Get Updates
Get notified of breaking news, exclusive insights, and must-see stories!

2014ರ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಪ್ರಕಟ

karnataka-second-puc-exam-2013-14-time-table-official-list-announced
ಬೆಂಗಳೂರು, ನ.16: ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಮಾರ್ಚ್ 28 ರಿಂದ ಆರಂಭವಾಗಲಿದ್ದು ಅದಕ್ಕೂ ಮುನ್ನ, 2013-14 ರ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ 12ರಂದು ಆರಂಭವಾಗಿ 27ಕ್ಕೆ ಕೊನೆಗೊಳ್ಳಲಿದೆ.

ಪರೀಕ್ಷೆಗಳು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.15ರ ವರೆಗೆ ನಡೆಯಲಿವೆ. ಆದರೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ ಮತ್ತು ಫ್ರೆಂಚ್‌ ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ರಾಮೇಗೌಡ ತಿಳಿಸಿದ್ದಾರೆ.

ಕಳೆದ ವರ್ಷ (2012-13) ಮಾರ್ಚ್ 13ರಂದು ಪರೀಕ್ಷೆಗಳು ಆರಂಭವಾಗಿ ಮಾರ್ಚ್ 28ಕ್ಕೆ ಮುಕ್ತಾಯಗೊಂಡಿದ್ದವು.

2013-14 ಸಾಲಿನ 2ನೇ ಪಿಯುಸಿ ಪರೀಕ್ಷೆ ವೇಳಾಪಟ್ಟಿ:

ಮಾ.12 - ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ
ಮಾ.13 - ಜೀವಶಾಸ್ತ್ರ/ಎಲೆಕ್ಟ್ರಾನಿಕ್ಸ್
ಮಾ.14 - ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
ಮಾ.15 - ಭೌತಶಾಸ್ತ್ರ/ಮನಃಶಾಸ್ತ್ರ
ಮಾ.17 - ಅರ್ಥಶಾಸ್ತ್ರ/ಭೂಗರ್ಭಶಾಸ್ತ್ರ
ಮಾ.18 - ಗಣಿತ/ಭೂಗೋಳಶಾಸ್ತ್ರ
ಮಾ.19 - ಐಚ್ಛಿಕ ಕನ್ನಡ/ಗೃಹ ವಿಜ್ಞಾನ/ ಬೇಸಿಕ್ ಮ್ಯಾಥ್ಸ್
ಮಾ.20 - ರಸಾಯನಶಾಸ್ತ್ರ/ ವ್ಯವಹಾರ ಅಧ್ಯಯನ
ಮಾ.21 - ತರ್ಕಶಾಸ್ತ್ರ/ ಶಿಕ್ಷಣ
ಮಾ.22 - ಇತಿಹಾಸ/ಗಣಕ ವಿಜ್ಞಾನ
ಮಾ.24 - ಕನ್ನಡ/ ತಮಿಳು/ಮಲೆಯಾಳಂ/ಅರೆಬಿಕ್
ಮಾ.25 - ಮರಾಠಿ/ಉರ್ದು/ಸಂಸ್ಕೃತ
ಮಾ.26 - ಇಂಗ್ಲಿಷ್
ಮಾ.27 - ಹಿಂದಿ/ತೆಲುಗು.

ಮಧ್ಯಾಹ್ನದ ಪರೀಕ್ಷೆ:
ಮಾ.15 - ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ; ಮಾ.24-ಫ್ರೆಂಚ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+