Karnataka Heat Wave: ರಾಜ್ಯದ ಗರಿಷ್ಠ ತಾಪಮಾನ 36 °C, ಎಲ್ಲ ಜಿಲ್ಲೆಗಳಿಗೆ ಉಷ್ಣ ಅಲೆಯ ಮುನ್ಸೂಚನೆ

ಬೆಂಗಳೂರು, ಜನವರಿ 08: ಕರ್ನಾಟಕದಾದ್ಯಂತ ಮೈಸುಡುವ ಬಿಸಿಲು ಕಂಡು ಬರುತ್ತಿದ್ದು, ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣ ಏರಿಕೆ ಆಗುತ್ತಿದೆ. ಕಳೆದ ಎರಡು ವಾರಗಳ ಹಿಂದೆ ಚಳಿಗೆ ನಡಗುತ್ತಿದ್ದ ಜನರು ಇದೀಗ ಬಿಸಿಲಿಗೆ ತತ್ತರಿಸುತ್ತಿದ್ದಾರೆ. ಕನಿಷ್ಠ ತಾಪಮಾನ ಸಾಮಾನ್ಯವಾಗಿದ್ದರೆ, ಗರಿಷ್ಠ ತಾಪಮಾನ ಕೆಲ ಜಿಲ್ಲೆಗಳಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ ಶುಕ್ರವಾರ ಕಂಡು ಬಂದಿದೆ. ಫೆಬ್ರವರಿ ಮೊದಲ ವಾರವೇ ಕಡು ಬೇಸಿಗೆಯ ಅನುಭವ ಆಗುತ್ತಿದೆ.

ಬೇಸಿಕೆ ಆರಂಭಿಕ ಹಂತದಲ್ಲೇ ಇನ್ನಿಲ್ಲದಂತೆ ಬಿಸಿಲು ಕಾಡುತ್ತಿದ್ದೆ ಎಂದರೆ ಈ ಬಾರಿಯು ಬೇಸಿಗೆಯ ದಿನಗಳು ಅತ್ಯಧಿಕ ತಾಪಮಾನದಿಂದ ಕೂಡಿರುತ್ತವೆ ಎಂಬುದರ ಮುನ್ಸೂಚನೆಯಾಗಿದೆ. ಕಲಬುರಗಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Karnataka Weather Forecast Heat Wave Alert in Next 5 Days for Acorss State Today Temperature

ಇದೇ ರೀತಿ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಏರಿಕೆ ಆಗುತ್ತಲೇ ಇದೆ. ನೋಡ ನೋಡುತ್ತಿದ್ದಂತೆ ವಾತಾವರಣದಲ್ಲಿ ತೀವ್ರ ರೂಪದ ಬದಲಾವಣೆಗಳು ಆಗಿವೆ. ಹೀಗಾಗಿ ಉಷ್ಣ ಅಲೆಯ ಕಾವು ಹೆಚ್ಚಾಗಿದೆ.

ಫೆಬ್ರವರಿ 14ರವರೆಗೆ ಉಷ್ಣ ಅಲೆ

ಮುಂದಿನ ಒಂದು ವಾರ ಫೆಬ್ರವರಿ 14ರವರೆಗೆ ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಬಿಸಿಲಿ ತಾಪ ಹೆಚ್ಚಿರಲಿದೆ. ಭಾರತೀಯ ಹವಾಮಾನ ಇಲಾಖೆ ರಾಜ್ಯಕ್ಕೆ ಉಷ್ಣ ಅಲೆಯ ಎಚ್ಚರಿಕೆ ನೀಡಿದೆ. ರಾಜ್ಯಗಳ ಜಿಲ್ಲಾವಾರು ಗರಿಷ್ಠ ತಾಪಮಾನದ ವಿವರ ಇಲ್ಲಿದೆ.

ಜಿಲ್ಲಾವಾರು ಗರಿಷ್ಠ ತಾಪಮಾನ ವಿವರ

ಕಾರವಾರ 35, ಗದಗ 35, ಬಾಗಲಕೋಟೆ 35, ಪೆಣಂಬೂರು 34, ಹೊನ್ನಾವರ, ಮಂಗಳೂರು ವಿಮಾನ ನಿಲ್ದಾಣ, ವಿಜಯಪುರ, ಬೆಳಗಾವಿ ವಿಮಾನ ನಿಲ್ದಾಣ, ರಾಯಚೂರು ಧಾರವಾಡ, ಚಿತ್ರದುರ್ಗ, ಹಾವೇರಿ ಕೆವಿಕೆ ಯಲ್ಲಿ ತಲಾ 33 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ, ಮಂಡ್ಯ, ಕೊಪ್ಪಳ, ಮೈಸೂರು ಭಾಗದಲ್ಲಿ ತಲಾ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.

Karnataka Weather Forecast Heat Wave Alert in Next 5 Days for Acorss State Today Temperature

ವಿಶೇಷವೆಂದರೆ ಯಾವೊಂದು ಜಿಲ್ಲೆಯಲ್ಲೂ 30 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನ ದಾಖಲಾಗಿದೆ. ವಾಡಿಕೆಯಷ್ಟು ಬಿಸಿಲು ಈಗಾಗಲೇ ದಾಖಲಾಗುತ್ತಿದೆ. ಇನ್ನೂ ಜೂನ್ ಮಳೆ ಬರುತ್ತದೆ ಎಂದು ಅಂದಾಜಿಸಿದರೂ ಸಹಿತ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳೂ ಹೇಗಿರಲಿವೆಯೋ ಎಂಬ ಆತಂಕ ಸಹಜವಾಗಿಯೇ ಕಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ಬಿಸಿಲಿನ ಝಳ ವಿಪರೀತವಾಗಿರಲಿದೆ. ಉಷ್ಣ ಅಲೆ ರಾರಾಜಿಸಲಿದೆ ಎಂಬ ಮುನ್ಸೂಚನೆ ಚಿಕ್ಕಿದೆ.

ಮೈಸುರುವ ಬಿಸಿಲಿಗೆ ಜನರು ಹೈರಾಣಾಗುತ್ತಿದ್ದಾರೆ. ಎಳನೀರು, ಐಸ್‌ಕ್ರೀಂ, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆ ಹಿನ್ನೆಲೆ ಎಳನೀರುನ ಬೆಲೆ ಏರಿಕೆ ಆಗಿದೆ. ತೆಳು ಬಟ್ಟೆ ಹಾಕುವ ಜೊತೆಗೆ ಮನೆಯಿಂದ ಹೊರ ಬರುವಾಗ ಹಿರಿಯ ನಾಗರಿಕರು, ಮಹಿಳೆಯರು ಮಕ್ಕಳು, ಕೊಡೆ ಹಿಡಿದು ಬರುವುದು ಉತ್ತಮ. ಆರೋಗ್ಯ ದೃಷ್ಟಿಯಿಂದ ಹೆಚ್ಚು ನೀರು ಕುಡಿಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರು ಹವಾಮಾನ ಮುನ್ಸೂಚನೆ

ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಹೆಚ್ಚಳವಾಗುತ್ತಿದೆ. ಚಳಿ ಸಂಪೂರ್ಣ ಮಾಯವಾಗಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಕಂಡ ಬಂದರೆ, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗಿದೆ. ಸದ್ಯ 32 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದ್ದು, ಮುಂದಿನ ಮೂರೇ ದಿನದಲ್ಲಿ 34ಕ್ಕೆ ತಲುಪಲಿದೆ ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+