Karnataka Rains: ಜುಲೈ 27ರವರೆಗೂ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

Karnataka Rains: ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಮುಂದಿನ 5 ದಿನಗಳ ಕಾಲ ಈ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದರೆ ಎಲ್ಲೆಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಈಗಾಗಲೇ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಮಳೆರಾಯ ಅಬ್ಬರಿಸಿ ಬೊಬ್ಬರೆದು ಅವಾಂತಾರಗಳನ್ನೇ ಸೃಷ್ಟಿಸಿದ್ದಾರೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹಾಗೆಯೇ ಚಾಮರಾಜನಗರ, ಬೆಳಗಾವಿ ಸೇರಿದ ಹಲವೆಡೆ ಭಾರೀ ಮಳೆ ಸುರಿದಿರುವ ವರದಿಯಾಗಿದೆ.

Karnataka Rains Heavy rainfall forecast in these districts for next four days from july 23

ಸೋಮವಾರ (ಜುಲೈ 22) ಉತ್ತರ ಕನ್ನಡದಲ್ಲಿ 20 ಸೆಂಟಿ ಮೀಟರ್‌, ಬೆಳಗಾವಿಯಲ್ಲಿ 7 ಸೆಂಟಿ ಮೀಟರ್‌, ಶಿವಮೊಗ್ಗದಲ್ಲಿ 11 ಸೆಂಟಿ ಮೀಟರ್‌ ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಅರಬ್ಬಿ ಸಮುದ್ರದ ಪೂರ್ವ ದಿಕ್ಕಿನಲ್ಲಿ ಟ್ರಫ್ ಸಂಚಾರ ಚುರುಕುಗೊಂಡಿದ್ದು, ಜುಲೈ 23ರಿಂದ 26ರವರೆಗೆ ಕರಾವಳಿ, ದಕ್ಷಿಣ ಒಳನಾಡು ಭಾಗದಲ್ಲಿ ಮುಂಗಾರು ಮತ್ತಷ್ಟು ಚುರು ಪಡೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಉತ್ತರ ಕನ್ನಡ, ಉಡುಪಿ, ದಕ್ಷಿಣ ಜಿಲ್ಲೆಗಳಿಗೆ ಇಂದು (ಜುಲೈ 23) ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜುಲೈ 24 ರಿಂದ 26ರವರೆಗೆ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 24ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

ಜುಲೈ 26ರವರೆಗೆ ಭಾರೀ ಮಳೆ ಹಿನ್ನೆಲೆ ಬೆಳಗಾವಿ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಜುಲೈ 23ರಿಂದ ಜುಲೈ 27ರ ವರೆಗೆ ಸಾಧಾರಣ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿದೆ.

ಜುಲೈ ಎಲ್ಲಿಲ್ಲಿ ಎಷ್ಟು ಮಳೆ?

1. ಮಂಗಳೂರು - 30.8 ಮಿ.ಮೀ
2. ಕಾರವಾರ - 15 ಮಿ.ಮೀ.
3. ಶಿರಾಲಿ - 32.6 ಮಿ.ಮೀ
4. ಹೊನ್ನಾವರ - 107.0 ಮಿ.ಮೀ
5. ಪಣಂಬೂರು - 21.0 ಮಿ.ಮೀ
6. ಆಗುಂಬೆ - 99.5 ಮಿ.ಮೀ
7. ಮೂಡಿಗೆರೆ - 51.0 ಮಿ.ಮೀ
8. ಬೆಳಗಾವಿ - 13.0 ಮಿ.ಮೀ
9. ಬೆಂಗಳೂರು - 5.4 ಮಿ.ಮೀ
10. ಬೆಂಗಳೂರು ಗ್ರಾಮಾಂತರ : 5.5 ಮಿ.ಮೀ
11. ಹಾಸನ : 9.0 ಮಿ.ಮೀ
12. ಗದಗ - 3.5 ಮಿ.ಮೀ
13. ಚಿತ್ರದುರ್ಗ - 2.4 ಮಿ.ಮೀ
14. ಹಾವೇರಿ - 4 ಮಿ.ಮೀ
15. ದೊಡ್ಡಬಳ್ಳಾಪುರ - 1.5 ಮಿ.ಮೀ

ಇನ್ನು ಇಂದು (ಜುಲೈ 23) ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+