ಸಮೀಕ್ಷೆ: ಕೇಂದ್ರ ಕರ್ನಾಟಕ ಬಿಜೆಪಿಗೆ, ಉಳಿದೆಡೆ ಕಾಂಗ್ರೆಸ್ ನಾಗಾಲೋಟ

ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ 2018ರಲ್ಲಿ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿ-ಫೋರ್ ಸಮೀಕ್ಷೆ ಹೇಳಿದೆ. ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿಗಿಂತ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಧ್ಯ ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಸಂಪಾದಿಸಲಿದೆ. ಇನ್ನು ಕರಾವಳಿ ಭಾಗ, ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಕೈ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲಿದೆ. ಹಳೆ ಮೈಸೂರಿನಲ್ಲಿ ಮಾತ್ರ ಜೆಡಿಎಸ್ ಕಾಂಗ್ರೆಸ್ ಗೆ ತುರುಸಿನ ಸ್ಪರ್ಧೆ ನೀಡಲಿದೆ. ಆದರೂ ಮಧ್ಯ ಕರ್ನಾಟಕ ಬಿಟ್ಟು ಉಳಿದೆಲ್ಲಾ ಕಡೆ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ.

2018ರ ಮಾರ್ಚ್ 1 ರಿಂದ 25ರ ನಡುವೆ ಈ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಗಾಗಿ 154 ವಿಧಾನಸಭಾ ಕ್ಷೇತ್ರಗಳ 22,357 ಮತದಾರರನ್ನು ಸಂದರ್ಶಿಸಲಾಗಿದೆ. ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದ್ದಾರೆ ಎಂದು ಸಂಸ್ಥೆ ತನ್ನ ಸಮೀಕ್ಷೆಯ ಬಗ್ಗೆ ವಿವರ ನೀಡಿದೆ.

326 ನಗರ ಮತ್ತು 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆಯು ಒಳಗೊಂಡಿದೆ ಎಂದು ಸಿ-ಫೋರ್ ಸಂಸ್ಥೆ ಹೇಳಿದ್ದು, ಶೇಕಡಾ 1ರಷ್ಟು ಇದು ತಪ್ಪುಗಳನ್ನು ಒಳಗೊಂಡಿರಬಹುದು ಎಂದು ಹೇಳಿದೆ.

ಸಮೀಕ್ಷೆ ಸಂಪೂರ್ಣ ವಿವರ ಇಲ್ಲಿದೆ..

ರಾಷ್ಟ್ರ ರಾಜಧಾನಿಯಲ್ಲಿ ಕೈ ಕಮಾಲ್

ರಾಷ್ಟ್ರ ರಾಜಧಾನಿಯಲ್ಲಿ ಕೈ ಕಮಾಲ್

ಬೆಂಗಳೂರಿನಲ್ಲಿ ಒಟ್ಟು 28 ಸ್ಥಾನಗಳಿವೆ. ಇದರಲ್ಲಿ ಕಾಂಗ್ರೆಸ್ 19 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಸಿ-ಫೋರ್ ಸಮೀಕ್ಷೆ ಹೇಳಿದೆ. ಉಳಿದ 9 ಸ್ಥಾನಗಳು ಬಿಜೆಪಿಯ ಪಾಲಾಗಲಿದೆ.

ಕಳೆದ ಬಾರಿ ಬೆಂಗಳೂರಿನಲ್ಲಿ ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಒಂದೂ ಸ್ಥಾನ ಗೆಲ್ಲುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಇನ್ನು ಮತದಾನದ ಪ್ರಮಾಣಕ್ಕೆ ಬರುವುದಾದರೆ ಕಳೆದ ಬಾರಿ ಶೇಕಡಾ 40 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ ಶೇಕಡಾ 49 ಮತಗಳನ್ನು ಪಡೆಯಲಿದೆ. ಬಿಜೆಪಿ ಶೇಕಡಾ 1 ಮತಗಳನ್ನು ಕಳೆದುಕೊಂಡು ಶೇಕಡಾ 31 ಮತಗಳನ್ನು ಪಡೆಯಲಿದೆ.

ಜೆಡಿಎಸ್ ಶೇಕಡಾ 6 ಮತಗಳನ್ನು ಕಳೆದುಕೊಂಡು ತನ್ನ ಮತಗಳಿಕೆಯನ್ನು ಶೇಕಡಾ 13ಕ್ಕೆ ಇಳಿಸಿಕೊಳ್ಳಲಿದೆ.

ಇತರರ ಮತಗಳಿಕೆಯಲ್ಲೂ ಶೇಕಡಾ 2 ಇಳಿಕೆಯಾಗಲಿದ್ದು ಶೇಕಡಾ 7ಕ್ಕೆ ಕುಸಿಯಲಿದೆ.

ಹಳೆ ಮೈಸೂರಲ್ಲಿ ಜೆಡಿಎಸ್ ತುರುಸಿನ ಸ್ಪರ್ಧೆ

ಹಳೆ ಮೈಸೂರಲ್ಲಿ ಜೆಡಿಎಸ್ ತುರುಸಿನ ಸ್ಪರ್ಧೆ

ಚಿಕ್ಕಮಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ರಾಮನಗರ ಜಿಲ್ಲೆಗಳು ಹಳೆ ಮೈಸೂರಿನ ಜಿಲ್ಲೆಗಳಾಗಿವೆ.

ಹಳೆ ಮೈಸೂರಲ್ಲಿ ಬರೋಬ್ಬರಿ 65 ಸ್ಥಾನಗಳಿದ್ದು ಇಲ್ಲಿ ಶೇಕಡಾ 48 ಮತಗಳನ್ನು ಪಡೆದು ಕಾಂಗ್ರೆಸ್ ಅರ್ಧಕ್ಕಿಂತ ಹೆಚ್ಚು ಅಂದರೆ 33 ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಹಳೆ ಮೈಸೂರು ಭಾಗದ ಪ್ರಭಲ ಪಕ್ಷ ಜೆಡಿಎಸ್ ಇಲ್ಲಿ ಕಾಂಗ್ರೆಸ್ ಗೆ ತುರುಸಿನ ಸ್ಪರ್ಧೆ ನೀಡಲಿದ್ದು ಶೇಕಡಾ 29 ಮತಗಳಿಕೆಯೊಂದಿಗೆ 24 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಚುನಾವಣಾಪೂರ್ವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಇಲ್ಲಿ ಬಿಜೆಪಿ ಶೇಕಡಾ 17 ಮತಗಳನ್ನು ಪಡೆದು ಕೇವಲ 7 ಸ್ಥಾನಗಳಲ್ಲಿ ಜಯಗಳಿಸಲಿದೆ. ಪಕ್ಷೇತರರು ಒಂದು ಸ್ಥಾನದಲ್ಲಿ ಗೆಲ್ಲಲಿದ್ದಾರೆ.

ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಫೈಟ್

ಮುಂಬೈ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಬಿಜೆಪಿ ಫೈಟ್

ಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಗದಗ ಮುಂಬೈ ಕರ್ನಾಟಕದ ಜಿಲ್ಲೆಗಳಾಗಿವೆ. ಈ ಜಿಲ್ಲೆಗಳಲ್ಲಿ ಒಟ್ಟು 50 ವಿಧಾನಸಭಾ ಕ್ಷೇತ್ರಗಳಿವೆ.

ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದೆ. ಕಾಂಗ್ರೆಸ್ ಶೇಕಡಾ 45 ಮತಗಳನ್ನು ಪಡೆದು ಇಲ್ಲಿ 28 ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ.

ಬಿಜೆಪಿಯೂ ತಾನೇನು ಕಡಿಮೆ ಇಲ್ಲ ಎಂದು ಶೇಕಡಾ 42 ಮತಗಳನ್ನು ಪಡೆದು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಿ-ಫೋರ್ ಸಮೀಕ್ಷೆ ಹೇಳಿದೆ.

ಜೆಡಿಎಸ್ ಮತ್ತು ಇತರರು ಇಲ್ಲಿ ಕ್ರಮವಾಗಿ ಶೇಕಡಾ 5 ಮತ್ತು 8 ಮತಗಳನ್ನು ಪಡೆಯಲಿದ್ದಾರಾದರೂ ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಸಮೀಕ್ಷೆ ಅಂದಾಜಿಸಿದೆ.

ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅಬ್ಬರ

ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅಬ್ಬರ

ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಅಬ್ಬರ ತೋರಲಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಈ ಭಾಗದಲ್ಲಿ 22 ಸ್ಥಾನಗಳಿದ್ದು ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ತನ್ನ ಜೇಬಿಗಿಳಿಸಲಿದೆ.

ಈ ಭಾಗದಲ್ಲಿ ಶೇಕಡಾ 45 ಮತಗಳನ್ನು ಪಡೆದು ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಶೇಕಡಾ 41 ಮತಗಳನ್ನು ಪಡೆದು ಇಲ್ಲಿ 9 ಸ್ಥಾನಗಳಲ್ಲಿ ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ.

ಕಳೆದ ಬಾರಿ ಇಲ್ಲಿ ಮೂರು ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಇಲ್ಲಿ ಶೇಕಡಾ 6 ಮತಗಳನ್ನು ಪಡೆಯಲಿದೆ. ಆದರೆ ಒಂದೂ ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಸಿ-ಫೋರ್ ಸಮೀಕ್ಷೆ : ಚುನಾವಣೆ ಮೇಲೆ ಐಟಿ ದಾಳಿ ಪ್ರಭಾವವೇನು?

ಕರಾವಳಿ ಕರ್ನಾಟಕದಲ್ಲಿ ಬಿಜೆಪಿ - ಕಾಂಗ್ರೆಸ್ ಕಾದಾಟ

ಕರಾವಳಿ ಕರ್ನಾಟಕದಲ್ಲಿ ಬಿಜೆಪಿ - ಕಾಂಗ್ರೆಸ್ ಕಾದಾಟ

ಉಡುಪಿ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡಗಳನ್ನು ಒಳಗೊಂಡ ಕರಾವಳಿ ಕರ್ನಾಟಕದಲ್ಲಿ 19 ಸ್ಥಾನಗಳಿವೆ. ಇಲ್ಲಿ ಈ ಬಾರಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ. ಆದರೆ ಬಿಜೆಪಿ ಒಂದಷ್ಟು ಕಾಂಗ್ರೆಸ್ ನ ಸ್ಥಾನಗಳನ್ನು ಕಿತ್ತುಕೊಳ್ಳಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ 10 ಸ್ಥಾನಗಳನ್ನು ಗೆಲ್ಲಲಿದ್ದು ಶೇಕಡಾ 47 ಮತಗಳನ್ನು ಜೇಬಿಗಿಳಿಸಲಿದೆ.

ಇನ್ನು ಬಿಜೆಪಿ ಶೇಕಡಾ 43 ಮತಗಳೊಂದಿಗೆ 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಡಿಎಸ್ ನದು ಈ ಭಾಗದಲ್ಲಿ ಶೂನ್ಯ ಸಂಪಾದನೆ. ಶೇಕಡಾ 6 ಮತಗಳನ್ನು ಮಾತ್ರ ಇಲ್ಲಿ ಜೆಡಿಎಸ್ ಪಡೆಯಲಿದೆ. ಉಳಿದ ಶೇಕಡಾ 4 ಮತ ಇತರರ ಪಾಲಾಗಲಿದೆ.

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ನಾಗಾಲೋಟ

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ನಾಗಾಲೋಟ

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಗಳನ್ನು ಒಳಗೊಂಡ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಭರ್ಜರಿ ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಈ ಭಾಗದ ಗೆಲುವು ನಿರ್ಣಾಯಕವಾಗಲಿದೆ.

ಈ ಭಾಗದಲ್ಲಿ ಕಾಂಗ್ರೆಸ್ ಶೇಕಡಾ 46 ಮತಗಳನ್ನು ಪಡೆದು ಬರೋಬ್ಬರಿ 27 ಸ್ಥಾನಗಳಲ್ಲಿ ಜಯಗಳಿಸಲಿದೆ. ಬಿಜೆಇ ಇಲ್ಲಿ ಶೇಕಡಾ 33 ಮತಗಳನ್ನು ಪಡೆಯಲಿದ್ದು ಕಾಂಗ್ರೆಸ್ ಗಿಂತ 17 ಸ್ಥಾನಗಳನ್ನು ಅಂದರೆ 10 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ.

ಇಲ್ಲಿ ಜೆಡಿಎಸ್ ಶೇಕಡಾ 14 ಮತಗಳನ್ನು ಪಡೆದು ಮೂರು ಸ್ಥಾನಗಳನ್ನು ಪಡೆಯಲಿದೆ ಮತ್ತು ಇತರರು ಶೇಕಡಾ 7 ಮತಗಳನ್ನು ಪಡೆಯಲಿದ್ದಾರೆ. ಆದರೆ ಇತರರ ಸೀಟು ಸಂಪಾದನೆ ಮಾತ್ರ ಶೂನ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+