ಟಾಪ್‌ 10 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕಾಂಗ್ರೆಸ್‌ನವರೇ ಹೆಚ್ಚು, ಬಿಜೆಪಿ-ಜೆಡಿಎಸ್‌ ನಾಯಕರೆಷ್ಟು?

ಬೆಂಗಳೂರು, ಮೇ 16: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್‌ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಬಾರೀ ವಿಧಾನಸಭೆಗೆ ಆಯ್ಕೆಯಾದ 224 ಶಾಸಕರಲ್ಲಿ ಬರೋಬ್ಬರಿ ಹತ್ತು ಶಾಸಕರು ಸಿರಿವಂತ ನಾಯಕರಾಗಿದ್ದಾರೆ.

ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೊಷಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 2018ರಲ್ಲೂ ಇಷ್ಟೇ ಪ್ರಮಾಣದ ಜನ ಶಾಸಕರು ಕೋಟ್ಯಧಿಪತಿಗಳು ವಿಧಾನಸಭೆಯಲ್ಲಿ ಶಾಸಕರಾಗಿದ್ದರು.

DK shivakumar Is Richest MLA

ಕರ್ನಾಟಕ ವಿಧಾನಸಭೆಯ 224 ಶಾಸಕರ ಪೈಕಿ ಈ ಬಾರಿ ಆಯ್ಕೆಯಾದ ಬಹುತೇಕ ಶಾಸಕರು ಕೋಟ್ಯಧಿಪತಿಗಳೇ ಆಗಿದ್ದಾರೆ. ಕರ್ನಾಟಕದ ಶೇ.97ರಷ್ಟು ಶಾಸಕರು ಕೋಟ್ಯಧಿಪತಿಗಳಾಗಿದ್ದು, ಒಕ್ಕಲಿಗ ಸಮುದಾಯದ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ರಾಜ್ಯದ ಅತ್ಯಂತ ಸಿರಿವಂತ ಶಾಸಕರಾಗಿದ್ದಾರೆ. ಕೋಟ್ಯಧಿಪತಿಗಳು ಲಿಸ್ಟ್‌ ನಲ್ಲಿ ಪಕ್ಷೇತರ ಶಾಸಕರೊಬ್ಬರು ರಾಜ್ಯದ ಎರಡನೇ ಸಿರಿವಂತ ಶಾಸಕರಾಗಿದ್ದಾರೆ.

ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೊಷಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬಾರಿಯ ಶಾಸಕರ ಸರಾಸರಿ ಆಸ್ತಿ 64.39 ಕೋಟಿ ರೂ. ಇದೆ ಎಂದು ಹೇಳಲಾಗಿದೆ. ಇನ್ನೂ ಟಾಪ್‌ 10 ಸಿರಿವಂತ ಶಾಸಕರ ಪಟ್ಟಿಯಲ್ಲಿ ಒಬ್ಬರು ಬಿಜೆಪಿ ಮತ್ತು ಒಬ್ಬರು ಜೆಡಿಎಸ್‌ ಶಾಸಕರು ಮಾತ್ರ ಸ್ಥಾನ ಪಡೆದಿದ್ದಾರೆ. ಬೇಲೂರು ಕ್ಷೇತ್ರದ ಬಿಜೆಪಿ ಶಾಸಕ ಎಚ್‌ಕೆ ಸುರೇಶ್‌ (6ನೇ ಸ್ಥಾನ) ಹಾಗೂ ಹನೂರು ಕ್ಷೇತ್ರದ ಜೆಡಿಎಸ್‌ ಶಾಸಕ ಎಂಆರ್‌ ಮಂಜುನಾಥ್‌ (8ನೇ ಸ್ಥಾನ) ಅವರು ಸ್ಥಾನ ಪಡೆದುಕೊಂಡಿದ್ದಾರೆ.

2018ರಲ್ಲೂ ಷ್ಟೇ ಪ್ರಮಾಣದ ಜನ ಕೋಟ್ಯಧಿಪತಿಗಳು ಸದನದಲ್ಲಿದ್ದರು ಎಂದು ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೊಷಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿತ್ತು. ಆದರೆ, ಕಳೆದ ಬಾರಿ ಶಾಸಕರ ಸರಾಸರಿ ಆಸ್ತಿ 34.59 ಕೋಟಿ ರೂ. ಇದ್ದರೆ, ಈ ಬಾರಿ ಅದು 60 ಕೋಟಿ ರೂ. ದಾಟಿದೆ ಎಂದು ವರದಿಯಿಂದ ತಿಳಿದು ಬಂದಿದೆ. ಸುಮಾರು ಶೇ.81ರಷ್ಟು ಶಾಸಕರು 5 ಕೋಟಿ ರೂಪಾಯಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಇನ್ನು, ಕರ್ನಾಟಕ ಎಲೆಕ್ಷನ್‌ ವಾಚ್‌ ಮತ್ತು ಅಸೊಷಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ADR) ಬಿಡುಗಡೆ ಮಾಡಿರುವ ವರದಿಯಲ್ಲಿ ಸಿರಿವಂತ ಶಾಸಕರ ಪಟ್ಟಿಯಲ್ಲಿ ಕಾಂಗ್ರೆಸ್‌ನವರೇ ಹೆಚ್ಚು ಮಂದಿ ಇದ್ದಾರೆ. ಕಾಂಗ್ರೆಸ್‌ ಶಾಸಕರ ಸರಾಸರಿ ಆಸ್ತಿ 67.13 ಕೋಟಿ ರೂ. ಇದ್ದು, ಬಿಜೆಪಿ ಶಾಸಕರ ಸರಾಸರಿ ಆಸ್ತಿ 44.36 ಕೋಟಿ ರೂ. ಇದ್ದು, ಜೆಡಿಎಸ್‌ ಶಾಸಕರ ಸರಾಸರಿ ಆಸ್ತಿ 46.01 ಕೋಟಿ ರೂ. ಇದೆ. ಟಾಪ್‌ 10 ಸಿರಿವಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳು ಕೂಡ ಕಾಂಗ್ರೆಸ್‌ ಶಾಸಕರ ಪಾಲಾಗಿದ್ದು, ಒಟ್ಟು 8 ಮಂದಿ ಕಾಂಗ್ರೆಸ್‌ನವರೇ ಸಿರಿವಂತರಾಗಿದ್ದಾರೆ.

10 ಜನ ಸಿರಿವಂತ ಶಾಸಕರ ಪೈಕಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕರ್ನಾಟಕದ ಅತಿ ಸಿರಿವಂತ ಶಾಸಕರಾಗಿದ್ದು, ಇವರ ಆಸ್ತಿ 1413 ಕೋಟಿ ರೂ.ಗೂ ಹೆಚ್ಚಿದೆ. ಇತ್ತ ಎರಡನೇ ಸಿರಿವಂತ ಶಾಸಕ ಗೌರಿಬಿದನೂರಿನ ಪಕ್ಷೇತರ ಶಾಸಕ ಕೆಎಚ್‌ಪಿ ಗೌಡ ಆಗಿದ್ದು, 1,267 ಕೋಟಿ ರೂ. ಆಸ್ತಿ ಹೊಂದಿದ್ದಾರೆ. 1,157 ಕೋಟಿ ರೂ. ಆಸ್ತಿ ಹೊಂದಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಕೃಷ್ಣ ಸಿರಿವಂತ ಶಾಸಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+