Karnataka Major Dams Water Level: ರಾಜ್ಯದ ಈ ಪ್ರಮುಖ ಜಲಾಶಯಗಳು ಭರ್ತಿ: ಅಕ್ಟೋಬರ್ 14ರಂದು ನೀರಿನ ಮಟ್ಟ ಎಷ್ಟಿದೆ?
Karnataka Reservoirs Water Level: ರಾಜ್ಯದಲ್ಲಿ ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿ ಆಗಿವೆ. ಕೆಲವೇ ಕೆಲವು ಮಾತ್ರ ತುಂಬುವ ಹಂತದಲ್ಲಿವೆ. ಹಾಗಾದ್ರೆ, ಇಂದು (ಅಕ್ಟೋಬರ್ 14) ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೃಷ್ಣರಾಜ ಸಾಗರ (KRS) ಸೇರಿದಂತೆ ಉಳಿದ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರೀ ಮಳೆ ಆರ್ಭಟದಿಂದ ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ತುಂಬಿ ಹರಿದಿವೆ. ಮತ್ತೊಂದೆಡೆ ಪ್ರಮುಖ ಜಲಾಶಯಗಳು ಕೂಡ ಭರ್ತಿಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಹೆಚ್ಚಿಸಿದೆ. ಯಾಕಂದ್ರೆ, ಕುಡಿಯಲು ಹಾಗೂ ಕೃಷಿ ಬಳಕೆಗೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಎದುರಾಗದಂತೆ ಆಗಿದೆ. ಇದೀಗ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕಲವೆಡೆ ಮಾತ್ರ ಆಗಾಗ ಮಳೆಯಾಗುತ್ತಿದೆ ಅಷ್ಟೇ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 124.70 ಅಡಿ
* ಒಳಹರಿವು - 9,880 ಕ್ಯೂಸೆಕ್
* ಹೊರಹರಿವು - 8,008 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,283.46 ಅಡಿ
* ಒಳಹರಿವು - 2,129 ಕ್ಯೂಸೆಕ್
* ಹೊರಹರಿವು - 825 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ 519.60 ಮೀಟರ್
* ಒಟ್ಟು ಸಾಮರ್ಥ್ಯ- 123.8 ಟಿಎಂಸಿ
* ಇಂದಿನ ನೀರಿನ ಮಟ್ಟ - 519.60 ಮೀಟರ್
* ಒಳಹರಿವು - 15,960 ಕ್ಯೂಸೆಕ್
* ಹೊರಹರಿವು - 15,960 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,626.6 ಅಡಿ
* ಒಳಹರಿವು - 15,265 ಕ್ಯೂಸೆಕ್
* ಹೊರಹರಿವು - 12,828 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.50 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,079.50 ಅಡಿ
* ಒಳಹರಿವು - 394 ಕ್ಯೂಸೆಕ್
* ಹೊರಹರಿವು - 394 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,815.90 ಅಡಿ
* ಒಳಹರಿವು - 4,606 ಕ್ಯೂಸೆಕ್
* ಹೊರಹರಿವು 5,636 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 184.1 ಅಡಿ
* ಒಳಹರಿವು - 3,204 ಕ್ಯೂಸೆಕ್
* ಹೊರಹರಿವು - 3,204 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,174.76 ಅಡಿ
* ಒಳಹರಿವು - 839 ಕ್ಯೂಸೆಕ್
* ಹೊರಹರಿವು - 1,158 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,917.45 ಅಡಿ
* ಒಳಹರಿವು - 7,996 ಕ್ಯೂಸೆಕ್
* ಹೊರಹರಿವು - 6,610 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,857.89 ಅಡಿ
* ಒಳಹರಿವು - 949 ಕ್ಯೂಸೆಕ್
* ಹೊರಹರಿವು - 1,000 ಕ್ಯೂಸೆಕ್
ಇಂದಿನ ಇಂದು ರಾಜ್ಯದಲ್ಲಿನ ಕೆಲವು ಜಲಾಶಯಗಳ ಒಳಹರಿವು ನಿನ್ನೆಗೆ ಹೋಲಿಕೆ ಮಾಡಿದರೆ ತುಸು ಏರಿಕೆಯಾಗಿದೆ. ಇನ್ನುಳಿದಂತೆ ಉಳಿದ ಜಲಾಶಯಗಳ ನೀರಿನ ಮಟ್ಟದ ಅಂಕಿಅಂಶಗಳಲ್ಲೂ ಸ್ವಲ್ಪ ಬದಲಾವಣೆ ಕಂಡುಬಂದಿದೆ ಅಷ್ಟೇ. ಆದರೂ ಈ ಬಾರಿ ಸುರಿದ ಮುಂಗಾರು ಮಳೆಗೆ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಇದರಿಂದ ರೈತರ ಮುಖದಲ್ಲಿ ಸಂತಸ ಹೆಚ್ಚಾಗಿದೆ.












Click it and Unblock the Notifications