ಚುನಾವಣಾಪೂರ್ವ ಸಮೀಕ್ಷೆ: ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ?

ನವದೆಹಲಿ, ಜ 22: ನರೇಂದ್ರ ಮೋದಿ ಹವಾದ ಜೊತೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತೃ ಪಕ್ಷಕ್ಕೆ ವಾಪಸಾತಿಯಿಂದ ಗರಿಗೆದರಿರುವ ಬಿಜೆಪಿ ರಾಜ್ಯದಿಂದ ಕೇಂದ್ರಕ್ಕೆ ಎಷ್ಟು ಸಂಸದರನ್ನು ಕಳುಹಿಸುವಲ್ಲಿ ಯಶಸ್ವಿಯಾಗುತ್ತದೆ?

ಅಭಿವೃದ್ದಿ ಮಂತ್ರದೊಂದಿಗೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ತಂದು ಕೊಡುವರೇ? (ಚುನಾವಣಾಪೂರ್ವ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಯಾರು)

ಯಾವುದೇ ರಾಜ್ಯ ಅಭಿವೃದ್ದಿ ಪಥದತ್ತ ಹೋಗ ಬೇಕಾದರೆ ಪ್ರಾದೇಶಿಕ ಪಕ್ಷಗಳೇ ಶಾಸ್ವತ, ರಾಷ್ಟೀಯ ಪಕ್ಷಗಳಲ್ಲ. ನರೇಂದ್ರ ಮೋದಿ, ರಾಹುಲ್ ಗಾಂಧಿ ಆಮೇಲೆ, ಮೊದಲು ದೇವೇಗೌಡ ಮತ್ತು ಮೂರನೇ ರಂಗ ಎನ್ನುತ್ತಿರುವ ಜೆಡಿಎಸ್ ನಾಯಕರು ಸಂಸತ್ತಿಗೆ ತಮ್ಮ ಪಕ್ಷದ ಎಷ್ಟು ಸಂಸದರನ್ನು ಆರಿಸಿ ಕಳುಹಿಸುವಲ್ಲಿ ಯಶಸ್ವಿಯಾಗುತ್ತಾರೆ?

ಲೋಕನೀತಿ ಮತ್ತು ಐಬಿಎನ್ ನ್ಯಾಷನಲ್ ಇಲೆಕ್ಷನ್ ಟ್ರ್ಯಾಕರ್ ನಡೆಸಿದ ಸಮೀಕ್ಷೆಯಲ್ಲಿ ಯಾವ ಪಕ್ಷದ ಮೇಲೆ ಮತದಾರನ ಒಲವಿದೆ? ಈ ತಕ್ಷಣ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ ಸಿಗಬಹುದು, ಸ್ಲೈಡಿನಲ್ಲಿ ನೋಡಿ..

ಈ ತಕ್ಷಣ ಚುನಾವಣೆ ನಡೆದರೆ

ಈ ತಕ್ಷಣ ಚುನಾವಣೆ ನಡೆದರೆ

ಈ ತಕ್ಷಣ ಚುನಾವಣೆ ನಡೆದರೆ (ಜನವರಿ 2014) ಜನರ ನಾಡಿಮಿಡಿತ ಹೇಗಿರುತ್ತದೆ ಎನ್ನುತ್ತದೆ ಈ ಸಮೀಕ್ಷೆ. ಎರಡೂ ರಾಷ್ಟೀಯ ಪಕ್ಷಗಳು ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೀಟನ್ನು ಗೆಲ್ಲಬೇಕೆನ್ನುವ ಹೋರಾಟದಲ್ಲಿದೆ.

ಮೋದಿಗೆ ಸರಿಸಾಟಿ ಯಾರೂ ಇಲ್ಲ

ಮೋದಿಗೆ ಸರಿಸಾಟಿ ಯಾರೂ ಇಲ್ಲ

ಇತರ ರಾಜ್ಯಗಳಂತೆ ಪ್ರಧಾನಿ ಯಾರ ಆಗಬೇಕೆನ್ನುವ ಪಶ್ನೆಗೆ ಮೋದಿಯೇ ಎಂದು ರಾಜ್ಯದ ಮತದಾರರು ಉತ್ತರಿಸಿದ್ದಾರೆ ಎನ್ನುತ್ತದೆ ಸಮೀಕ್ಷೆ. ಶೇ.28 ಮಂದಿ ಮೋದಿ, ಶೇ. 19 ಮಂದಿ ರಾಹುಲ್ ಗಾಂಧಿ, ಶೇ. 14 ಮಂದಿ ಸೋನಿಯಾ ಗಾಂಧಿ ಮತ್ತು ಶೇ. 8ರಷ್ಟು ಮಂದಿ ದೇವೇಗೌಡ ಪ್ರಧಾನಿಯಾಗ ಬೇಕೆಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಯಡಿಯೂರಪ್ಪ ಫ್ಯಾಕ್ಟರ್ ವರ್ಕೌಟ್ ಆಗಲ್ಲ

ಯಡಿಯೂರಪ್ಪ ಫ್ಯಾಕ್ಟರ್ ವರ್ಕೌಟ್ ಆಗಲ್ಲ

ಸಮೀಕ್ಷೆಯ ಪ್ರಕಾರ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿರುವುದರಿಂದ ಪಕ್ಷಕ್ಕೆ ಅಷ್ಟೇನೂ ಲಾಭ ಆಗುವುದಿಲ್ಲ ಎನ್ನುತ್ತದೆ. ಇಲ್ಲಿ ಗಮನಿಸ ಬೇಕಾದ ಅಂಶವೇನಂದರೆ ಪ್ರಭಲ ಲಿಂಗಾಯಿತ ಸಮುದಾಯದ ಶೇ. 51 ಮಂದಿ ಯಡಿಯೂರಪ್ಪ ಮರಸೇರ್ಪಡೆಯನ್ನು ವಿರೋಧಿಸಿದ್ದಾರೆ ಮತ್ತು ಶೇ. 30ರಷ್ಟು ಮಂದಿ ಮಾತ್ರ ಯಡಿಯೂರಪ್ಪ ಬಿಜೆಪಿ ವಾಪಸಾತಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಕಾಂಗ್ರೆಸ್ ಜನಪ್ರಿಯತೆ ಹೇಗಿದೆ?

ಕಾಂಗ್ರೆಸ್ ಜನಪ್ರಿಯತೆ ಹೇಗಿದೆ?

ಸಿದ್ದರಾಮಯ್ಯ ಸರಕಾರದ ಎರಡು ಸ್ಕೀಂಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಯ ಬಗ್ಗೆ ಜನರಿಗೆ ಅರಿವಿದೆ. ಹಾಗೂ, ಕಳೆದ ಬಿಜೆಪಿ ಸರಕಾರಕ್ಕೆ ಹೋಲಿಸಿದರೆ ಕಾಂಗ್ರೆಸ್ ಸರಕಾರವೇ ಉತ್ತಮ ಎನ್ನುವವರು ಶೇ. 46 ಮಂದಿ. ಜೆಡಿಎಸ್ ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸ ಬೇಕೆನ್ನುವವರು ಹತ್ತರಲ್ಲಿ ಆರು ಜನ. ಆರು ತಿಂಗಳ ಹಿಂದೆ ಸಿದ್ದರಾಮಯ್ಯ ಸರಕಾರಕ್ಕಿದ್ದ ಜನಪ್ರಿಯತೆಯಲ್ಲಿ ದಿನೇ ದಿನೇ ಏರಿಕೆ ಕಂಡು ಬರುತ್ತಿದೆ ಎನ್ನುವುದು ಸಮೀಕ್ಷೆಯ ಇನ್ನೊಂದು ಪ್ರಮುಖ ಅಂಶ.

ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ

ಸಮೀಕ್ಷೆಯ ಪ್ರಕಾರ ಯಾರಿಗೆ ಎಷ್ಟು ಸ್ಥಾನ

ಒಟ್ಟು ಸ್ಥಾನ - 28 (ಆವರಣದಲ್ಲಿ ಹಾಲಿ ಬಲಾಬಲ)

ಕಾಂಗ್ರೆಸ್ - 10 ರಿಂದ 18 ಸ್ಥಾನ (06)
ಬಿಜೆಪಿ - 6 ರಿಂದ 10 ಸ್ಥಾನ (19)
ಜೆಡಿಎಸ್ - 4 ರಿಂದ 8 ಸ್ಥಾನ (03)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+