ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆದೇಶ, ಸಿಬಿಎಸ್ಇ ಸಂಸ್ಥೆ ಅಸಮಾಧಾನ

Posted By: ಅನುಷಾ ರವಿ
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 18: ಇಡೀ ರಾಜ್ಯದಲ್ಲಿನ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಒಂದು ವಿಷಯವಾಗಿ ಕಲಿಸಬೇಕು ಎಂದು ಕರ್ನಾಟಕ ಸರಕಾರ ಕಡ್ಡಾಯ ಮಾಡಿದೆ.

ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ ಸರಕಾರ ಸಿದ್ಧತೆ ಮಾಡಿಕೊಂಡಿಲ್ವೆ?

ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ, ದ್ವಿತೀಯ ಭಾಷೆಯನ್ನಾಗಿ ಕನ್ನಡಕ್ಕಾಗಿ ಬಳಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಸರ್ಕಾರದ ಆದೇಶಕ್ಕೆ ಸಿಬಿಎಸ್ಇ ವಿದ್ಯಾಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.

ಸಿದ್ದರಾಮಯ್ಯ ಸರ್ಕಾರದ ಈ ಮಹತ್ವದ ಆದೇಶವು ಹಂತ ಹಂತವಾಗಿ ಜಾರಿಗೆ ಬರಲಿದೆ. 2018-19ರ ಶೈಕ್ಷಣಿಕ ವರ್ಷದಿಂದ ಮೊದಲ ತರಗತಿಯಿಂದ 10ನೇ ತರಗತಿ ತನಕ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯವಾಗಲಿದೆ.

Karnataka govt makes Kannada compulsory in all schools, CBSE institutions unhappy

ಕನ್ನಡವನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಿದರೆ ಹೊರ ರಾಜ್ಯಗಳಿಂದ ವರ್ಗಾವಣೆ ಆಗಿ ಬರುವವರಿಗೆ ತುಂಬ ತೊಂದರೆಯಾಗುತ್ತದೆ. ಜತೆಗೆ ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿದೆ. ವಿದ್ಯಾರ್ಥಿಗಳು ಭಾಷೆ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕಾನೂನು ಸಮಸ್ಯೆ ಆಗುತ್ತದೆ.

ಕೇಂದ್ರೀಯ ಮಂಡಳಿ ಈ ಬಗ್ಗೆ ಸುತ್ತೋಲೆ ಅಥವಾ ನೋಟಿಸ್ ನೀಡಿ, ರಾಜ್ಯದ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ತೆಗೆದುಕೊಳ್ಳಲು ತಿಳಿಸಬೇಕು. ಆಲ್ಲಿ ತನಕ ಬದಲಾವಣೆ ಸಾಧ್ಯವಿಲ್ಲ ಎಂದು ಕರ್ನಾಟಕದಲ್ಲಿನ ಸಿಬಿಎಸ್ ಇ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸನ್ ಮುತ್ತುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಸರ್ಕಾರದೊಡನೆ ಚರ್ಚೆ ನಡೆಸಲಾಗುವುದು, ಯಾವ ಭಾಷೆ ಕಲಿಯಬೇಕು ಎಂಬ ಆಯ್ಕೆ ಮಕ್ಕಳು ಹಾಗೂ ಪೋಷಕರಿಗೆ ಬಿಟ್ಟಿದ್ದು, ಒತ್ತಾಯ ಪೂರ್ವಕವಾಗಿ ಆದೇಶ ಪಾಲಿಸಬೇಕಾದರೆ ಕಾನೂನು ಸಮರ ನಡೆಸಲಾಗುವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The state government, in an order, has made Kannada compulsory in all schools, private, aided or government, across boards- SSLC, ICSE, and CBSE. The move has received severe backlash from CBSE schools owners association.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ