Karnataka Dam Water Level: ಮುಂದುವರೆದ ಮಳೆ- ಜೂನ್ 28ರಂದು KRS ಸೇರಿದಂತೆ ಪ್ರಮುಖ ಜಲಾಶಗಳ ನೀರಿನ ಮಟ್ಟ ಹೆಚ್ಚಳ
Karnataka Dam Water Level On May 28: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರೆದ್ದು, ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಲೇ ಇದೆ. ಹಾಗಾದರೆ ಇಂದು (ಜೂನ್ 28) ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಕಳೆದ ವರ್ಷ ಅಂದರೆ, 2023ರಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ಬರದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಜಲಮೂಲಗಳೆಲ್ಲ ಬತ್ತಿಹೋಗುವ ಹಂತವನ್ನು ತಲುಪಿದ್ದವು. ಆದರೆ 2024ರ ಜೂನ್ ಆರಂಭದಿಂದ ಮುಂಗಾರು ಚುರುಕು ಪಡೆದ ಹಿನ್ನೆಲೆ ಬಹುತೇಕ ಜಿಲ್ಲೆಗಳ ಜಲಮೂಲಗಳಿಗೆ ಜೀವಕಳೆ ಬಂದಂತಾಗಿದ್ದು, ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಇನ್ನು ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಇಂದು (ಜೂನ್ 28) ಎಷ್ಟಿದೆ ಎನ್ನುವ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 16.118 ಟಿಎಂಸಿ
* ಒಳಹರಿವು - 10,000 ಕ್ಯೂಸೆಕ್
* ಹೊರಹರಿವು - 478 ಕ್ಯೂಸೆಕ್
2. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 3.47 ಟಿಎಂಸಿ
* ಒಳಹರಿವು - 1,425 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 33.28 ಟಿಎಂಸಿ
* ಒಳಹರಿವು - 6,413 ಕ್ಯೂಸೆಕ್
* ಹೊರಹರಿವು - 430 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 5.11 ಟಿಎಂಸಿ
* ಒಳಹರಿವು - 582 ಕ್ಯೂಸೆಕ್
* ಹೊರಹರಿವು - 823 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.80 ಮೀಟರ್
* ಇಂದಿನ ನೀರಿನ ಮಟ್ಟ - 6.36 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 16.34 ಟಿಎಂಸಿ
* ಒಳಹರಿವು - 19,684 ಕ್ಯೂಸೆಕ್
* ಹೊರಹರಿವು - 1,577 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 11.31 ಟಿಎಂಸಿ
* ಒಳಹರಿವು - 1,697 ಕ್ಯೂಸೆಕ್
* ಹೊರಹರಿವು - 1,000 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 15.88 ಟಿಎಂಸಿ
* ಒಳಹರಿವು - 4,082 ಕ್ಯೂಸೆಕ್
* ಹೊರಹರಿವು - 344 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 8.84 ಟಿಎಂಸಿ
* ಒಳಹರಿವು - 2,712 ಕ್ಯೂಸೆಕ್
* ಹೊರಹರಿವು - 100 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 12.281 ಟಿಎಂಸಿ
* ಒಳಹರಿವು - 7,695 ಕ್ಯೂಸೆಕ್
* ಹೊರಹರಿವು - 250 ಕ್ಯೂಸೆಕ್












Click it and Unblock the Notifications