ಕರ್ನಾಟಕದಲ್ಲಿ ಕಡಿಮೆಯಾಗ್ತಿದೆ ಕೊರೊನಾ ಸೋಂಕಿತರ ಸಂಖ್ಯೆ

ಬೆಂಗಳೂರು, ಜುಲೈ 21: ಕರ್ನಾಟಕದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ.

Recommended Video

      One Nation,One Ration Card! ಕಂಪ್ಲೀಟ್ ಮಾಹಿತಿ | Oneindia Kannada

      ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳಿರುವ ರಾಜ್ಯಗಳನ್ನು ಗಮನಿಸುವುದಾದರೆ ಪ್ರಕರಣಗಳು ಕಡಿಮೆಯಾಗುವ ಮುನ್ನ ಜೂನ್ ತಿಂಗಳಿನಲ್ಲಿ ಒಂದೇ ಬಾರಿಗೆ ಕೆಲವು ದಿನಗಳು ದೆಹಲಿ, ತಮಿಳುನಾಡು, ತೆಲಂಗಾಣದಲ್ಲಿ ತಾರಕಕ್ಕೇರಿತ್ತು. ಬಳಿಕ ಕಡಿಮೆಯಾಗುತ್ತಾ ಬಂದಿತ್ತು. ಇದೀಗ ಒಂದು ಹಂತಕ್ಕೆ ಬಂದು ನಿಂತಿದೆ.

      ಮಹಾರಾಷ್ಟ್ರದಲ್ಲಿ 318,695, ತಮಿಳುನಾಡು 175,678, ದೆಹಲಿ 123,747, ಕರ್ನಾಟಕ 67,420, ಆಂಧ್ರಪ್ರದೇಶ 53,724, ಉತ್ತರಪ್ರದೇಶ 51,160, ಗುಜರಾತ್ 49,439, ತೆಲಂಗಾಣ 46,274, ಪಶ್ಚಿಮ ಬಂಗಾಳ 44,769, ರಾಜಸ್ಥಾನದಲ್ಲಿ 30,268 ಪ್ರಕರಣಗಳಿವೆ.

      ಕರ್ನಾಟಕದಲ್ಲಿ ಈಗ ಪರಿಸ್ಥಿತಿ ಹೇಗಿದೆ?

      ಕರ್ನಾಟಕದಲ್ಲಿ ಈಗ ಪರಿಸ್ಥಿತಿ ಹೇಗಿದೆ?

      ಕರ್ನಾಟಕವನ್ನು ಗಮನಿಸಿದರೆ ದೆಹಲಿ, ತೆಲಂಗಾಣ, ತಮಿಳುನಾಡು ರಾಜ್ಯಗಳ ರೀತಿಯಲ್ಲೇ ಕನಾಟಕದಲ್ಲೂ ಕೊರೊನಾ ಹಿಡಿತಕ್ಕೆ ಬರುವ ಸಾಧ್ಯತೆ ಇದೆ. ಜುಲೈ 4 ರಂದು ನಿತ್ಯದ ಕೊರೊನಾ ಸೋಂಕಿತರ ಸಂಖ್ಯೆ ಶೇ.8.82ಕ್ಕೆ ಏರಿಕೆಯಾಗಿತ್ತು. ಬಳಿಕ ಕಡಿಮೆಯಾಗಲು ಆರಂಭವಾಗಿತ್ತು. ಅತಿ ಹೆಚ್ಚು ಪ್ರಕರಣವನ್ನು ನೋಡುವುದಾದರೆ ಕಳೆದ ಎರಡು ದಿನಗಳ ಹಿಂದೆ 4500 ಪ್ರಕರಣಗಳು ಒಂದೇ ದಿನ ಪತ್ತೆಯಾಗಿತ್ತು.

      ದೇಶದಲ್ಲೇ ಹೆಚ್ಚು ಸೋಂಕು ಇರುವ ರಾಜ್ಯ ಕರ್ನಾಟಕ

      ದೇಶದಲ್ಲೇ ಹೆಚ್ಚು ಸೋಂಕು ಇರುವ ರಾಜ್ಯ ಕರ್ನಾಟಕ

      ಮೂರುದಿನಗಳ ಹಿಂದೆ ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿರುವ ರಾಜ್ಯ ಕರ್ನಾಟಕವಾಗಿತ್ತು. ಇದೀಗ ಆ ಸ್ಥಾನವನ್ನು ಆಂಧ್ರಪ್ರದೇಶ ಪಡೆದಿದೆ. ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಕೊರೊನಾ ಸೋಂಕಿತರ ಪ್ರಮಾಣ ಶೇ.8.12ರಷ್ಟಿದೆ. ಈ ತಿಂಗಳ ಮೊದಲ ವಾರದಲ್ಲಿ ಅದು ಶೇ.5.7ರಷ್ಟಿತ್ತು.

      ಪರೀಕ್ಷೆಗಳ ಹೆಚ್ಚಳ

      ಪರೀಕ್ಷೆಗಳ ಹೆಚ್ಚಳ

      ದೆಹಲಿ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹಾಗೆಯೇ ಸೋಂಕಿತರು ಯಾರೊಂದಿಗೆ ಸಂಪರ್ಕಲ್ಲಿದ್ದರು ಎಂಬುದನ್ನು ಕೂಡ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

      ದೆಹಲಿಯಲ್ಲಿ ಸೋಮವಾರ 1 ಸಾವಿರ ಪ್ರಕರಣ

      ದೆಹಲಿಯಲ್ಲಿ ಸೋಮವಾರ 1 ಸಾವಿರ ಪ್ರಕರಣ

      ದೆಹಲಿಯಲ್ಲಿ ಸೋಮವಾರ 1 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ. ಜೂನ್ 1ರ ಬಳಿಕ ಮೊದಲ ಬಾರಿಗೆ ಇಷ್ಟು ಕಡಿಮೆ ಪ್ರಕರಣಗಳು ದಾಖಲಾಗಿವೆ. ಜೂನ್ 23ರಂದು 4 ಸಾವಿರ ಪ್ರಕರಣಗಳು ಪತ್ತೆಯಾಗಿತ್ತು. ಸೋಮವಾರ 954 ಪ್ರಕರಣಗಳು ಪತ್ತೆಯಾಗಿವೆ. ಜೂನ್ 1 ರಂದು 990 ಪ್ರಕರಣಗಳು ಪತ್ತೆಯಾಗಿದ್ದವು. ನಗರದಲ್ಲಿ ಈಗ ಒಟ್ಟು 1.23 ಲಕ್ಷ ಕೊರೊನಾ ಸೋಂಕಿತರಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+