ನವೆಂಬರ್ 21ರವರೆಗೂ ಕರ್ನಾಟಕದ ಈ ಭಾಗಗಳಲ್ಲಿ ಹೆಚ್ಚು ಮಳೆಯ ಮುನ್ಸೂಚನೆ

ಬೆಂಗಳೂರು, ನವೆಂಬರ್ 18: ಕರ್ನಾಟಕದ ಈ ಭಾಗಗಳಲ್ಲಿ ನವೆಂಬರ್ 21ರವರೆಗೂ ಮಳೆ ಮುಂದುವರೆಯಲಿದೆ.

ಮುಂಗಾರು ದುರ್ಬಲವಾಗಿ ಸಾಕಷ್ಟು ಸಮಯಗಳು ಕಳೆದಿದ್ದು, ಈಗ ಹಿಂಗಾರು ಮಳೆ ಸುರಿಯುತ್ತಿದೆ.

ಫೆಸಿಫಿಕ್ ಮಹಾಸಾಗರದಲ್ಲಿ 'ಲಾ ನಿನಾ' ಏರಿಳಿತದಿಂದ ಚಳಿಯೂ ಹೆಚ್ಚುವ ಸಂಭವವಿದೆ, ಇಂದಿನಿಂದ ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಮಳೆಯಾದರೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮಳೆ ಬೀಳಲಿರುವ ಪ್ರದೇಶಗಳು

ಮಳೆ ಬೀಳಲಿರುವ ಪ್ರದೇಶಗಳು

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ,ತುಮಕೂರಿನಲ್ಲಿ ಮಳೆಯಾಗಲಿದೆ.

ಮಳೆಯಾಗಿರುವ ಪ್ರದೇಶಗಳು

ಮಳೆಯಾಗಿರುವ ಪ್ರದೇಶಗಳು

ಬೇಗೂರು, ಆನೇಕಲ್, ಸಿದ್ದಾಪುರ, ಗೋಕರ್ಣ, ಚಿಕ್ಕಮಗಳೂರು, ಬೆಂಗಳೂರು ಎಚ್‌ಎಎಲ್, ಬಂಗಾರಪೇಟೆ, ಚಿಂತಾಮಣಿ, ಬೇಲೂರು, ಸಿರಾ, ನಂಜನಗೂಡು, ಬಂಡೀಪುರ, ಕೊಳ್ಳೇಗಾಲ, ಶ್ರೀರಂಗಪಟ್ಟಣ, ಶಿಡ್ಲಘಟ್ಟ, ಮಳವಳ್ಳಿ, ಥೊಂಡೆಭಾವಿ, ಮೂಡಬಿದಿರೆ, ಗೋಪಾಲನಗರದಲ್ಲಿ ಮಳೆಯಾಗಿದೆ.

ಮುಂದಿನ 48 ಗಂಟೆ ರಾಜ್ಯದಲ್ಲಿ ವಾತಾವರಣ ಹೇಗಿರಲಿದೆ

ಮುಂದಿನ 48 ಗಂಟೆ ರಾಜ್ಯದಲ್ಲಿ ವಾತಾವರಣ ಹೇಗಿರಲಿದೆ

ಮುಂದಿನ 48 ಗಂಟೆ ರಾಜ್ಯದ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣ ಮುಂದುವೆಯಲಿದ್ದು, ಮಧ್ಯಾಹ್ನದ ವೆರೆಗೆ ಸೆಕೆ ವಿಪರೀತ ಕಾಣಿಸಿಕೊಳ್ಳಲಿದೆ ಬಳಿಕ ಸಂಜೆ ವೇಳೆಗೆ ಮಳೆಯಾಗಲಿದೆ.

Recommended Video

    Lakshmi Vilas Bank ನಿಷೇಧಕ್ಕೊಳಗಾಗಿದೆ , ಹಾಗಿದ್ದರೆ ಜನರ ದುಡ್ಡು ಎಲ್ಲಿ | Oneindia Kannada
    ಬೆಂಗಳೂರು ಹವಾಮಾನ ಹೇಗಿದೆ

    ಬೆಂಗಳೂರು ಹವಾಮಾನ ಹೇಗಿದೆ

    ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ 27 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ದಾವಣಗೆರೆಯಲ್ಲಿ 15.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+