Anugraha Scheme: ರೈತರಿಗೆ ಗುಡ್‌ನ್ಯೂಸ್? ಅನುಗ್ರಹ ಯೋಜನೆ ಬಾಕಿ ಹಣ ಬಿಡುಗಡೆಗೆ ಡಿಸಿಎಂ ಮನವಿ

ಬೆಂಗಳೂರು: ಕರ್ನಾಟಕದಲ್ಲಿ ಹೈನುಗಾರಿಕೆ, ಕುರಿ ಹಾಗೂ ಮೇಕೆ ಸಾಕಾಣಿಕೆಯನ್ನು ಅವಲಂಬಿಸಿರುವ ಲಕ್ಷಾಂತರ ರೈತರು ಮತ್ತು ಕುರಿಗಾಹಿಗಳ ಜೀವನೋಪಾಯವನ್ನು ಬಲಪಡಿಸಬೇಕಾಗಿದೆ. ಈ ಉದ್ದೇಶದಿಂದ 2013-18ರ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರವು ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಗೆ ಅಗತ್ಯ ಹಣ ಬಿಡುಗಡೆ ಮಾಡುವಂತೆ ಡಿಸಿಎಂ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ಬಳಿಕ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರಿಗೆ ಆಸರೆಯಾಗಿದ್ದ ಈ ಮಹತ್ವಾಕಾಂಕ್ಷಿ ಅನುಗ್ರಹ ಯೋಜನೆಗೆ ಅನುದಾನದ ಕೊರತೆ ಉಂಟಾಯಿತು. ಯೋಜನೆಗೆ ನೆನಗುದಿಗೆ ಬಿದ್ದಿತ್ತು. ಹೀಗಾಗಿ ಯೋಜನೆಯನ್ನು ಸ್ಥಗಿತಗೊಳಿಸಿದ್ದರು. 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಮತ್ತೊಮ್ಮೆ ಜಾರಿಗೊಳಿಸಲಾಯಿತು.

Karnataka

97.57 ಕೋಟಿ ರೂ ಅನುದಾನ ನೀಡಿ: ಡಿಸಿಎಂ

2023ರಿಂದ ಇಲ್ಲಿಯವರೆಗೆ ಈ ಯೋಜನೆಗಾಗಿ 134 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿ ವೆಚ್ಚ ಮಾಡಲಾಗಿದೆ. ಇನ್ನೂ 97.57 ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಬೇಕಿದೆ. ಕೃಷಿಯ ಜೊತೆಗೆ ಪಶುಸಂಗೋಪನೆಯನ್ನು ಕಸುಬಾಗಿಸಿಕೊಂಡಿರುವ ರೈತರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ಬಾಕಿ ಇರುವ ₹97.57 ಕೋಟಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಜಿ.ಪರಮೇಶ್ವರ್ ಪತ್ರ ಬರೆದಿದ್ದಾರೆ.

ಸಣ್ಣ ಪ್ರಾಣಿಗಳ ಸಾವಿಗೆ ಪರಿಹಾರ ಧನ

ಅನುಗ್ರಹ ಯೋಜನೆಯಡಿ 2023-24ನೇ ಸಾಲಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟ 30,705 ಕುರಿ ಹಾಗೂ ಮೇಕೆಗಳಿಗೆ 14.93 ಕೋಟಿ ರೂಪಾಯಿ, 2024-25ನೇ ಸಾಲಿನಲ್ಲಿ ಮೃತಪಟ್ಟ 89,481 ಸಣ್ಣ ಪ್ರಾಣಿಗಳಿಗೆ 32.87 ಕೋಟಿ ರೂಪಾಯಿ, 2025-26ನೇ ಸಾಲಿನಲ್ಲಿ ಮೃತಪಟ್ಟ 74,801 ಕುರಿ ಹಾಗೂ ಮೇಕೆಗಳಿಗೆ 29 ಕೋಟಿ ರೂಪಾಯಿ, ಹಾಗೂ 2026-27ನೇ ಸಾಲಿನಲ್ಲಿ ಕಳೆದ ತಿಂಗಳವರೆಗೆ ಮೃತಪಟ್ಟ 22,579 ಕುರಿ ಹಾಗೂ ಮೇಕೆಗಳಿಗೆ 7.25 ಕೋಟಿ ರೂಪಾಯಿ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ಡಿಸಿಎಂ ಲೆಕ್ಕ ಕೊಟ್ಟರು.

ದೊಡ್ಡ ಪ್ರಾಣಿಗಳ ಸಾವಿಗೆ ಪರಿಹಾರ ಧನ

ಯೋಜನೆಯಡಿ 2023-24ನೇ ಸಾಲಿನಲ್ಲಿ ಮೃತಪಟ್ಟ 12,965 ಹಸು, ಎಮ್ಮೆ ಹಾಗೂ ಇತರ ದೊಡ್ಡ ಜಾನುವಾರುಗಳಿಗೆ 12.88 ಕೋಟಿ ರೂಪಾಯಿ, 2024-25ನೇ ಸಾಲಿನಲ್ಲಿ ಮೃತಪಟ್ಟ 30,289 ದೊಡ್ಡ ಜಾನುವಾರುಗಳಿಗೆ 14.99 ಕೋಟಿ ರೂಪಾಯಿ, 2025-26ನೇ ಸಾಲಿನಲ್ಲಿ ಮೃತಪಟ್ಟ 32,804 ದೊಡ್ಡ ಜಾನುವಾರುಗಳಿಗೆ 20.85 ಕೋಟಿ ರೂಪಾಯಿ, ಹಾಗೂ 2026-27ನೇ ಸಾಲಿನಲ್ಲಿ ಇದುವರೆಗೆ ಮೃತಪಟ್ಟ 6,202 ದೊಡ್ಡ ಜಾನುವಾರುಗಳಿಗೆ 5.25 ಕೋಟಿ ರೂಪಾಯಿ ಪರಿಹಾರ ಧನ ನೀಡಲಾಗಿತ್ತು ಎಂದರು.

ರೈತರು ರಾಜ್ಯ ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದು, ಶೀಘ್ರ ಅನುದಾನವನ್ನು ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಕೋರಿದ್ದೇನೆ. ಶೀಘ್ರವೇ ಸಿಹಿ ಸುದ್ದಿ ಸಿಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+