ಕರ್ನಾಟಕದಲ್ಲಿ ಹೊಸದಾಗಿ 8249 ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜೂನ್ 11: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ 8249 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನ 14975 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, ಇಲ್ಲಿಯವರೆಗೆ ಒಟ್ಟು 2511105 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 203769 ಸಕ್ರಿಯ ಪ್ರಕರಣಗಳಿವೆ.
ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 159 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ, 32,644 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 2747539 ಕೊರೊನಾ ಸೋಂಕಿತ ಪ್ರಕರಣಗಳಿವೆ.

ಬಾಗಲಕೋಟೆ 73, ಬಳ್ಳಾರಿ 189, ಬೆಳಗಾವಿ 436, ಬೆಂಗಳೂರು ಗ್ರಾಮಾಂತರ 234, ಬೆಂಗಳೂರು ನಗರ 1154, ಬೀದರ್ 9, ಚಾಮರಾಜನಗರ 162, ಚಿಕ್ಕಬಳ್ಳಾಪುರ 168, ಚಿಕ್ಕಮಗಳೂರು 332, ಚಿತ್ರದುರ್ಗ 123, ದಕ್ಷಿಣ ಕನ್ನಡ 506, ದಾವಣಗೆರೆ 260, ಧಾರವಾಡ 217, ಗದಗ 66, ಹಾಸನ 733, ಹಾವೇರಿ 65, ಕಲಬುರಗಿ 29, ಕೊಡಗು 189, ಕೋಲಾರ 179, ಕೊಪ್ಪಳ 98, ಮಂಡ್ಯ 366, ಮೈಸೂರು 817, ರಾಯಚೂರು 61, ರಾಮನಗರ 57 , ಶಿವಮೊಗ್ಗ 429, ತುಮಕೂರು 576, ಉಡುಪಿ 215, ಉತ್ತರ ಕನ್ನಡ 311, ವಿಜಯಪುರ 174, ಯಾದಗಿರಿಯಲ್ಲಿ 21 ಪ್ರಕರಣಗಳು ದಾಖಲಾಗಿವೆ.












Click it and Unblock the Notifications