Karnataka Monsoon: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ?, ಇಂದಿನ ವರದಿ ಇಲ್ಲಿದೆ

ಕರ್ನಾಟಕ, ಜುಲೈ, 09: ರಾಜ್ಯದ ಹಲವೆಡೆ ಮುಂಗಾರು ಆರ್ಭಟ ಶುರುವಾಗಿದ್ದು, ಇದರಿಂದ ಜಲಾಶಯಗಳಿಗಳಿಗೆ ಮರುಜೀವ ಬಂದಂತಾಗಿದೆ. ಹಾಗಾದರೆ ರಾಜ್ಯದ ಪ್ರಮುಖ ಜಲಾಶಯಗಳ ಭಾನುವಾರದ (ಜುಲೈ 09) ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ಇದರಿಂದ ಅನ್ನದಾತರ ಮುಖದಲ್ಲಿ ಸಂತಸ ತರಿಸಿದಂತಾಗಿದೆ. ಹಾಗೆಯೇ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಜುಲೈ 13ರವರೆಗೂ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮುಂಜಾಗ್ತತಾ ಕ್ರಮವಾಗಿ ಈ ಭಾಗದಲ್ಲಿ ಯೆಲ್ಲೋ ಅಲರ್ಟ್​ ಸಹ ಘೋಷಣೆ ಮಾಡಲಾಗಿದೆ. ಮತ್ತು ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದೆ ಎಂದು ತಿಳಿಸಿದೆ.

Water level of Karnataka states major reservoirs

1. ಕೆಆರ್​ಎಸ್​ ಜಲಾಶಯ

*ಗರಿಷ್ಠ ನೀರಿನ ಮಟ್ಟ -38.04 ಮೀ.

*ಒಟ್ಟು ಸಾಮರ್ಥ್ಯ - 49.45 ಟಿಎಂಸಿ

*ಇಂದಿನ ನೀರಿನ ಮಟ್ಟ- 11.69 ಟಿಎಂಸಿ

*ಕಳೆದ ವರ್ಷದ ನೀರಿನ ಮಟ್ಟ - 42.34ಟಿಎಂಸಿ

*ಒಳಹರಿವು - 13449 ಕ್ಯೂಸೆಕ್‌

*ಹೊರಹರಿವು - 319 ಕ್ಯೂಸೆಕ್‌

2. ಆಲಮಟ್ಟಿ ಜಲಾಶಯ

*ಗರಿಷ್ಠ ನೀರಿನ ಮಟ್ಟ- 519.6

*ಒಟ್ಟು ಸಾಮರ್ಥ್ಯ- 123.08

*ಇಂದಿನ ನೀರಿನ ಮಟ್ಟ - 19.1

*ಕಳೆದ ವರ್ಷದ ನೀರಿನ ಮಟ್ಟ- 63.84

*ಒಳಹರಿವು- 0 ಕ್ಯೂಸೆಕ್‌

*ಹೊರಹರಿವು - 584 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 497.71

*ಒಟ್ಟು ಸಾಮರ್ಥ್ಯ - 105.79

*ಇಂದಿನ ನೀರಿನ ಮಟ್ಟ- 3.08

*ಕಳೆದ ವರ್ಷದ ನೀರಿನ ಮಟ್ಟ - 64.73

*ಒಳಹರಿವು - 274 ಕ್ಯೂಸೆಕ್‌

*ಹೊರಹರಿವು - 274 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 633.8

*ಒಟ್ಟು ಸಾಮರ್ಥ್ಯ - 37.73

*ಇಂದಿನ ನೀರಿನ ಮಟ್ಟ - 6.82

*ಕಳೆದ ವರ್ಷದ ನೀರಿನ ಮಟ್ಟ - 12.9

*ಒಳಹರಿವು - 0 ಕ್ಯೂಸೆಕ್‌

*ಹೊರಹರಿವು - 584 ಕ್ಯೂಸೆಕ್‌

5. ಲಿಂಗನಮಕ್ಕಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 554.44

*ಒಟ್ಟು ಸಾಮರ್ಥ್ಯ - 151.75

*ಇಂದಿನ ನೀರಿನ ಮಟ್ಟ - 17.7

*ಕಳೆದ ವರ್ಷದ ನೀರಿನ ಮಟ್ಟ - 43.23

*ಒಳಹರಿವು - 22,157 ಕ್ಯೂಸೆಕ್‌

*ಹೊರಹರಿವು - 0

6. ಕಬಿನಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 696.13

*ಒಟ್ಟು ಸಾಮರ್ಥ್ಯ - 19.52

*ಇಂದಿನ ನೀರಿನ ಮಟ್ಟ - 8.88

*ಕಳೆದ ವರ್ಷದ ನೀರಿನ ಮಟ್ಟ - 16.49

*ಒಳಹರಿವು - 16580 ಕ್ಯೂಸೆಕ್‌

*ಹೊರಹರಿವು - 500 ಕ್ಯೂಸೆಕ್‌

7. ಭದ್ರಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 657.73

*ಒಟ್ಟು ಸಾಮರ್ಥ್ಯ - 71.54

*ಇಂದಿನ ನೀರಿನ ಮಟ್ಟ - 26.66

*ಕಳೆದ ವರ್ಷದ ನೀರಿನ ಮಟ್ಟ - 49.07

*ಒಳಹರಿವು - 6030 ಕ್ಯೂಸೆಕ್‌

*ಹೊರಹರಿವು - 162 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

*ಗರಿಷ್ಠ ನೀರಿನ ಮಟ್ಟ - 662.91

*ಒಟ್ಟು ಸಾಮರ್ಥ್ಯ - 51

*ಇಂದಿನ ನೀರಿನ ಮಟ್ಟ - 4.23

*ಕಳೆದ ವರ್ಷದ ನೀರಿನ ಮಟ್ಟ - 8.98

*ಒಳಹರಿವು - 1216 ಕ್ಯೂಸೆಕ್‌

*ಹೊರಹರಿವು - 85

9. ಹೇಮಾವತಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 890.58

*ಒಟ್ಟು ಸಾಮರ್ಥ್ಯ - 37.1

*ಇಂದಿನ ನೀರಿನ ಮಟ್ಟ - 14.73

*ಕಳೆದ ವರ್ಷದ ನೀರಿನ ಮಟ್ಟ - 31.06

*ಒಳಹರಿವು - 7080 ಕ್ಯೂಸೆಕ್‌

*ಹೊರಹರಿವು - 200

10. ವರಾಹಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 594.36

*ಒಟ್ಟು ಸಾಮರ್ಥ್ಯ - 31.1

*ಇಂದಿನ ನೀರಿನ ಮಟ್ಟ - 3.53

*ಕಳೆದ ವರ್ಷದ ನೀರಿನ ಮಟ್ಟ - 6.43

*ಒಳಹರಿವು - 2725 ಕ್ಯೂಸೆಕ್‌

*ಹೊರಹರಿವು - 0

11. ಹಾರಂಗಿ ಜಲಾಶಯ

*ಗರಿಷ್ಠ ನೀರಿನ ಮಟ್ಟ - 871.38

*ಒಟ್ಟು ಸಾಮರ್ಥ್ಯ - 8.5

*ಇಂದಿನ ನೀರಿನ ಮಟ್ಟ - 3.53

*ಕಳೆದ ವರ್ಷದ ನೀರಿನ ಮಟ್ಟ - 6.74

*ಒಳಹರಿವು - 1671 ಕ್ಯೂಸೆಕ್‌

*ಹೊರಹರಿವು- 50 ಕ್ಯೂಸೆಕ್‌

ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿದ್ದೇ ತಡವಾಗಿ. ಅದರಲ್ಲೂ ಮೊದಲಿಗೆ ದಕ್ಷಿಣ ಕನ್ನಡ ಭಾಗದಲ್ಲಿ ಮುಂಗಾರು ಆರ್ಭಟ ಜೋರಾಗಿತ್ತು. ಆದರೆ ಇದೀಗ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಆವರಿಸಿದೆ. ಅಲ್ಲದೆ ಮುಂಗಾರು ಆವರಿಸಿದ ತಕ್ಷಣ ರೈತರ ಮುಖದಲ್ಲಿ ನಗು ಮೂಡಿದಂತಾಗಿದೆ. ಕೆಲವೆಡೆ ಬಿತ್ತನೆ ಕಾರ್ಯಕ್ಕೂ ಮುಂದಾಗಿದ್ದರೆ, ಇನ್ನು ಕೆಲವು ಕಡೆ ಅಂದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆ ಇಲ್ಲದೆ ಅನ್ನದಾತ ಮೋಡದ ಕಡೆ ಮುಖ ಮಾಡಿ ಕುಳಿತಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+