ಬಿಇ ಶುಲ್ಕ ಶೇ.50ರಷ್ಟು ಏರಿಕೆಗೆ ಖಾಸಗಿ ಕಾಲೇಜುಗಳ ಡಿಮ್ಯಾಂಡ್

ಬೆಂಗಳೂರು, ಏಪ್ರಿಲ್ 26: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಸರ್ಕಾರದ ಮುಂದೆ ಶುಲ್ಕ ಏರಿಕೆಗೆ ಸಂಬಂಧಿಸಿದಂತೆ ಹೊಸ ಬೇಡಿಕೆ ಇಡಲು ನಿರ್ಧರಿಸಿದ್ದಾರೆ. ಎಂಜಿನಿಯರಿಂಗ್ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಈ ಬಾರಿ ಶೇ.50ರಷ್ಟು ಏರಿಸಲು ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹೊಸ ಸರ್ಕಾರದ ಮುಂದಿಡಲು ನಿರ್ಧರಿಸಿವೆ.

ಚುನಾವಣೆ ನೀತಿ ಸಮಹಿತೆ ಜಾರಿಯಲ್ಲಿರುವದರಿಂದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರೂಪ್ರಯೋಜನವಾಗುವುದಿಲ್ಲ. ಹಾಗಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಶೇ.45ರಿಂದ 50ರಷ್ಟು ಶುಲ್ಕ ಹೆಚ್ಚಿಸುವಂತೆ ಒತ್ತಡ ಹೇರಲಾಗುವುದು ಎಂದು ಖಾಸಗಿ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ಕಾರ್ಯದರ್ಶಿ ಎಂ.ಕೆ. ಪಾಂಡುರಂಗಶೆಟ್ಟಿ ತಿಳಿಸಿದ್ದಾರೆ.

ಕಳೆದ ವರ್ಷ ಸರ್ಕಾರ ಮನವೊಲಿಕೆ ಮಾಡಿದ್ದರಿಂದ ಶುಲ್ಕ ಏರಿಸಿರಲಿಲ್ಲ. ಆದರೆ, ಈ ವರ್ಷ ವೇತನ ಹೆಚ್ಚಳ ಮಾಡಿರುವುದರಿಂದ ಸಿಬ್ಬಂದಿಗೆ ಇಎಸ್ ಐ, ಪಿಎಫ್ ಇತ್ಯಾದಿ ಸೌಲಭ್ಯಗಳನ್ನು ನೀಡಬೇಕಾಗಿರುವುದರಿಂದ ನಮಗೆ ಶೇ.40ರಷ್ಟು ಹೊರ ಬಿದ್ದಿದೆ ಎಂದು ಅವರು ತಿಳಿಸಿದ್ದಾರೆ.

Karnataka: Private engineering colleges want 50 per cent fee hike

ಖಾಸಗಿ ವಿವಿ ಮಾನ್ಯತೆಗೆ ಪ್ರಯತ್ನ: ರಾಜ್ಯ ಸರ್ಕಾರ ಎಂಜಿನಿಯರಿಂಗ್ ಶುಲ್ಕ ಹೆಚ್ಚಿಸಲು ಅವಕಾಶ ಮಾಡಿಕೊಡದಿದ್ದಲ್ಲಿ ಕಾಲೇಜುಗಳನ್ನು ಮುಚ್ಚುವುದು ಅಥವಾ ಖಾಸಗಿ ವಿವಿಗಳ ಮಾನ್ಯತೆ ಪಡೆಯುವುದು ಅನಿವಾರ್ಯವಾಗುತ್ತದೆ.
. ಸರ್ಕಾರ ನಿಗದಿಪಡಿಸುವ ಶುಲ್ಕದಿಂದ ಕಾಲೇಜುಗಳನ್ನು ನಡೆಸಲು ಸಾಧ್ಯವೇ ಇಲ್ಲ. ಈ ಕಾರಣದಿಂದ ತಾವೇ ಶುಲ್ಕ ನಿಗದಿಪಡಿಸಿಕೊಳ್ಳುವ ಮೂಲಕ ಕೆಲವೇ ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟು ಕೊಡುತ್ತಿವೆ ಎಂದು ಖಾಸಗಿ ಎಂಜಿನಿಯರಿಂಗ್ ಕಾಲೇಜು ಮುಖ್ಯಸ್ಥರೊಬ್ಬರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಭವನೀಯ ಶುಲ್ಕ: ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ವೈದ್ಯ ಕೋರ್ಸ್ ಗೆ ಈಗಿನ ಶುಲ್ಕ 70ಸಾವಿರ, ಪರಿಷ್ಕೃತ 77ಸಾವಿರ ರೂ, ಕಾಮೆಡ್-ಕೆ ಕೋಟಾ ದಲ್ಲಿ ಪ್ರಸ್ತುತ 5.75 ಲಕ್ಷ ರೂ, ಪರಿಷ್ಕೃತ 6.32 ಲಕ್ಷ ರೂ, ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ದಂತ ಕೋರ್ಸ್ ಗೆ 45 ಸಾವಿ ರೂ, ಪರಿಷ್ಕೃತ 49 ಸಾವಿರ ರೂ ಎಂದು ಅಂದಾಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+