Karnataka Dam Water Level: ಮುಂದುವರಿದ ಮಳೆ- KRS ಸೇರಿದಂತೆ ಪ್ರಮುಖ ಜಲಾಶಗಳಿಗೆ ಜೀವಕಳೆ, ಮೇ 21ರ ನೀರಿನ ಮಟ್ಟ ಎಷ್ಟಿದೆ?
Karnataka Dam Water Level On May 21: ಇದೀಗ ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿರುವ ಹಿನ್ನೆಲೆ ಇಷ್ಟು ದಿನ ಬಿಸಿಲಿಗೆ ಬತ್ತಿಹೋಗುವ ಹಂತವನ್ನು ತಲುಪಿದ್ದ ಅನೇಕ ಜಲಮೂಲಗಳು ಸೇರಿದಂತೆ ಪ್ರಮುಖ ಜಲಾಶಯಗಳಿಗೂ ಜೀವಕಳೆ ಬಂದಂತಾಗಿದೆ. ಹಾಗಾದರೆ ಇದೀಗ ಇಂದು (ಮೇ 21) ಮೂರು ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಸೇರಿದಂತೆ ರಾಜ್ಯದ ಪ್ರಮುಖ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
2023ರಲ್ಲಿ ರಾಜ್ಯದಲ್ಲಿ ಮಳೆಯಿಲ್ಲದೆ ಭರದ ವಾತಾವರಣ ನಿರ್ಮಾಣವಾಗಿದ್ದ ಪರಿಣಾಮ ಜಲಮೂಲಗಳೆಲ್ಲ ನೆಲಕಚ್ಚಿ ಜನರು, ರೈತರು ಕಂಗಾಲಾಗಿದ್ದರು. ಇದೀಗ 2024 ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಬತ್ತಿಹೋದ ಜಲಮೂಲಗಳಿಗೆ ಜೀವ ಬಂದಂತಾಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಜನರ ಜೀವನಾಡಿಯಾದ ಕೃಷ್ಣರಾಜ ಸಾಗರ (KRS) ಜಲಾಶಯ ಸೇರಿದಂತೆ ಇನ್ನುಳಿದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಇಂದು ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
1. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಇಂದಿನ ನೀರಿನ ಮಟ್ಟ- 11.11 ಟಿಎಂಸಿ
* ಒಳಹರಿವು - 1,416 ಕ್ಯೂಸೆಕ್
* ಹೊರಹರಿವು - 270 ಕ್ಯೂಸೆಕ್
2. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 871.38 ಮೀಟರ್
* ಇಂದಿನ ನೀರಿನ ಮಟ್ಟ - 2.95 ಟಿಎಂಸಿ
* ಒಳಹರಿವು - 287 ಕ್ಯೂಸೆಕ್
* ಹೊರಹರಿವು - 200 ಕ್ಯೂಸೆಕ್
3. ಆಲಮಟ್ಟಿ ಜಲಾಶಯ
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ - 23.77 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 4,421 ಕ್ಯೂಸೆಕ್
4. ತುಂಗಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ- 3.39 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 45 ಕ್ಯೂಸೆಕ್
5. ಮಲಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 633.80 ಮೀಟರ್
* ಇಂದಿನ ನೀರಿನ ಮಟ್ಟ - 7.25 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
6. ಲಿಂಗನಮಕ್ಕಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 554.44 ಮೀಟರ್
* ಇಂದಿನ ನೀರಿನ ಮಟ್ಟ - 16.18 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 1,691 ಕ್ಯೂಸೆಕ್
7. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 696.13 ಮೀಟರ್
* ಇಂದಿನ ನೀರಿನ ಮಟ್ಟ - 6.20 ಟಿಎಂಸಿ
* ಒಳಹರಿವು - 91 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
8. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 657.73 ಮೀಟರ್
* ಇಂದಿನ ನೀರಿನ ಮಟ್ಟ - 13.56 ಟಿಎಂಸಿ
* ಒಳಹರಿವು - 1,347 ಕ್ಯೂಸೆಕ್
* ಹೊರಹರಿವು - 375 ಕ್ಯೂಸೆಕ್
9. ಘಟಪ್ರಭಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 662.91 ಮೀಟರ್
* ಇಂದಿನ ನೀರಿನ ಮಟ್ಟ - 13.13 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 140 ಕ್ಯೂಸೆಕ್
10. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 890.58 ಮೀಟರ್
* ಇಂದಿನ ನೀರಿನ ಮಟ್ಟ - 9.14 ಟಿಎಂಸಿ
* ಒಳಹರಿವು - 628 ಕ್ಯೂಸೆಕ್
* ಹೊರಹರಿವು - 250 ಕ್ಯೂಸೆಕ್












Click it and Unblock the Notifications