"ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಆಡಳಿತವೇ?!'

ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿಯುವುದೇ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಆಡಳಿತವೇ ಎನ್ನುವ ಆಕ್ರೋಶ ವ್ಯಕ್ತವಾಗಿದೆ.

ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕರ್ನಾಟಕದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲ, ರೈತರಿಗೆ ನೆರವಿಲ್ಲ, ಸರ್ಕಾರಿ ನೌಕರರಿಗೆ ಸಕಾಲಕ್ಕೆ ವೇತನವಿಲ್ಲ. ಈಗ ಬಡ ಮಕ್ಕಳಿಗೆ ಶಾಲೆಯಲ್ಲಿ ಒಂದು ಹೊತ್ತಿನ ಊಟ ಹಾಕಲೂ ನಿಮ್ಮ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Karnataka Mid-Day Meal R Ashoka Accuses Congress Government of Food Supply Shortage Schools

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಸಿವು ನೀಗಿಸಬೇಕಾದ ಅಕ್ಷರ ದಾಸೋಹ ಯೋಜನೆಯೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಬಲಿಯಾಗಿದೆ. ರಾಜ್ಯದ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಹೇಗೆ ಹದಗೆಟ್ಟಿದೆ ನೋಡಿ:

ಅಕ್ಕಿಗೂ ಪರದಾಟ: ಹಣ ಪಾವತಿ ವ್ಯವಸ್ಥೆಯ ತಾಂತ್ರಿಕ ದೋಷ ಹಾಗೂ ಎಸ್‌ಎನ್‌ಎಸ್ ಸ್ಪರ್ಶ್ ವ್ಯವಸ್ಥೆಯಲ್ಲಿನ ವಿಳಂಬದಿಂದ ಶಾಲೆಗಳಿಗೆ ಅಕ್ಕಿ ಪೂರೈಕೆ ಸ್ಥಗಿತಗೊಂಡಿದೆ. ಪರಿಣಾಮ, ಮಕ್ಕಳಿಗೆ ಊಟ ಬಡಿಸಲು ಅಕ್ಕಿಯಿಲ್ಲದೆ ಮುಖ್ಯಶಿಕ್ಷಕರು ಪಕ್ಕದ ಶಾಲೆಗಳಿಂದ ಅಕ್ಕಿಯನ್ನು ಎರವಲು ಪಡೆಯುವ ದುಸ್ಥಿತಿ ನಿರ್ಮಾಣವಾಗಿದೆ.

ಎಣ್ಣೆ, ಬೇಳೆಗೂ ಗತಿಯಿಲ್ಲ: ಕಳೆದ 8-10 ದಿನಗಳಿಂದ ಹಲವು ಶಾಲೆಗಳಿಗೆ ಬಿಸಿಯೂಟಕ್ಕೆ ಅಗತ್ಯವಾದ ಅಡುಗೆ ಎಣ್ಣೆ ಮತ್ತು ಬೇಳೆ ಪೂರೈಕೆಯಾಗಿಲ್ಲ. ಅಡುಗೆ ಕೋಣೆಗಳ ದಾಸ್ತಾನು ಖಾಲಿಯಾಗಿದ್ದು, ಮಕ್ಕಳಿಗೆ ಊಟ ಸಿದ್ಧಪಡಿಸುವುದೇ ಸವಾಲಾಗಿದೆ.

ಶಿಕ್ಷಕರೇ ಸಾಲಗಾರರು: ಸರ್ಕಾರ ಮಾಡಬೇಕಾದ ಕೆಲಸವನ್ನು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳಿಗೆ ಊಟ ತಪ್ಪಬಾರದೆಂಬ ಕಾರಣಕ್ಕೆ ತಮ್ಮ ಜೇಬಿನಿಂದ ಹಣ ಹಾಕಿ, ಸ್ಥಳೀಯ ಅಂಗಡಿಗಳಲ್ಲಿ ಸಾಲ ಮಾಡಿ ದಿನಸಿ ಖರೀದಿಸಿ ಬಿಸಿಯೂಟ ಮುಂದುವರಿಸುತ್ತಿದ್ದಾರೆ.

ಪಾಠ ಮಾಡುವ ಬದಲು ಆಹಾರಕ್ಕಾಗಿ ಅಲೆದಾಟ: ಪಾಠ ಮಾಡಬೇಕಾದ ಶಿಕ್ಷಕರು ಅಕ್ಕಿ, ಬೇಳೆ, ಎಣ್ಣೆಗಾಗಿ ಅಲೆದಾಡುವಂತಾಗಿದೆ. ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ಅಕ್ಕಿ ಎರವಲು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಆಡಳಿತ ವೈಫಲ್ಯದ ಪರಮಾವಧಿಯಲ್ಲವೇ ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನೆ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಗ್ಯಾರೆಂಟಿಗಳ ಪ್ರಚಾರಕ್ಕೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ನಿಮ್ಮಲ್ಲಿ, ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಎರಡು ಹೊತ್ತು ಊಟ ಒದಗಿಸಲು ಹಣವಿಲ್ಲವೇ? ಜಾಹೀರಾತುಗಳಿಗೆ ಇರುವ ಹಣ ಮಕ್ಕಳ ಅನ್ನದ ವಿಚಾರ ಬಂದಾಗ ಏಕೆ ಮಾಯವಾಗುತ್ತದೆ ಎಂದಿದ್ದಾರೆ. ಒಂದೆಡೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಭಾಷಣ ಮಾಡುತ್ತೀರಿ. ಮತ್ತೊಂದೆಡೆ, ಅದೇ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ವ್ಯವಸ್ಥೆಯನ್ನೂ ಸರಿಯಾಗಿ ನಿರ್ವಹಿಸಲಾಗದಷ್ಟು ನಿಮ್ಮ ಆಡಳಿತ ಕುಸಿದಿದೆ.

ಇದು ಕೇವಲ ಅಕ್ಕಿ, ಬೇಳೆ, ಎಣ್ಣೆಯ ಕೊರತೆಯಲ್ಲ. ಬಡ ಮಕ್ಕಳ ಶಿಕ್ಷಣ, ಪೌಷ್ಟಿಕತೆ ಮತ್ತು ಭವಿಷ್ಯದ ಬಗೆಗಿನ ನಿಮ್ಮ ಸರ್ಕಾರದ ಬೇಜವಾಬ್ದಾರಿತನದ ಪ್ರತಿಬಿಂಬ! ತಕ್ಷಣವೇ ಶಾಲೆಗಳಿಗೆ ಅಗತ್ಯವಿರುವ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಆಹಾರ ಸಾಮಗ್ರಿಗಳನ್ನು ಪೂರೈಸಿ.

ಪಾವತಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಶಿಕ್ಷಕರ ಮೇಲೆ ಬಿದ್ದಿರುವ ಅನಗತ್ಯ ಹೊರೆ ನಿವಾರಿಸಿ. ನೆನಪಿರಲಿ, ಗ್ಯಾರೆಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಕ್ಕೆ ಬಡ ಸರ್ಕಾರಿ ಶಾಲಾ ಮಕ್ಕಳ ತಟ್ಟೆಗೆ ಮಧ್ಯಾಹ್ನದ ಬಿಸಿಯೂಟದ ಗ್ಯಾರೆಂಟಿ ಖಾತರಿಪಡಿಸುವ ಜವಾಬ್ದಾರಿಯೂ ಇದೆ! ಯಾವ ಸರ್ಕಾರವೂ ಬಡ ಮಕ್ಕಳ ತಟ್ಟೆಯಿಂದ ಅನ್ನ ಕಸಿದುಕೊಳ್ಳುವಷ್ಟು ನಿರ್ದಯವಾಗಬಾರದು ಎಂದೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+