ಕರ್ನಾಟಕದಲ್ಲಿ ಇಂದು ದಾಖಲೆಯ ಕೊರೊನಾ ಸೋಂಕಿತರು ಪತ್ತೆ
ಬೆಂಗಳೂರು, ಜುಲೈ 15: ಕರ್ನಾಟಕದಲ್ಲಿ ಒಂದೇ ದಿನ 3176 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 87 ಮಂದಿ ಸಾವನ್ನಪ್ಪಿದ್ದಾರೆ.
Recommended Video
ಬೆಂಗಳೂರು ನಗರವೊಂದರಲ್ಲೇ 1975 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.ಇಂದು ಒಟ್ಟು 1076 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 18,466 ಮಂದಿ ಗುಣಮುಖರಾಗಿದ್ದಾರೆ.
27,853 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೂ 928 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆರು ಮಂದಿ ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ. ಒಟ್ಟು 47,253 ಕೊರೊನಾ ಸೋಂಕಿತ ಪ್ರಕರಣಗಳಿವೆ.

ಇಂದು 22204 ಮಾದರಿಗಳನ್ನು ಪರೀಕ್ಷಿಸಲಾಗಿದೆ.ಒಟ್ಟು 902026 ಮಾದರಿಗಳನ್ನು ಇದುವರೆಗೆ ಪರೀಕ್ಷಿಸಲಾಗಿದೆ.ಬೆಂಗಳೂರು ನಗರದಲ್ಲಿ 1975 , ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ್ 35, ದಾವಣಗೆರೆ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25, ತುಮಕೂರು 24, ಕೊಡಗು 23, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದುರ್ಗ 12, ಬೆಂಗಳೂರು ಗ್ರಾಮಾಂತರ 10, ಚಾಮರಾಜನಗರ 8, ಹಾವೇರಿ 6, ರಾಮನಗರ 3 ಪ್ರಕರಣಗಳು ದಾಖಲಾಗಿದೆ.











Click it and Unblock the Notifications