ನೀವು ಬಯಸಿದಷ್ಟು ಬಾರಿ ಬದಲಾಯಿಸಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ. ಆದರೂ, ಇದಕ್ಕಾಗಿ ನೀವು ವಿಳಾಸದ ಪುರಾವೆಯನ್ನು ನೀಡಬೇಕಾಗುತ್ತದೆ. ಇದರಿಂದ ನಿಮ್ಮ ವಿಳಾಸವನ್ನು ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಲಿಂಗ ತಪ್ಪಾಗಿದ್ದರೆ, ಅದನ್ನು ಬದಲಾಯಿಸಲು ಬಯಸಿದರೆ, ಆಧಾರ್‌ನ ಪ್ರಾದೇಶಿಕ ಕಚೇರಿಗೆ ಹೋಗಿ ಬದಲಾವಣೆ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.












Click it and Unblock the Notifications