Karnataka GPSTR Result 2022 : ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಫಲಿತಾಂಶ ಪ್ರಕಟ: ಚೆಕ್ ಮಾಡುವುದು ಹೇಗೆ?

ಬೆಂಗಳೂರು, ಆಗಸ್ಟ್ 17: ಕರ್ನಾಟಕ ಶಿಕ್ಷಣ ಇಲಾಖೆಯು 15000 ಶಿಕ್ಷಕರ ನೇಮಕಾತಿಗಾಗಿ ಸಿಇಟಿ 2022 ಪರೀಕ್ಷೆಯನ್ನು ನಡೆಸಿದೆ. ಶಿಕ್ಷಕ ವೃತ್ತಿಗೆ ಆಯ್ಕೆಯಾಗಲು ಆಕಾಂಕ್ಷಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಂದು (ಆಗಸ್ಟ್ 17) ಸಂಜೆ ಆರು ಗಂಟೆಗೆ ಸಿಇಟಿಯ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಫಲಿತಾಂಶದ ವಿವರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್: https://www.schooleducation.kar.nic.in/ ಮೂಲಕ ಪಡೆಯಬಹುದು.

ಶಿಕ್ಷಕರ ನೇಮಕೈತಿಗಾಗಿ ಮೇ 2022 ರಂದು ಪರೀಕ್ಷೆಯನ್ನು ನಡೆಸಲಾಗಿತ್ತು. ಶಿಕ್ಷಕ ಹುದ್ದೆಗಾಗಿ ಲಕ್ಷಾಂತರ ಅಭ್ಯರ್ಥಿಗಳು ಸಿಇಟಿ ಪರೀಕ್ಷೆಯನ್ನು ಬರೆದಿದ್ದರು. ಸಿಇಟಿಯನ್ನು ಬರೆದು ಶಿಕ್ಷಕ ಹುದ್ದೆಗೆ ಆಯ್ಕೆ ಆಗುತ್ತೇವೆಯೇ. ತಮ್ಮ ಕ್ಯಾಟಗರಿಗೆ ಎಷ್ಟು ಪರ್ಸೆಂಟೇಜ್ ನಿಲ್ಲಬಹುದು ಅಂತೆಲ್ಲಾ ಕ್ಯಾಲ್ಕುಲೇಷನ್ ಹಾಕಲಾಗುತ್ತಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರಕ್ಕೆ ಸಂಜೆ 6ಕ್ಕೆ ಉತ್ತರ ಸಿಗಲಿದ್ದು. ಫಲಿತಾಂಶ ಪ್ರಕಟವಾಗಲಿದೆ.

 Karnataka Graduate Primary School Teacher Result 2022 will be announced On Today(August17)

ಶಿಕ್ಷಕರಾಗುವ ಕನಸನ್ನು ಹೊತ್ತು ಹಗಲು ರಾತ್ರಿ ಎನ್ನದೇ ಕಷ್ಟು ಪಟ್ಟು ಓದಿ ಸಿಇಟಿಯನ್ನು ಅತ್ಯುತ್ತಮವಾಗಿ ಮಾಡಿರುವ ವಿದ್ಯಾರ್ಥಿಗಳು ಆಸೆಗಣ್ಣಿನಿಂದ ಕಟ್ ಆಫ್ ಶೇಖಡವಾರು ಎಷ್ಟಕ್ಕೆ ನಿಲ್ಲಬಹುದ ಕಾಯುತ್ತಿದ್ದಾರೆ. ಧರ್ಮ, ಜಾತಿ, ಮೀಸಲಾತಿಯ ವ್ಯವಸ್ಥೆಯಲ್ಲಿ ಯಾರು ಸೆಲೆಕ್ಟ್ ಆಗುತ್ತಾರೆ ಎಂದು ಭಾವಿ ಶಿಕ್ಷಕರು ಎದುರು ನೋಡುತ್ತಿದ್ದಾರೆ.

 Karnataka Graduate Primary School Teacher Result 2022 will be announced On Today(August17)

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆ ಫಲಿತಾಂಶ:

ಶಿಕ್ಷಕರ ಹುದ್ದೆ ನೇಮಕಾತಿ 2022ರ ಪರೀಕ್ಷೆಯು ಮೇ21 ಮತ್ತು ಮೇ22 ನಡೆದಿದೆ. ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅಭ್ಯರ್ಥಿಗಳು ಬರೆದಿದ್ದಾರೆ. ಕರ್ನಾಟಕ ಶಿಕ್ಷಕರ ನೇಮಕಾತಿ ಹುದ್ದೆ 2022ರ ಪರೀಕ್ಷೆಗೆ 106083 ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿದ್ದವರು 31967 ಅಭ್ಯರ್ಥಿಗಳು. ಶಿಕ್ಷಕ ಹುದ್ದೆಗೆ ಅರ್ಜಿಗಳ ಪರಿಗಣನೆ ಆಗಿರುವುದು 74116 ಮಂದಿ ಅಭ್ಯರ್ಥಿಗಳದ್ದು. ಪರೀಕ್ಷೆಗೆ ಹಾಜರಾದವರ ಸಂಖ್ಯೆ 69159 ಅಭ್ಯರ್ಥಿಗಳು. ಪರೀಕ್ಷೆಗೆ ಗೈರು ಹಾಜರಾದವರು 4957 ಅಭ್ಯರ್ಥಿಗಳು ಅಂದರೆ 93% ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೇ 7% ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಎರಡನೇ ಪತ್ರಿಕೆಯನ್ನು ಬರೆಯುವಾಗಲು ಕೆಲ ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+