Karnataka Reservoirs Water Level: ರಾಜ್ಯದಲ್ಲಿ ಕೆಆರ್‌ಎಸ್, ಕಬಿನಿ ಸೇರಿ ಯಾವೆಲ್ಲಾ ಪ್ರಮುಖ ಡ್ಯಾಂಗಳು ಭರ್ತಿ?
Karnataka Reservoirs Water Level: ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹಲವೆಡೆ ಪರಿಣಾಮ ಕೆರೆ-ಕಟ್ಟೆಗಳು, ನದಿಗಳು ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿವೆ. ಹಾಗೆಯೇ ಜಲಾಶಯಗಳ ಒಳಹರಿವು ಕೂಡ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು (ಜುಲೈ 24) ಕೆಆರ್‌ಎಸ್, ಕಬಿನಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ತಿಳಿಯಿರಿ.
ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅವಾಂತರಗಳು ಸೃಷ್ಟಿ ಆಗಿದ್ದು, ಜನಜೀವನ ಅಸ್ತವ್ಯಸ್ತವಾದ ಘಟನೆಗಳು ನಡೆದಿವೆ. ಮತ್ತೊಂದೆಡೆ, ಜಲಾಶಯಗಳಿಗೂ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲಿದೆ. ಈಗಾಗಲೇ ಕೆಆರ್‌ಎಸ್, ಕಬಿನಿ ಸೇರಿಂದತೆ ಹಲವು ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಹೆಚ್ಚಾದಂತಾಗಿದೆ.

1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 123.80 ಅಡಿ
* ಒಳಹರಿವು - 12,843 ಕ್ಯೂಸೆಕ್
* ಹೊರಹರಿವು - 10,755 ಕ್ಯೂಸೆಕ್
2. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,284 ಅಡಿ
* ಇಂದಿನ ನೀರಿನ ಮಟ್ಟ - 2,283.62 ಅಡಿ
* ಒಳಹರಿವು - 12,122 ಕ್ಯೂಸೆಕ್
* ಹೊರಹರಿವು - 12,000 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ 519.6 ಮೀಟರ್
* ಒಟ್ಟು ಸಾಮರ್ಥ್ಯ- 123.8 ಟಿಎಂಸಿ
* ಇಂದಿನ ನೀರಿನ ಮಟ್ಟ - 518.13 ಮೀಟರ್
* ಒಳಹರಿವು - 46,056 ಕ್ಯೂಸೆಕ್
* ಹೊರಹರಿವು - 35,848 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,633 ಅಡಿ
* ಒಟ್ಟು ಸಾಮರ್ಥ್ಯ - 105.79 ಟಿಎಂಸಿ
* ಇಂದಿನ ನೀರಿನ ಮಟ್ಟ- 1,625.23 ಅಡಿ
* ಒಳಹರಿವು - 26,291 ಕ್ಯೂಸೆಕ್
* ಹೊರಹರಿವು - 30,262 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,079.5 ಅಡಿ
* ಒಟ್ಟು ಸಾಮರ್ಥ್ಯ - 49.45 ಟಿಎಂಸಿ
* ಇಂದಿನ ನೀರಿನ ಮಟ್ಟ - 2,073.22 ಅಡಿ
* ಒಳಹರಿವು - 2,216 ಕ್ಯೂಸೆಕ್
* ಹೊರಹರಿವು - 1,244 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 1,819 ಅಡಿ
* ಒಟ್ಟು ಸಾಮರ್ಥ್ಯ - 151.75 ಟಿಎಂಸಿ
* ಇಂದಿನ ನೀರಿನ ಮಟ್ಟ - 1,805 ಅಡಿ
* ಒಳಹರಿವು - 3,145 ಕ್ಯೂಸೆಕ್
* ಹೊರಹರಿವು 4,868 ಕ್ಯೂಸೆಕ್
7. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 179.8 ಅಡಿ
* ಒಳಹರಿವು - 10,731 ಕ್ಯೂಸೆಕ್
* ಹೊರಹರಿವು - 8,451 ಕ್ಯೂಸೆಕ್
8. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,175 ಅಡಿ
* ಒಟ್ಟು ಸಾಮರ್ಥ್ಯ - 51 ಟಿಎಂಸಿ
* ಇಂದಿನ ನೀರಿನ ಮಟ್ಟ - 2,168.93 ಅಡಿ
* ಒಳಹರಿವು - 5,491 ಕ್ಯೂಸೆಕ್
* ಹೊರಹರಿವು - 4,272 ಕ್ಯೂಸೆಕ್
9. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,922 ಅಡಿ
* ಒಟ್ಟು ಸಾಮರ್ಥ್ಯ - 37.10 ಟಿಎಂಸಿ
* ಇಂದಿನ ನೀರಿನ ಮಟ್ಟ - 2,921.3 ಅಡಿ
* ಒಳಹರಿವು - 6,761 ಕ್ಯೂಸೆಕ್
* ಹೊರಹರಿವು - 6,700 ಕ್ಯೂಸೆಕ್
10. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 2,859 ಅಡಿ
* ಒಟ್ಟು ಸಾಮರ್ಥ್ಯ - 8.5 ಟಿಎಂಸಿ
* ಇಂದಿನ ನೀರಿನ ಮಟ್ಟ - 2,856.50 ಅಡಿ
* ಒಳಹರಿವು - 6,343 ಕ್ಯೂಸೆಕ್
* ಹೊರಹರಿವು - 6,162 ಕ್ಯೂಸೆಕ್
ರಾಜ್ಯದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಪ್ರಮುಖ ಜಲಾಶಯಗಳಲ್ಲಿ ಕೆಲವು ಈಗಾಗಲೇ ಭರ್ತಿಯಾಗಿದ್ದು, ಇನ್ನೂ ಕೆಲವು ತುಂಬುವ ಹಂತದಲ್ಲಿವೆ. ಮತ್ತೊಂದೆಡೆ ಇದೀಗ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾದ ಪರಿಣಾಮ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.












Click it and Unblock the Notifications